Poco M4 Pro 4G: ಭಾರತಕ್ಕಿಂದು ಅತಿ ಕಡಿಮೆ ಬೆಲೆಯ ಪೋಕೋ M4 ಪ್ರೊ 4G ಸ್ಮಾರ್ಟ್‌ಫೋನ್ ಎಂಟ್ರಿ
5G ಸಾಮರ್ಥ್ಯದ ಪೋಕೋ M4 ಪ್ರೊ ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಿರುವ ಕಂಪನಿಯು ಇದೀಗ 4G ಸಾಮರ್ಥ್ಯದ ಪೋಕೋ M4 ಪ್ರೊ 4G (Poco M4 Pro 4G) ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಲು ತಯಾರಾಗಿದೆ. ನೂತನ ಪೋಕೋ M4 ಪ್ರೊ 4G ಸ್ಮಾರ್ಟ್‌ಫೋನ್ ಇಂದು ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ.
ಭಾರತದಲ್ಲಿ ಪೋಕೋ ಸಂಸ್ಥೆ ದೊಡ್ಡ ಮಟ್ಟದ ಮಾರುಕಟ್ಟೆಯನ್ನು ಹೊಂದಿಲ್ಲವಾದರೂ ಆಗಾಗ ಕಡಿಮೆ ಬೆಲೆಗೆ ಅತ್ಯುತ್ತಮ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತವೆ. ಇದೇರೀತಿ ಮೊನ್ನೆಯಷ್ಟೆ ಪೋಕೋ ದೇಶದಲ್ಲಿ ತನ್ನ ಹೊಸ ಪೋಕೋ ಎಮ್4 ಪ್ರೊ 5G (Poco M4 Pro 5G) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿ ಸೇಲ್ ಆರಂಭಿಸಿತ್ತು. ದೇಶದಲ್ಲಿ ಇದಕ್ಕೆ ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ. ಕಡಿಮೆ ಬೆಲೆಯ ಈ 5G ಫೋನ್ ಭರ್ಜರಿ ಸೇಲ್ ಆಗುತ್ತಿದೆ. ಹೀಗಿರುವಾಗ ಪೋಕೋ ಸಂಸ್ಥೆ ಇದೀಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಮೊನ್ನೆಯಷ್ಟೆ 5G ಸಾಮರ್ಥ್ಯದ ಪೋಕೋ M4 ಪ್ರೊ ಸ್ಮಾರ್ಟ್‌ಫೋನನ್ನು (Smartphone) ಬಿಡುಗಡೆ ಮಾಡಿರುವ ಕಂಪನಿಯು ಇದೀಗ 4G ಸಾಮರ್ಥ್ಯದ ಪೋಕೋ M4 ಪ್ರೊ 4G (Poco M4 Pro 4G) ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಲು ತಯಾರಾಗಿದೆ. ನೂತನ ಪೋಕೋ M4 ಪ್ರೊ 4G ಸ್ಮಾರ್ಟ್‌ಫೋನ್ ಇಂದು ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ.
ಏನು ವಿಶೇಷತೆ?:
ಪೋಕೋ M4 ಪ್ರೊ 4G ಸ್ಮಾರ್ಟ್‌ಫೋನ್ 6.4 ಇಂಚಿನ ಫುಲ್ HD+ ಡಾಟ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ನೊಂದಿಗೆ ಬರಲಿದೆ ಎನ್ನಲಾಗಿದೆ. ಇದು ಮೀಡಿಯಾ ಟೆಕ್ ಹೀಲಿಯೊ G96 CPU ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 11 ಅನ್ನು ಆಧರಿಸಿದ MIUI 12.5 ನಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಮುಂದಿನ ಕೆಲವು ವಾರಗಳಲ್ಲಿ MIUI 13 ಅನ್ನು ಸ್ವೀಕರಿಸುವ ಭರವಸೆ ಇದೆ. ಮೆಮೊರಿ ಕಾರ್ಡ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ
ಈ ಸ್ಮಾರ್ಟ್‌ಫೋನ್ ತ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ f/1.8 ಲೆನ್ಸ್ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಅನ್ನು ಒಳಗೊಂಡಿದೆ. 2 ಮೆಗಾಫಿಕ್ಸೆಲ್ ಮ್ಯಾಕ್ರೊ ಸೆನ್ಸಾರ್ನ ಮೂರನೇ ಕ್ಯಾಮೆರಾ ಕೂಡ ಇದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಇದು f/2.45 ಲೆನ್ಸ್ ಅನ್ನು ಪಡೆದಿದೆ.
ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ಪ್ರೊ ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi, ಬ್ಲೂಟೂತ್ v5.1, GPS/ A-GPS, ಇನ್ಫ್ರಾರೆಡ್ (IR) ಬ್ಲಾಸ್ಟರ್, USB ಟೈಪ್-C, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಬೆಂಬಲಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಒಳಗೊಂಡಿದೆ. Poco M4 Pro 5G ಫೋನ್ ಬೆಲೆ 15 ಸಾವಿರಗಳಿಂದ ಆರಂಭವಾಗಿರುವುದರಿಂದ ಈ ಪೋನಿನ ಬೆಲೆಯಲ್ಲಿ ಮತ್ತಷ್ಟು ಕಡಿಮೆ ಬೆಲೆಯಲ್ಲಿ ನಿರೀಕ್ಷಿಸಬಹುದು.
WhatsApp: ವಾಟ್ಸ್ಆ್ಯಪ್ ಗ್ರೂಪ್ ಕಾಲ್ನಲ್ಲಿ ಬರುತ್ತಿದೆ ನೀವು ಊಹಿಸಲಾಗದ ಫೀಚರ್: ಏನದು ಗೊತ್ತೇ?