WhatsApp: ಇನ್ನುಂದೆ ಸ್ಟೇಟಸ್ 24 ಗಂಟೆ ಮಾತ್ರ ಅಲ್ಲ: ವಾಟ್ಸ್​ಆ್ಯಪ್​ನಿಂದ ಬೆರಗುಗೊಳಿಸುವ ಅಪ್ಡೇಟ್

WhatsApp may extend status duration: ವಾಟ್ಸಾಪ್ ಅಪ್‌ಡೇಟ್‌ಗಳ ಬಗ್ಗೆ ಸದಾ ಮಾಹಿತಿಯನ್ನು ತಿಳಿಸುವ WABetaInfo ನ ವರದಿಯ ಪ್ರಕಾರ, ಕಂಪನಿಯು ಬಳಕೆದಾರರು ತಮ್ಮ ಸ್ಟೇಟಸ್ ಅನ್ನು ಎರಡು ವಾರಗಳವರೆಗೆ ಲೈವ್ ಆಗಿ ಇರಿಸಲು ಅನುಮತಿಸುವ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಬಳಕೆದಾರರು ತಮ್ಮ ಸ್ಟೇಟಸ್ ಗೋಚರಿಸುವ ಅವಧಿಯನ್ನು ನಿಗದಿ ಪಡಿಸುವ ಆಯ್ಕೆಯನ್ನು ಸಹ ಹೊಂದಿರುತ್ತಾರೆ ಎನ್ನಲಾಗಿದೆ.

WhatsApp: ಇನ್ನುಂದೆ ಸ್ಟೇಟಸ್ 24 ಗಂಟೆ ಮಾತ್ರ ಅಲ್ಲ: ವಾಟ್ಸ್​ಆ್ಯಪ್​ನಿಂದ ಬೆರಗುಗೊಳಿಸುವ ಅಪ್ಡೇಟ್
WhatsApp Status Update

Updated on: Sep 29, 2023 | 2:23 PM

2 ಬಿಲಿಯನ್ ಜಾಗತಿಕ ಬಳಕೆದಾರರನ್ನು ಹೊಂದಿರುವ ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ (WhatsApp) ದಿನಕ್ಕೊಂದು ನೂತನ ಫೀಚರ್​ಗಳನ್ನು ಘೋಷಿಸುತ್ತಿದೆ. ನೂತನ ಅಪ್ಡೇಟ್​ಗಳನ್ನು ನೀಡಿ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗುತ್ತಿರುವ ವಾಟ್ಸ್​ಆ್ಯಪ್ ಇದೀಗ ಬೆರಗುಗೊಳಿಸುವ ಅಪ್ಡೇಟ್ ನೀಡಲು ಮುಂದಾಗಿದೆ. ವಾಟ್ಸ್​ಆ್ಯಪ್​ನಲ್ಲಿ ಪ್ರಸ್ತುತ ಬಳಕೆದಾರರು ತಮ್ಮ ಸ್ಟೇಟಸ್ ಅನ್ನು 24 ಗಂಟೆಗಳವರೆಗೆ ಇರುವ ರೀತಿಯಲ್ಲಿ ಪೋಸ್ಟ್ ಮಾಡಬಹುದು. ಆದರೆ ಇತ್ತೀಚಿನ ವರದಿಯ ಪ್ರಕಾರ ಈ 24 ಗಂಟೆಗಳ ಅವಧಿಯನ್ನು ವಾಟ್ಸ್​ಆ್ಯಪ್​ ವಿಸ್ತರಿಸಲಿದೆಯಂತೆ.

ವಾಟ್ಸ್​ಆ್ಯಪ್ ಅಪ್‌ಡೇಟ್‌ಗಳ ಬಗ್ಗೆ ಸದಾ ಮಾಹಿತಿಯನ್ನು ತಿಳಿಸುವ WABetaInfo ನ ವರದಿಯ ಪ್ರಕಾರ, ಕಂಪನಿಯು ಬಳಕೆದಾರರು ತಮ್ಮ ಸ್ಟೇಟಸ್ ಅನ್ನು ಎರಡು ವಾರಗಳವರೆಗೆ ಲೈವ್ ಆಗಿ ಇರಿಸಲು ಅನುಮತಿಸುವ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಬಳಕೆದಾರರು ತಮ್ಮ ಸ್ಟೇಟಸ್ ಗೋಚರಿಸುವ ಅವಧಿಯನ್ನು ನಿಗದಿ ಪಡಿಸುವ ಆಯ್ಕೆಯನ್ನು ಸಹ ಹೊಂದಿರುತ್ತಾರೆ ಎನ್ನಲಾಗಿದೆ.

25,000 ರೂ. ಗಿಂತ ಕಡಿಮೆ ಬೆಲೆಗೆ ನಥಿಂಗ್ ಫೋನ್: ಬಿಗ್ ಬಿಲಿಯನ್ ಡೇಸ್‌ನಲ್ಲಿ ಊಹಿಸಲಾಗದ ಆಫರ್

ಇದನ್ನೂ ಓದಿ
ಬಿಗ್ ಬಿಲಿಯನ್ ಡೇಸ್ ಆರಂಭದ ಮುನ್ನವೇ ಬಂಪರ್ ಆಫರ್
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್: ಫೋನ್ ಬೇಕಿದ್ದರೆ ಇದರಲ್ಲಿ ಖರೀದಿಸಿ
ವಿವೋ T2 ಪ್ರೊ 5G ಫೋನ್ ಇಂದಿನಿಂದ ಖರೀದಿಗೆ ಲಭ್ಯ

ಮುಂಬರುವ ಅಪ್‌ಡೇಟ್‌ನಲ್ಲಿ, ವಾಟ್ಸ್​ಆ್ಯಪ್​ ಬಳಕೆದಾರರಿಗೆ ಸ್ಟೇಟಸ್ ವಿಭಾಗದಲ್ಲಿ ನಾಲ್ಕು ಅವಧಿಯ ಆಯ್ಕೆಗಳನ್ನು ಒದಗಿಸುವ ನಿರೀಕ್ಷೆಯಿದೆ: 24 ಗಂಟೆಗಳು, 3 ದಿನಗಳು, 1 ವಾರ ಮತ್ತು 2 ವಾರಗಳು. ಇದು ಬಳಕೆದಾರರು ತಮ್ಮ ಸ್ಟೇಟಸ್ ಅನ್ನು ಎಷ್ಟು ಸಮಯದವರೆಗೆ ವೀಕ್ಷಿಸಲು ಲಭ್ಯವಾಗಬೇಕೆಂದು ಬಯಸುತ್ತಾರೆ ಎಂಬುದರ ಕುರಿತು ಆಗಿದೆ.

ವಾಟ್ಸ್​ಆ್ಯಪ್​ನಲ್ಲಿ ಫಿಲ್ಟರ್ ಆಯ್ಕೆ

ಸದ್ಯದಲ್ಲೇ ವಾಟ್ಸ್​ಆ್ಯಪ್​ನಲ್ಲಿ ಫಿಲ್ಟರ್ ಆಯ್ಕೆ ಬರಲಿದ್ದು, ಇದು ಚಾಟ್ ಲಿಸ್ಟ್​ನಲ್ಲಿ ಮಹತ್ವದ ಬದಲಾವಣೆ ತರಲಿದೆ. ವಾಟ್ಸ್​ಆ್ಯಪ್ ಬೀಟಾ 2.23.14.17 ಅಪ್ಡೇಟ್​ನಲ್ಲಿ ಇದು ಕಂಡುಬಂದಿದೆ. ಈ ಹೊಸ ಟೂಲ್ ಬಗ್ಗೆ ಸ್ಕ್ರೀನ್ ಶಾಟ್ ಕೂಡ ಹರಿದಾಡುತ್ತಿದೆ. ಈ ಆಯ್ಕೆಯ ಮೂಲಕ ಚಾಟ್ ಲಿಸ್ಟ್​ ಅನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಫಿಲ್ಟರ್​ನಲ್ಲಿ ಮೂರು ಆಯ್ಕೆಗಳು ಇರಲಿದೆ. ಅನ್​ರೀಡ್ ಮೆಸೇಜೆಸ್, ವೈಯಕ್ತಿಕ ಸಂಭಾಷಣೆಗಳು ಮತ್ತು ವ್ಯವಹಾರ ಸಂಭಾಷಣೆಗಳು ಹೀಗೆ ಮೂರು ಆಯ್ಕೆಗಳು ಇರಲಿದೆ. ವಾಟ್ಸ್​ಆ್ಯಪ್​ ಮೇಲ್ಬಾಗದ ಬಲ ಮೂಲೆಯಲ್ಲಿ ಈ ಫಿಲ್ಟನ್ ಬಟನ್ ಇರಲಿದೆ ಎಂದು ಹೇಳಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ