ಏನಿದು ವಾಟ್ಸಾಪ್​ ಹೊಸ ಪಾಲಿಸಿ? ನಿಮ್ಮ ಖಾಸಗಿ ಮಾಹಿತಿ ಸೋರಿಕೆ ಆಗೋದು ಇನ್ನೂ ಸುಲಭ!

| Updated By: ಸಾಧು ಶ್ರೀನಾಥ್​

Updated on: Jan 09, 2021 | 5:47 PM

ನಿಮಗೆ ಹೊಸ ನೀತಿ ಒಪ್ಪಿಕೊಳ್ಳಲು ಫೆಬ್ರವರಿ 8ರವರೆಗೆ ಕಾಲಾವಕಾಶ ಇದೆ. ಫೆಬ್ರುವರಿ 8ರ ಒಳಗೆ ನೀವು ನೂತನ ನೀತಿ ಒಪ್ಪಬೇಕು. ಇಲ್ಲ ಎಂದಾದರೆ ಬಳಕೆದಾರರು ವಾಟ್ಸಾಪ್ ಬಳಸಲು ಸಾಧ್ಯವಾಗುವುದಿಲ್ಲ.

ಏನಿದು ವಾಟ್ಸಾಪ್​ ಹೊಸ ಪಾಲಿಸಿ? ನಿಮ್ಮ ಖಾಸಗಿ ಮಾಹಿತಿ ಸೋರಿಕೆ ಆಗೋದು ಇನ್ನೂ ಸುಲಭ!
ಸಾಂದರ್ಭಿಕ ಚಿತ್ರ
Follow us on

ಬಳಕೆದಾರರ ಮಾಹಿತಿ ಕದಿಯುತ್ತಿದೆ ಎನ್ನುವ ಆರೋಪ ಫೇಸ್​ಬುಕ್​ಗೆ ಹೊಸದಲ್ಲ. ಈ ವಿಚಾರದಲ್ಲಿ ಮಾರ್ಕ್​​ ಜುಕರ್​ಬರ್ಗ್​ ಸ್ಪಷ್ಟನೆ ನೀಡುತ್ತಲೇ ಬಂದಿದ್ದಾರೆ. ಈಗ ಫೇಸ್​ಬುಕ್​ ಒಡೆತನದ ವಾಟ್ಸಾಪ್​ ಹೊಸ ನೀತಿ ಜಾರಿಗೆ ತಂದಿದ್ದು, ಇದರನ್ವಯ ವಾಟ್ಸಾಪ್​ ಬಳಕೆದಾರರ ಪ್ರಮುಖ ಮಾಹಿತಿಯನ್ನು ಫೇಸ್​ಬುಕ್​ ಹಾಗೂ ಇನ್​ಸ್ಟಾಗ್ರಾಂ ಜತೆ ಹಂಚಿಕೊಳ್ಳಬಹುದಾಗಿದೆ.

ಮಂಗಳವಾರ ಬಂದಿತ್ತು ನೋಟಿಫಿಕೇಷನ್​
ವಾಟ್ಸಾಪ್​ ಬಳಕೆದಾರರಿಗೆ ಮಂಗಳವಾರ ನೋಟಿಫಿಕೇಷನ್​ ಬಂದಿತ್ತು. ಈ ನೋಟಿಫಿಕೇಷ್​​ನಲ್ಲಿ ಬದಲಾದ ಪಾಲಿಸಿ ಬಗ್ಗೆ ವಿವರಿಸಲಾಗಿತ್ತು. ಹೊಸ ನಿಯಮಗಳನ್ನು ಒಪ್ಪಿ (Accept) ಅಥವಾ ನಂತರ ಒಪ್ಪಿ (Accept later) ಎನ್ನುವ ಆಯ್ಕೆ ನೀಡಲಾಗಿತ್ತು.

ನಿಮಗೆ ಹೊಸ ನೀತಿ ಒಪ್ಪಿಕೊಳ್ಳಲು ಫೆಬ್ರವರಿ 8ರವರೆಗೆ ಕಾಲಾವಕಾಶ ಇದೆ. ಫೆಬ್ರುವರಿ 8ರ ಒಳಗೆ ನೀವು ನೂತನ ನೀತಿ ಒಪ್ಪಬೇಕು. ಇಲ್ಲ ಎಂದಾದರೆ ಬಳಕೆದಾರರು ವಾಟ್ಸಾಪ್ ಬಳಸಲು ಸಾಧ್ಯವಾಗುವುದಿಲ್ಲ.

ಯಾವ ಯಾವ ಮಾಹಿತಿಗೆ ಕನ್ನ?
ವಾಟ್ಸಾಪ್​ ಹೊಸ ನೀತಿಯ ಪ್ರಕಾರ ಅನೇಕ ಮಾಹಿತಿ ನಿಮ್ಮ ಮಾಹಿತಿ ಪಡೆದುಕೊಳ್ಳುತ್ತಾರೆ. ವಾಟ್ಸಾಪ್​ ಬ್ಯಾಟರಿ ಪ್ರಮಾಣ, ಸಿಗ್ನಲ್​ ಸಾಮರ್ಥ್ಯ, ಆ್ಯಪ್​ ವರ್ಷನ್​, ಬ್ರೌಸಿಂಗ್​ ಹಿಸ್ಟರಿ, ಮೊಬೈಲ್​ ನೆಟ್ವರ್ಕ್​, ಮೊಬೈಲ್​ ಸಂಖ್ಯೆ, ಮೊಬೈಲ್​ ಆಪರೇಟರ್​, ಐಎಸ್​ಪಿ, ನಿಮ್ಮ ಭಾಷೆ, ಟೈಮ್​ ಜೋನ್​, ವಹಿವಾಟಿನ ಮಾಹಿತಿ, ಐಪಿ ಅಡ್ರೆಸ್​ ಸೇರಿ ಇತರ ಮಾಹಿತಿಯನ್ನು ವಾಟ್ಸಾಪ್ ಇದೀಗ ಫೇಸ್​ಬುಕ್​ ಹಾಗೂ ಇನ್​​ಸ್ಟಾಗ್ರಾಂ ಜೊತೆ ಹಂಚಿಕೊಳ್ಳಲಿದೆ.

ಟೆಲಿಗ್ರಾಂಗೆ ಬೇಡಿಕೆ
ವಾಟ್ಸಾಪ್​ ವಿಶ್ವಾದ್ಯಂತ 250 ಕೋಟಿ ಬಳಕೆದಾರರನ್ನು ಹೊಂದಿದೆ. ಈಗ ವಾಟ್ಸಾಪ್​ ನೀತಿ ಬದಲಿಸಿದ ಬೆನ್ನಲ್ಲೇ ಅನೇಕ ಬಳಕೆದಾರರು ಟೆಲಿಗ್ರಾಂ ಹಾಗೂ ಇತರ ಮೆಸೆಜಿಂಗ್ ಆ್ಯಪ್​ಗಳತ್ತ ವಾಲುತ್ತಿದ್ದಾರೆ.

ಶೀಘ್ರ ಈ ವರ್ಷನ್​ ಮೊಬೈಲ್​ಗಳಲ್ಲಿ ವಾಟ್ಸಾಪ್​ ಕಾರ್ಯ ಸ್ಥಗಿತ!