ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಮೆಟಾ (Meta) ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ (WhatsApp) ಈಗಾಗಲೇ ಹೊಸ ಹೊಸ ಫೀಚರ್ಗಳನ್ನು ಪರಿಚಯಿಸುತ್ತಿದೆ. ಮೊನ್ನೆಯಷ್ಟೆ ಬಹುನಿರೀಕ್ಷಿತ ಮೆಸೇಜ್ ರಿಯಾಕ್ಷನ್ ಫೀಚರ್ ಅನ್ನು ಬಳಕೆದಾರರಿಗೆ ನೀಡಿ ಸಂತಸಪಡಿಸಿತ್ತು. ಇದೀಗ ಮತ್ತೊಂದು ಅಪ್ಡೇಟ್ಗೆ ವಾಟ್ಸ್ಆ್ಯಪ್ ತಯಾರಾಗಿದೆ. ವಾಟ್ಸ್ಆ್ಯಪ್ ತನ್ನ ಮೆಸೆಜ್ ಕಳುಹಿಸುವಿಕೆಯ ಅಪ್ಲಿಕೇಶನ್ ಚಾಟ್ ಫಿಲ್ಟರ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ತಿಳಿದು ಬಂದಿದೆ. ಈ ಆಯ್ಕೆಯು ಬಳಕೆದಾರರಿಗೆ ಚಾಟ್‌ಗಳನ್ನು ಸರಳ ಮತ್ತು ತ್ವರಿತ ರೀತಿಯಲ್ಲಿ ಸರ್ಚ್ ಮಾಡಲು ಅನುವು ಮಾಡಿಕೊಡುತ್ತದೆ. ಮುಂದೆ ಬರಲಿರುವ ಈ ಹೊಸ ಫೀಚರ್ ಅನ್ನು ವಾಟ್ಸ್ಆ್ಯಪ್ ಬೇಟಾಇನ್ಫೋ(WABetaInfo) ವೆಬ್‌ಸೈಟ್ ಗುರುತಿಸಿದೆ. ಈಗಾಗಲೇ ಈ ಆಯ್ಕೆ ಚಾಟ್ ಫಿಲ್ಟರ್ ಆಯ್ಕೆಯು ಈಗಾಗಲೇ ವಾಟ್ಸ್ಆ್ಯಪ್ ಬಿಸಿನೆಸ್ ಖಾತೆಗಳಲ್ಲಿ ಚಾಲ್ತಿಯಲ್ಲಿದೆ.
ವಾಟ್ಸ್ಆ್ಯಪ್ ಈ ಆಯ್ಕೆಯನ್ನು ಆಂಡ್ರಾಯ್ಡ್, ಐಓಎಸ್ ಮತ್ತು ಡೆಸ್ಕ್ಟಾಪ್ಗಾಗಿ ಸರ್ಚ್ ಫಿಲ್ಟರ್‌ಗಳನ್ನು ಹೊರತಂದಿದೆ. ಓದದಿರುವ ಚಾಟ್‌ಗಳು, ಸಂಪರ್ಕಗಳು, ಸಂಪರ್ಕ-ಅಲ್ಲದ ಮತ್ತು ಗುಂಪುಗಳನ್ನು ಹುಡುಕುವುದನ್ನು ಸುಲಭಗೊಳಿಸುತ್ತಿದೆ. ಸ್ಟ್ಯಾಂಡರ್ಡ್ ವಾಟ್ಸ್ಆ್ಯಪ್ ಖಾತೆಗಳು ಸಹ ಅಪ್ಲಿಕೇಶನ್‌ನ ಮುಂದಿನ ನವೀಕರಣದಲ್ಲಿ ಅದೇ ಫೀಚರ್ ಅನ್ನು ಬಳಸಲು ಸಾಧ್ಯವಾಗುತ್ತದೆ ಎಂದು ಕಂಪನಿ ಹೇಳಿದೆ.
ಇನ್ನು ಇದರ ಜೊತೆಗೆ ಕ್ವಿಕ್ ರಿಯಾಕ್ಷನ್ ಫೀಚರ್ ಕೂಡ ಬರಲಿದೆ ಎಂದು ವಾಟ್ಸ್ಆ್ಯಪ್ ಹೇಳಿದೆ. ಇದು ವಾಟ್ಸ್ಆ್ಯಪ್ ಸ್ಟೇಟಸ್ ಅಪ್ಡೇಟ್ ಅನ್ನು ವೀಕ್ಷಿಸುವಾಗ ಬಳಕೆದಾರರಿಗೆ ಎಮೋಜಿಯನ್ನು ಕಳುಹಿಸಲು ಅನುಮತಿಸುತ್ತದೆ. ಅಂದರೆ ಇನ್ಸ್ಟಾಗ್ರಾಮ್ನಲ್ಲಿ ಇರುವ ರೀತಿಯಲ್ಲೇ ವಾಟ್ಸ್ಆ್ಯಪ್ನಲ್ಲೂ ರಿಯಾಕ್ಷನ್ ಫೀಚರ್ ಕಾಣಿಸಲಿದೆ. ಈ ಕ್ವಿಕ್ ರಿಯಾಕ್ಷನ್ ಆಯ್ಕೆಯು ಎಂಟು ಎಮೋಜಿ ಐಕಾನ್‌ಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಹೇಳಲಾಗಿದೆ. ಇದು ಬಳಕೆದಾರರಿಗೆ ವೈಯಕ್ತಿಕ ಎಮೋಜಿಯನ್ನು ಸಂದೇಶವಾಗಿ ಕಳುಹಿಸದೆಯೇ ಸ್ಟೇಟಸ್ ಅಪ್ಡೇಟ್ ಕಡೆಗೆ ಭಾವನೆಗಳನ್ನು ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತದೆ.
ವಾಟ್ಸ್ಆ್ಯಪ್ನಲ್ಲಿ ಫೈಲ್ ಅನ್ನು ಹಂಚಿಕೊಳ್ಳಲು 100 MB ಗಾತ್ರದ ಮಿತಿಯನ್ನು ಈಗ 2GB ಗೆ ಬದಲಾಯಿಸಲಾಗಿದೆ. ಇದು ಬಳಕೆದಾರರು ತಮ್ಮ ದೈನಂದಿನ ಸಂವಹನಕ್ಕಾಗಿ ವಾಟ್ಸ್ಆ್ಯಪ್ ನಿಯಂತ್ರಿಸುವ ಎಲ್ಲಾ ಸಣ್ಣ ವ್ಯಾಪಾರಗಳು ಮತ್ತು ಶೈಕ್ಷಣಿಕ ಗುಂಪುಗಳಿಗೆ ಖಂಡಿತವಾಗಿಯೂ ಸಹಾಯ ಮಾಡುತ್ತದೆ. ಬಳಕೆದಾರರು ದೊಡ್ಡ ಗಾತ್ರದ ಫೈಲ್ ಅನ್ನು ಅಪ್‌ಲೋಡ್ ಮಾಡಲು ಅಥವಾ ಡೌನ್‌ಲೋಡ್ ಮಾಡಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬ ಅಂದಾಜು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು, ಅಪ್ಲಿಕೇಶನ್ ಕೌಂಟರ್ ಅನ್ನು ಪ್ರದರ್ಶಿಸುತ್ತದೆ ಎಂದು ಕಂಪನಿ ತಿಳಿಸಿದೆ. ಇದಲ್ಲದೆ, ಸಂವಹನಕ್ಕಾಗಿ ಒಂದೇ ಗುಂಪಿನಲ್ಲಿ 512 ಬಳಕೆದಾರರನ್ನು ಸೇರಿಸುವ ಸಾಮರ್ಥ್ಯವನ್ನು ಬಳಕೆದಾರರಿಗೆ ಪರಿಚಯಿಸಲಿದೆ ಎಂದು ವಾಟ್ಸ್ಆ್ಯಪ್ ಹೇಳಿದೆ.
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:59 pm, Fri, 13 May 22