ಚೀನಾ ಮೂಲದ ಪ್ರಸಿದ್ಧ ಶವೋಮಿ ಕಂಪನಿ ತನ್ನ ಬಹುನಿರೀಕ್ಷಿತ ಶವೋಮಿ 14 ಆಲ್ಟ್ರಾ (Xiaomi 14 Ultra) ಸ್ಮಾರ್ಟ್ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಫೋನ್ ಶವೋಮಿ 14 ಮತ್ತು ಶವೋಮಿ 14 ಪ್ರೊಗೆ ಸಾಲಿಗೆ ಸೇರುತ್ತದೆ. ಇದು ಅಕ್ಟೋಬರ್ 2023 ರಲ್ಲಿ ಬಿಡುಗಡೆಗೊಂಡಿತ್ತು. ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) ಗಿಂತ ಮುಂಚಿತವಾಗಿ ಫೆಬ್ರವರಿ 25 ರಂದು ಈ ಶ್ರೇಣಿಯನ್ನು ಜಾಗತಿಕವಾಗಿ ಮಾರಾಟ ಮಾಡಲು ಕಂಪನಿ ಮುಂದಾಗಿದೆ. ಶವೋಮಿ 14 ಸರಣಿಯಲ್ಲಿನ ಇತರ ಫೋನ್‌ಗಳಂತೆ ಶವೋಮಿ 14 ಆಲ್ಟ್ರಾ ಸಾಕಷ್ಟು ಬಲಿಷ್ಠವಾಗಿದ್ದು, ಕ್ವಾಲ್ಕಂ ಸ್ನಾಪ್‌ಡ್ರಾಗನ್ 8 Gen 3 SoC ಯಿಂದ ಕೂಡಿದೆ. ಕ್ಯಾಮೆರಾ ಕೂಡ ಅದ್ಭುತವಾಗಿದ್ದು, ನಾಲ್ಕು 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದೆ. ಸದ್ಯಕ್ಕೆ ಚೀನಾ ಮಾರುಕಟ್ಟೆಯಲ್ಲಿ ಈ ಫೋನ್ ರಿಲೀಸ್ ಆಗಿದೆ.
ಕಪ್ಪು, ನೀಲಿ ಮತ್ತು ಬಿಳಿ ಬಣ್ಣಗಳಲ್ಲಿ ನೀಡಲಾದ ಶವೋಮಿ 14 ಆಲ್ಟ್ರಾ ಫೋನಿನ 12GB + 256GB ಆಯ್ಕೆಗೆ CNY 6,499 (ಸುಮಾರು ರೂ. 74,800) ಇದೆ. ಅಂತೆಯೆ ಇದರ 16GB + 512GB ಮತ್ತು 16GB + 1TB ರೂಪಾಂತರಕ್ಕೆ ಕ್ರಮವಾಗಿ CNY 6,999 (ಸುಮಾರು ರೂ. 80,600) ಮತ್ತು CNY 7,799 (ಸುಮಾರು ರೂ. 89,800) ನಿಗದಿ ಮಾಡಲಾಗಿದೆ. 16GB + 1TB ಕಾನ್ಫಿಗರೇಶನ್‌ಗಾಗಿ CNY 8,799 (ಸುಮಾರು ರೂ. 1,01,300) ನಲ್ಲಿ ಪಟ್ಟಿ ಮಾಡಲಾದ ಶವೋಮಿ 14 ಆಲ್ಟ್ರಾ ಟೈಟಾನಿಯಂ ವಿಶೇಷ ಆವೃತ್ತಿಯಲ್ಲೂ ಲಭ್ಯವಿದೆ.
ಫಾರಿನ್ಗೆ ಹೋದಾಗ ಫೋನ್ ಪೇ, ಗೂಗಲ್ ಪೇ ಉಪಯೋಗಿಸುವುದು ಹೇಗೆ?: ಇಲ್ಲಿದೆ ಮಾಹಿತಿ
ಶವೋಮಿ 14 ಆಲ್ಟ್ರಾ ಫೋನ್ 3,200 x 1,440 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.73-ಇಂಚಿನ LTPO AMOLED ಮೈಕ್ರೋ-ಕರ್ವ್ಡ್ ಡಿಸ್‌ಪ್ಲೇ, 120Hz ವರೆಗಿನ ರಿಫ್ರೆಶ್ ದರ ಮತ್ತು 3,000 nits ನ ಗರಿಷ್ಠ ಬ್ರೈಟ್ನೆಸ್ ಮಟ್ಟವನ್ನು ಹೊಂದಿದೆ. ಡಿಸ್‌ಪ್ಲೇ ಎಲ್ಲಾ ಭಾಗ ಶೀಲ್ಡ್ ಗ್ಲಾಸ್‌ನಿಂದ ರಕ್ಷಿಸಲ್ಪಟ್ಟಿದೆ. ಇದು ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8 Gen 3 SoC ಯಿಂದ 16GB ವರೆಗಿನ LPDDR5x RAM ಮತ್ತು 1TB ವರೆಗಿನ UFS 4.0 ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ. ಈ ಫೋನ್ ಆಂಡ್ರಾಯ್ಡ್ 14-ಆಧಾರಿತ HyperOS ನೊಂದಿಗೆ ರನ್ ಆಗುತ್ತದೆ.
ಕ್ಯಾಮೆರಾ ವಿಚಾರಕ್ಕೆ ಬಂದರೆ, ಶವೋಮಿ 14 ಆಲ್ಟ್ರಾ ಕ್ವಾಡ್ ರಿಯರ್ ಕ್ಯಾಮೆರಾ ಘಟಕವನ್ನು ಹೊಂದಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ 1-ಇಂಚಿನ 50-ಮೆಗಾಪಿಕ್ಸೆಲ್ Sony LYT900 ಪ್ರಾಥಮಿಕ ಸಂವೇದಕ, ಜೊತೆಗೆ ಎರಡು 50-ಮೆಗಾಪಿಕ್ಸೆಲ್ Sony IMX858 ಸಂವೇದಕಗಳು, ಒಂದು 3.2x ಆಪ್ಟಿಕಲ್ ಮತ್ತು ಇನ್ನೊಂದು 5x ಆಪ್ಟಿಕಲ್ ಜೂಮ್ ಜೊತೆಗೆ 75mm ಮತ್ತು 120mm ಫೋಕಲ್ ಲೆಂತ್ ನಿಂದ ಕೂಡಿದೆ. ನಾಲ್ಕನೇ 50-ಮೆಗಾಪಿಕ್ಸೆಲ್ ಸಂವೇದಕವನ್ನು ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ನೊಂದಿಗೆ ಜೋಡಿಸಲಾಗಿದೆ. ಮುಂಭಾಗದ ಕ್ಯಾಮೆರಾವು 32-ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿದೆ.
108MP ಕ್ಯಾಮೆರಾದ ಈ ಹೊಚ್ಚ ಹೊಸ ಸ್ಮಾರ್ಟ್ಫೋನ್ ಮೇಲೆ ಬಂಪರ್ ಡಿಸ್ಕೌಂಟ್
90W, 80W ವೈರ್‌ಲೆಸ್ ಮತ್ತು 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 5,300mAh ಬ್ಯಾಟರಿ ಶವೋಮಿ 14 ಆಲ್ಟ್ರಾವನ್ನು ಬೆಂಬಲಿಸುತ್ತದೆ. ಈ ಫೋನ್ 5G, ವೈಫೈ, ಬ್ಲೂಟೂತ್ 5.4, NFC ಮತ್ತು USB ಟೈಪ್-ಸಿ ಅನ್ನು ಸಹ ಬೆಂಬಲಿಸುತ್ತದೆ. ಭದ್ರತೆಗಾಗಿ, ಅಲ್ಟ್ರಾಸಾನಿಕ್ ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸಂವೇದಕವನ್ನು ಹೊಂದಿದೆ. ಈ ಫೋನಿನ ಟೈಟಾನಿಯಂ ಆವೃತ್ತಿಯು ವಿಶೇಷವಾದ ದ್ವಿಮುಖ ಉಪಗ್ರಹ ಸಂವಹನ ಬೆಂಬಲದೊಂದಿಗೆ ಬರುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ