ಶಿಯೋಮಿ 11ಟಿ ಪ್ರೊ 5ಜಿ ಹೈಪರ್‌ಫೋನ್ ಭಾರತದಲ್ಲಿ ಬಿಡುಗಡೆ; ಬೆಲೆ ಎಷ್ಟು? ಇಲ್ಲಿದೆ ಮಾಹಿತಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 20, 2022 | 12:52 PM

ಚೀನಾದ ಸ್ಮಾರ್ಟ್‌ಫೋನ್ ತಯಾರಕ ಕಂಪನಿಯಾ ಶಿಯೋಮಿ  (Xiaomi) ಭಾರತದಲ್ಲಿ ತನ್ನ ಇತ್ತೀಚಿನ ಸ್ಮಾರ್ಟ್‌ಫೋನ್ ಶಿಯೋಮಿ 11ಟಿ ಪ್ರೊ 5ಜಿ (Xiaomi 11T Pro 5G) ಅನ್ನು ಬಿಡುಗಡೆ ಮಾಡಿದೆ. ಶಿಯೋಮಿ 11ಟಿ 5ಜಿ ಫೋನ್​ನ್ನು  ಶಿಯೋಮಿ ಹೈಪರ್‌ಫೋನ್ ಎಂದು ಕೂಡಾ ಕರೆಯಲಾಗುತ್ತದೆ. 

ಶಿಯೋಮಿ 11ಟಿ ಪ್ರೊ 5ಜಿ ಹೈಪರ್‌ಫೋನ್ ಭಾರತದಲ್ಲಿ ಬಿಡುಗಡೆ; ಬೆಲೆ ಎಷ್ಟು? ಇಲ್ಲಿದೆ ಮಾಹಿತಿ
ಶಿಯೋಮಿ 11ಟಿ ಪ್ರೊ 5ಜಿ ಹೈಪರ್‌ಫೋನ್ ಭಾರತದಲ್ಲಿ ಬಿಡುಗಡೆ
Follow us on

ಚೀನಾದ ಸ್ಮಾರ್ಟ್‌ಫೋನ್ ತಯಾರಕ ಕಂಪನಿಯಾ ಶಿಯೋಮಿ  (Xiaomi) ಭಾರತದಲ್ಲಿ ತನ್ನ ಇತ್ತೀಚಿನ ಸ್ಮಾರ್ಟ್‌ಫೋನ್ ಶಿಯೋಮಿ 11ಟಿ ಪ್ರೊ 5ಜಿ (Xiaomi 11T Pro 5G) ಅನ್ನು ಬಿಡುಗಡೆ ಮಾಡಿದೆ. ಶಿಯೋಮಿ 11ಟಿ 5ಜಿ ಫೋನ್​ನ್ನು  ಶಿಯೋಮಿ ಹೈಪರ್‌ಫೋನ್ ಎಂದು ಕೂಡಾ ಕರೆಯಲಾಗುತ್ತದೆ.  120W ವೇಗದ ಚಾರ್ಜಿಂಗ್, 120Hz ಡಿಸ್‌ಪ್ಲೇ ಮತ್ತು ಕ್ವಾಲ್‌ಕಾಮ್‌ನ ಸ್ನಾಪ್‌ಡ್ರಾಗನ್ 888 ಚಿಪ್‌ಸೆಟ್ ಒಳಗೊಂಡಿದೆ. ಒನ್ ಪ್ಲಸ್ 9ಆರ್​​ಟಿ, ವಿವೋ ವಿ23 ಪ್ರೊ ಮತ್ತು ಸ್ಯಾಮ್​ಸಂಗ್ ಎಸ್ 21 ಎಫ್​ಇ (OnePlus 9RT , Vivo V23 Pro ಮತ್ತು Samsung Galaxy S21 FE) ನಂತಹ 2022 ರ ಇತರ ಆರಂಭಿಕ ಫ್ಲ್ಯಾಗ್‌ಶಿಪ್‌ಗಳಿಗೆ ಸ್ಮಾರ್ಟ್‌ಫೋನ್ ಪ್ರತಿಸ್ಪರ್ಧಿಯಾಗಿ ಬರುತ್ತದೆ . ಶಿಯೋಮಿ 11ಟಿ (Xiaomi 11T) ಪ್ರೊ ಡಾಲ್ಬಿ ಅಟ್ಮಾಸ್ ಬೆಂಬಲದೊಂದಿಗೆ ಹರ್ಮನ್ ಕಾರ್ಡನ್ -ಟ್ಯೂನ್ಡ್ ಸ್ಪೀಕರ್ ಸಿಸ್ಟಮ್, ಟ್ರಿಪಲ್ ರಿಯರ್ ಕ್ಯಾಮೆರಾಗಳು ಮತ್ತು 5G ಬೆಂಬಲದಂತಹ ವೈಶಿಷ್ಟ್ಯಗಳನ್ನು ಹೊಂದಿದೆ.  ಶಿಯೋಮಿ 11ಟಿ ಪ್ರೊ ಸಹಭಾಗಿತ್ವದಲ್ಲಿ ಮುಂಬೈನಲ್ಲಿ ಮೊದಲ 5G ಪ್ರಯೋಗಕ್ಕಾಗಿ ಬಳಸಲಾಗುವ ಮೊದಲ ಸ್ಮಾರ್ಟ್‌ಫೋನ್ ಆಗಿದೆ. 

ಶಿಯೋಮಿ 11ಟಿ ಪ್ರೊ 5ಜಿ (XIAOMI 11T PRO 5G) ಬೆಲೆ ಮತ್ತು ಲಭ್ಯತೆ
ಶಿಯೋಮಿ 11ಟಿ ಪ್ರೊ 5ಜಿ ನ್ನು ಬೇಸ್ 8GB RAM + 128GB ಸ್ಟೋರೇಜ್ ಹೊಂದಿರು ಫೋನ್ ಬೆಲೆ ರೂ 39,999. 8GB RRAM + 256GB ಸ್ಟೋರೇಜ್​ನ ಫೋನ್​ಗೆ  ರೂ 41,999 ಮತ್ತು ಟಾಪ್-ಸ್ಪೆಕ್ 12GB RAM + 25GB ಸ್ಟೋರೇಜ್ ವೇರಿಯಂಟ್‌ಗೆ ರೂ 43,999 ಬೆಲೆ ಇದೆ. ಇಂದಿನಿಂದ ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರಾಟವಾಗಲಿದೆ. ಸೆಲೆಸ್ಟಿಯಲ್ ಮ್ಯಾಜಿಕ್, ಮೆಟೊರೈಟ್ ಗ್ರೇ ಮತ್ತು ಮೂನ್‌ಲೈಟ್ ವೈಟ್ ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಅಮೆಜಾನ್, ಶಿಯೋಮಿ ವೆಬ್​ಸೈಟ್, ಎಂಐ ಹೋಮ್ (Amazon, Xiaomi webiste, Mi Home) ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಹೊಸದಾಗಿ ಬಿಡುಗಡೆಯಾಗುತ್ತಿರುವ ಕಾರಣಕ್ಕೆ ಕೊಡುಗೆಯಾಗಿ, ಶಿಯೋಮಿ ಸಿಟಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಮತ್ತು EMI ಆಯ್ಕೆಗಳ ಮೇಲೆ ರೂ 5,000 ತ್ವರಿತ ರಿಯಾಯಿತಿಯನ್ನು ಪರಿಚಯಿಸುತ್ತಿದೆ.

ಶಿಯೋಮಿ 11ಟಿ ಪ್ರೊ 5ಜಿ (XIAOMI 11T PRO 5G) ವಿಶೇಷತೆಗಳು ಏನು!
ಶಿಯೋಮಿ 11ಟಿ ಪ್ರೊ 5ಜಿನ ವಿಶೇಷತೆಗಳನ್ನು ನೋಡುವುದಾದರೆ, ಇದು ಆಂಡ್ರಾಯ್ಡ್ 11 -ಆಧಾರಿತ MIUI 12 ನೊಂದಿಗೆ ಬರುತ್ತದೆ. ಸ್ಮಾರ್ಟ್‌ಫೋನ್ 6.67-ಇಂಚಿನ ಪೂರ್ಣ-HD+ AMOLED ಡಿಸ್ಪ್ಲೇಯನ್ನು 120Hz ರಿಫ್ರೆಶ್ ದರದೊಂದಿಗೆ ಹೊಂದಿದೆ. ಶಿಯೋಮಿ 11ಟಿ ಪ್ರೊ 5ಜಿ (Xiaomi 11T Pro 5G) ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 ಚಿಪ್‌ಸೆಟ್‌ನಿಂದ 12GB RAM ವರೆಗೆ ಮತ್ತು ಆಂತರಿಕ ಸಂಗ್ರಹಣೆಯಾಗಿದ್ದರೆ 256GB ವರೆಗೆ ಜೋಡಿಸಲಾಗಿದೆ. ಇದು ಶಿಯೋಮಿಯ ವರ್ಚುವಲ್ RAM ವಿಸ್ತರಣೆ ತಂತ್ರಜ್ಞಾನದೊಂದಿಗೆ ಬರುತ್ತದೆ. ಇದು ಬಳಕೆದಾರರಿಗೆ ತಮ್ಮ RAM ಅನ್ನು 3GB ಯಷ್ಟು ವಿಸ್ತರಿಸಲು ಅವಕಾಶವನ್ನು ನೀಡಲಾಗಿದೆ. ಸ್ಮಾರ್ಟ್‌ಫೋನ್ 5,000mAh ಡ್ಯುಯಲ್-ಸೆಲ್ ಬ್ಯಾಟರಿಯನ್ನು ಹೊಂದಿದ್ದು, ಅದು ಸೂಪರ್-ಫಾಸ್ಟ್ 120W ಹೈಪರ್‌ಚಾರ್ಜ್ ಚಾರ್ಜಿಂಗ್ ತಂತ್ರಜ್ಞಾನವನ್ನು ಒಳಗೊಂಡಿದೆ. ಜತೆಗೆ ಸಂಪರ್ಕದ ವಿಷಯದಲ್ಲಿ, 5G, 4G LTE, Wi-Fi 6, ಬ್ಲೂಟೂತ್, GPS/A-GPS/NavIC, NFC, IR ಬ್ಲಾಸ್ಟರ್ ಮತ್ತು USB ಟೈಪ್-C ಪೋರ್ಟ್‌ನೊಂದಿಗೆ ಬರುತ್ತದೆ.

ಶಿಯೋಮಿ 11ಟಿ ಪ್ರೊ 5ಜಿ (XIAOMI 11T PRO 5G) ಕ್ಯಾಮೆರಾ
ಶಿಯೋಮಿ 11ಟಿ ಪ್ರೊ 5ಜಿ (Xiaomi 11T Pro) ನಲ್ಲಿನ ಟ್ರಿಪಲ್ ಕ್ಯಾಮೆರಾ ಸೆಟಪ್ f/1.75 ಮತ್ತು ವೈಡ್-ಆಂಗಲ್ ಲೆನ್ಸ್‌ನೊಂದಿಗೆ 108-ಮೆಗಾಪಿಕ್ಸೆಲ್ ಪ್ರಾಥಮಿಕ Samsung HM2 ಸಂವೇದಕದೊಂದಿಗೆ ಬರುತ್ತದೆ. ಇದರೊಂದಿಗೆ 8-ಮೆಗಾಪಿಕ್ಸೆಲ್ ವೈಡ್ ಆಂಗಲ್ ಶೂಟರ್ ಮತ್ತು 5-ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಇದೆ. ಮುಂಭಾಗದಲ್ಲಿ, ಶಿಯೋಮಿ 11ಟಿ ಪ್ರೊ 5ಜಿ (Xiaomi 11T Pro 5G) 16-ಮೆಗಾಪಿಕ್ಸೆಲ್ ಕ್ಯಾಮೆರ ಹೊಂದಿದೆ. ಪ್ರೊ ಟೈಮ್-ಲ್ಯಾಪ್ಸ್, ಸಿನಿಮಾಟಿಕ್ ಫಿಲ್ಟರ್‌ಗಳು, ಆಡಿಯೋ ಜೂಮ್ ಮತ್ತು ಹೆಚ್ಚಿನವುಗಳಂತಹ 50 ಡೈರೆಕ್ಟರ್ ಮೋಡ್‌ಗಳೊಂದಿಗೆ ಸ್ಮಾರ್ಟ್‌ಫೋನ್ ಲಭ್ಯವಿದ್ದು, ಸೆಕೆಂಡಿಗೆ 30 ಫ್ರೇಮ್‌ಗಳಲ್ಲಿ 8K ವೀಡಿಯೊ ರೆಕಾರ್ಡಿಂಗ್ ಅನ್ನು ಸಹ ಮಾಡಬಹುದಾಗಿದೆ.

ಇದನ್ನು ಓದಿ:

Amazon Great Republic Day sale: ಕೊನೇ ದಿನದ ಅಮೆಜಾನ್ ರಿಪಬ್ಲಿಕ್ ಡೇ ಸೇಲ್​ನಲ್ಲಿ ಸ್ಮಾರ್ಟ್​ಫೋನ್​ಗಳಿಗೆ ಬಂಪರ್ ಡಿಸ್ಕೌಂಟ್

Realme 9i: ಭಾರತದಲ್ಲಿ ರಿಯಲ್‌ಮಿ 9i ಸ್ಮಾರ್ಟ್​ಫೋನ್ ಬಿಡುಗಡ: ಬಜೆಟ್ ಪ್ರಿಯರು ಫುಲ್ ಫಿದಾ

Published On - 12:44 pm, Thu, 20 January 22