Nubia Z40 Pro: 80W ಸೂಪರ್ ಫಾಸ್ಟ್ ಚಾರ್ಜರ್, ಬಲಿಷ್ಠ ಪ್ರೊಸೆಸರ್, ಬೊಂಬಾಟ್ ಕ್ಯಾಮೆರಾ: ಎಲ್ಲವೂ ಇದೆ ಈ ಹೊಸ ಫೋನ್​ನಲ್ಲಿ

Fast Charging Smartphones: ZTE ಹೊಸ ನುಬಿಯಾ Z40 ಪ್ರೊ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಅತ್ಯಂತ ಬಲಿಷ್ಠವಾದ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್‌ ಅನ್ನು ಅಳವಡಿಸಲಾಗಿದೆ. ಅಲ್ಲದೆ ಬರೋಬ್ಬರಿ 80W ವೇಗದ ಚಾರ್ಜಿಂಗ್‌ ಬೆಂಬ ಪಡೆದುಕೊಂಡಿರುವುದು ಹುಬ್ಬೇರುವಂತೆ ಮಾಡಿದೆ.

Nubia Z40 Pro: 80W ಸೂಪರ್ ಫಾಸ್ಟ್ ಚಾರ್ಜರ್, ಬಲಿಷ್ಠ ಪ್ರೊಸೆಸರ್, ಬೊಂಬಾಟ್ ಕ್ಯಾಮೆರಾ: ಎಲ್ಲವೂ ಇದೆ ಈ ಹೊಸ ಫೋನ್​ನಲ್ಲಿ
Nubia Z40 Pro
Follow us
TV9 Web
| Updated By: Vinay Bhat

Updated on: Feb 26, 2022 | 1:56 PM

ಜಾಗತಿಕ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ZTE ತನ್ನ ನುಬಿಯಾ ಬ್ರಾಂಡ್ ಅಡಿಯಲ್ಲಿ ಈಗಾಗಲೇ ಕೆಲ ಫೋನ್​ಗಳನ್ನು ಬಿಡುಗಡೆ ಮಾಡಿ ಯಶಸ್ಸು ಸಾಧಿಸಿದೆ. ಈವರೆಗೆ ಹೆಚ್ಚು ಬಜೆಟ್ ಬೆಲೆಯ ಸ್ಮಾರ್ಟ್​ಫೋನ್​​ಗಳನ್ನು ಲಾಂಚ್ ಮಾಡಿದ್ದ ಕಂಪನಿ ಸದ್ಯ ಇದೀಗ ಮಧ್ಯಮ ಬೆಲೆಗೆ ಹೊಸ ನುಬಿಯಾ Z40 ಪ್ರೊ (Nubia Z40 Pro) ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಕಳೆದ ವರ್ಷ ನುಬಿಯಾ Z30 ಪ್ರೊ ಅನಾವರಣ ಮಾಡಿ ಭರ್ಜರಿ ಸೇಲ್ ಆದ ಹಿನ್ನಲೆಯನ್ನು ಇದೀಗ ಮುಂದಿನ ಆವೃತ್ತಿಯನ್ನು ಪರಿಚಯಿಸಿದೆ. ಇದರಲ್ಲಿ ಅತ್ಯಂತ ಬಲಿಷ್ಠವಾದ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್‌ ಅನ್ನು ಅಳವಡಿಸಲಾಗಿದೆ. ಅಲ್ಲದೆ ಬರೋಬ್ಬರಿ 80W ವೇಗದ ಚಾರ್ಜಿಂಗ್‌ ಬೆಂಬ ಪಡೆದುಕೊಂಡಿರುವುದು ಹುಬ್ಬೇರುವಂತೆ ಮಾಡಿದೆ. ಹಾಗಾದ್ರೆ ಇದರ ಬೆಲೆ ಎಷ್ಟು?, ಏನು ವಿಶೇಷತೆ ಎಂಬುದನ್ನು ನೋಡೋಣ.

ನುಬಿಯಾ Z40 ಪ್ರೊ ಸ್ಮಾರ್ಟ್‌ಫೋನ್‌ 1,080×2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.67 ಇಂಚಿನ ಫುಲ್‌ ಹೆಚ್‌ಡಿ+ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು 144Hz ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿದೆ.  ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್‌ ಹೊಂದಿದೆ. ಇದು ಆಂಡ್ರಾಯ್ಡ್ 12 ನಲ್ಲಿ ಕಂಪನಿಯ MyOS 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಬಲವನ್ನು ಒಳಗೊಂಡಿದೆ.

ಈ ಫೋನಿನ ಮತ್ತೊಂದು ಹೈಲೇಟ್ ಕ್ಯಾಮೆರಾ ಕೂಡ ಹೌದು. ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ ಸೋನಿ IMX 787 ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್‌ ಹೊಂದಿದೆ. ಮೂರನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಕ್ಯಾಮೆರಾವನ್ನು ಒಐಎಸ್‌ನೊಂದಿಗೆ ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ನುಬಿಯಾ Z40 ಪ್ರೊ ಸ್ಮಾರ್ಟ್‌ಫೋನ್‌ 5,000mAh ಬ್ಯಾಟರಿಯನ್ನು ಹೊಂದಿದೆ. ಇದು USB ಟೈಪ್-ಸಿ ಮೂಲಕ 80W ವೇಗದ ಚಾರ್ಜಿಂಗ್‌ಗೆ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ 5.2, ಮತ್ತು NFC ಸೇರಿವೆ. ಈ ಸ್ಮಾರ್ಟ್‌ಫೋನ್‌ ಸದ್ಯಕ್ಕೆ ಚೀನಾದಲ್ಲಷ್ಟೆ ಬಿಡುಗಡೆ ಆಗಿದೆ. ಭಾರತಕ್ಕೂ ಇದು ಕಾಲಿಡಲಿದ್ದು ಆದರೆ, ಯಾವಾಗ ಎಂಬ ಬಗ್ಗೆ ಕಂಪನಿ ಇನ್ನೂ ಬಹಿರಂಗ ಪಡಿಸಿಲ್ಲ. ಚೀನಾದಲ್ಲಿ 8GB RAM ಮತ್ತು 128GB RAM ಸ್ಟೋರೇಜ್ ಮಾದರಿಗೆ CNY 3,399, ಭಾರತದಲ್ಲಿ ಇದರ ಬೆಲೆ ಅಂದಾಜು 40,600 ರೂ. ಎನ್ನಬಹುದು.

ಹೊಚ್ಚ ಹೊಸ ಸ್ಮಾರ್ಟ್​ಫೋನ್​ಗಳು ಅತಿ ಕಡಿಮೆ ಬೆಲೆಗೆ: ಅಮೆಜಾನ್​ನಲ್ಲಿ ಫ್ಯಾಬ್‌ ಫೋನ್ಸ್‌ ಫೆಸ್ಟ್‌

iPhone 12, iPhone 12 Mini: ಆ್ಯಪಲ್ ಕಂಪನಿಯಿಂದ ಬಂಪರ್ ಕೊಡುಗೆ: ಐಫೋನ್ 12, ಐಫೋನ್ 12 ಮಿನಿ ಮೇಲೆ ಭರ್ಜರಿ ಡಿಸ್ಕೌಂಟ್