ಬೆಂಗಳೂರು (ಜೂ. 18): ಇಂದು ಸ್ಮಾರ್ಟ್ಫೋನ್ನಂತೆ (Smartphone) ಲ್ಯಾಪ್ಟಾಪ್ ಅಥವಾ ಡೆಸ್ಕ್ಟಾಪ್ ಬಳಸುವವರ ಸಂಖ್ಯೆ ಅಧಿಕವಾಗಿದೆ. ಆಫೀಸ್ ಕೆಲಸ ಅಥವಾ ಏನಾದರು ಆನ್ಲೈನ್ ಕೆಲಸ ಇದ್ದಲ್ಲಿ ಅವರ ಬಳಿ ಲ್ಯಾಪ್ಟಾಪ್ ಅಥವಾ ಡೆಸ್ಕ್ಟಾಪ್ ಇದ್ದೇ ಇರುತ್ತದೆ. ಇದರ ಜೊತೆಗೆ ಮೌಸ್ ಕೂಡ ಉಪಯೋಗಿಸುತ್ತೇವೆ. ಮೌಸ್ನಲ್ಲಿ ಎರಡು ವಿಧಗಳಿವೆ. ಒಂದು ವೈರ್‌ಲೆಸ್ ಮೌಸ್ ಮತ್ತೊಂದು ಕೇಬಲ್ ಮೌಸ್. ನೀವು ಹೊಸ ಮೌಸ್ ಖರೀದಿಸಬೇಕಾದರೆ ವೈರ್‌ಲೆಸ್ ಮೌಸ್ ಖರೀದಿಸಬೇಕೇ ಅಥವಾ ಕೇಬಲ್ ಮೌಸ್ ಖರೀದಿಸಬೇಕೇ ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡುವುದು ಸಹಜ. ಎರಡಕ್ಕೂ ಅವುಗಳದ್ದೇ ಆದ ಅನುಕೂಲಗಳು ಮತ್ತು ಅನಾನುಕೂಲಗಳಿವೆ. ಈ ಎರಡೂ ಮೌಸ್‌ಗಳ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಮತ್ತು ಯಾವ ಮೌಸ್ ಯಾರಿಗೆ ಉತ್ತಮ ಎಂದು ಇಲ್ಲಿ ನಾವು ನಿಮಗೆ ಹೇಳುತ್ತೇವೆ.
ಕೇಬಲ್ ಹೊಂದಿರುವ ಮೌಸ್
ಕೇಬಲ್ ಮೌಸ್ ಗೇಮಿಂಗ್ ಅಥವಾ ಡಿಸೈನಿಂಗ್ ನಂತಹ ಕೆಲಸಗಳಿಗೆ ಸೂಕ್ತವಾಗಿದೆ ಏಕೆಂದರೆ ಅದು ಯಾವುದೇ ಲ್ಯಾಗ್ ಅನ್ನು ಹೊಂದಿರುವುದಿಲ್ಲ. ಬ್ಯಾಟರಿಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಇದನ್ನು ಚಾರ್ಜ್ ಮಾಡುವ ಅಗತ್ಯವಿಲ್ಲ. ಇದು ಸಾಮಾನ್ಯವಾಗಿ ವೈರ್‌ಲೆಸ್ ಮೌಸ್‌ಗಿಂತ ಅಗ್ಗವಾಗಿದೆ.
ಅದರ ಅನಾನುಕೂಲಗಳನ್ನು ನೋಡಿದರೆ, ಕೇಬಲ್ ಮೇಜಿನ ಮೇಲೆ ಸಿಕ್ಕಿಹಾಕಿಕೊಂಡು ಚಲನೆಗೆ ಅಡ್ಡಿಯಾಗಬಹುದು. ಅದನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕೊಂಡೊಯ್ಯುವುದು ಸ್ವಲ್ಪ ತೊಂದರೆದಾಯಕ.
ವೈರ್‌ಲೆಸ್ ಮೌಸ್‌ನ ಅನುಕೂಲಗಳು ಮತ್ತು ಅನಾನುಕೂಲಗಳು
ವೈರ್‌ಲೆಸ್ ಮೌಸ್‌ನಿಂದ ಹಲವು ಅನುಕೂಲಗಳಿವೆ. ಇದು ಮೇಜಿನ ಮೇಲೆ ಸ್ವಚ್ಛ ಮತ್ತು ಸ್ಮಾರ್ಟ್ ಲುಕ್ ನೀಡುತ್ತದೆ. ಉತ್ತಮ ಪೋರ್ಟಬಿಲಿಟಿ ಎಂದರೆ ನೀವು ಅದನ್ನು ನಿಮ್ಮ ಬ್ಯಾಗ್‌ನಲ್ಲಿ ಇಟ್ಟುಕೊಂಡು ಎಲ್ಲಿ ಬೇಕಾದರೂ ಸುಲಭವಾಗಿ ಕೊಂಡೊಯ್ಯಬಹುದು. ಸ್ವಲ್ಪ ದೂರದಿಂದಲೂ ನೀವು ಅದನ್ನು ಆರಾಮವಾಗಿ ಬಳಸಬಹುದು.
Realme Narzo 80 Lite 5G: ಕೇವಲ 10,499 ರೂ. ಗೆ ಬಿಡುಗಡೆ ಆಯಿತು 6000mAh ಬ್ಯಾಟರಿಯ ಹೊಸ ಸ್ಮಾರ್ಟ್ಫೋನ್
ಆದಾಗ್ಯೂ, ಈ ಮೌಸ್ ಹಲವು ಅನಾನುಕೂಲಗಳನ್ನು ಸಹ ಹೊಂದಿದೆ. ಅವುಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. ಬ್ಯಾಟರಿ ಖಾಲಿಯಾದರೆ, ಮೌಸ್ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅದರ ಬ್ಯಾಟರಿಯನ್ನು ಕಾಲಕಾಲಕ್ಕೆ ಬದಲಾಯಿಸಬೇಕಾಗುತ್ತದೆ ಅಥವಾ ಚಾರ್ಜ್ ಮಾಡಬೇಕಾಗುತ್ತದೆ.
ಕೆಲವರು ಹೇಳುವಂತೆ ಇದು ಸ್ವಲ್ಪ ನಿಧಾನವಾಗಿ ಕಾರ್ಯನರ್ವಹಿಸುತ್ತದೆ. ಕೆಲವೊಮ್ಮೆ ಆಟವಾಡುವಾಗ ಪ್ರತಿಕ್ರಿಯೆ ನಿಧಾನವಾಗಿ ಅನಿಸಬಹುದು. ಕೇಬಲ್ ಮೌಸ್‌ಗಿಂತ ವೈರ್‌ಲೆಸ್ ಮೌಸ್ ಹೆಚ್ಚು ದುಬಾರಿಯಾಗಿದೆ.
ಯಾರಿಗೆ ಯಾವ ಮೌಸ್ ಸೂಕ್ತ?
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ