Xiaomi 17 Series: ವಿಶ್ವದ ಅತ್ಯಂತ ವೇಗದ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಶಿಯೋಮಿ: ಹೇಗಿದೆ ನೋಡಿ

Xiaomi 17, Xiaomi 17 pro, Xiaomi 17 pro max Launched: ಶಿಯೋಮಿ 17 ಪ್ರೊ ಮತ್ತು ಶಿಯೋಮಿ 17 ಪ್ರೊ ಮ್ಯಾಕ್ಸ್ ಅನ್ನು ಚೀನಾದಲ್ಲಿ ಸ್ಟ್ಯಾಂಡರ್ಡ್ ಶಿಯೋಮಿ 17 ಹ್ಯಾಂಡ್‌ಸೆಟ್‌ನೊಂದಿಗೆ ಬಿಡುಗಡೆ ಮಾಡಲಾಯಿತು. ಈ ಲೈನ್‌ಅಪ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಎಲೈಟ್ ಜನ್ 5 SoC ಮತ್ತು ಆಂಡ್ರಾಯ್ಡ್ 16-ಆಧಾರಿತ ಹೈಪರ್‌ಒಎಸ್ 3 ನೊಂದಿಗೆ ಬರುತ್ತದೆ.

Xiaomi 17 Series: ವಿಶ್ವದ ಅತ್ಯಂತ ವೇಗದ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಶಿಯೋಮಿ: ಹೇಗಿದೆ ನೋಡಿ
Xiaomi 17 Series (1)
Edited By:

Updated on: Sep 27, 2025 | 12:04 PM

ಬೆಂಗಳೂರು (ಸೆ. 27): ಶಿಯೋಮಿ (Xiaomi) ತನ್ನ ಹೊಸ ಶಿಯೋಮಿ 17 ಸರಣಿಯನ್ನು ಕ್ವಾಲ್ಕಂ ಸ್ನಾಪ್​ಡ್ರಾಗನ್ 8 ಎಲೈಟ್ Gen 5 ಚಿಪ್‌ಸೆಟ್‌ನೊಂದಿಗೆ ಬಿಡುಗಡೆ ಮಾಡಿದೆ. ಶಿಯೋಮಿಯ ಈ ಸರಣಿಯು ಈ ಪ್ರೊಸೆಸರ್‌ನೊಂದಿಗೆ ಬಂದಿರುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಸರಣಿಯಾಗಿದೆ. ಶಿಯೋಮಿ 17 ಹೊರತುಪಡಿಸಿ, ಶಿಯೋಮಿ 17 Pro ಮತ್ತು ಶಿಯೋಮಿ 17 Pro Max ಗಳನ್ನು ಈ ಸರಣಿಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಎಲ್ಲಾ ಮೂರು ಫೋನ್‌ಗಳು ಶಕ್ತಿಯುತ ಪ್ರೊಸೆಸರ್ ಜೊತೆಗೆ ಪ್ರಮುಖವಾದ Leica ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತವೆ.

ಶಿಯೋಮಿ 17 ಸರಣಿ ಬೆಲೆ ಎಷ್ಟು?

ಶಿಯೋಮಿ 17 ಅನ್ನು ಸದ್ಯಕ್ಕೆ ಚೀನಾದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಸರಣಿ ಶೀಘ್ರದಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಪರಿಚಯಿಸುವ ನಿರೀಕ್ಷೆಯಿದೆ. ಇದರ ಆರಂಭಿಕ ಬೆಲೆ CNY 4499 (ಸರಿಸುಮಾರು ರೂ. 56,000). ಶಿಯೋಮಿ 17 ಪ್ರೊ ಮ್ಯಾಕ್ಸ್ ಆರಂಭಿಕ ಬೆಲೆ CNY 5,999 (ಸರಿಸುಮಾರು ರೂ. 74,700). ಇನ್ನು ಶಿಯೋಮಿ 17 ಪ್ರೊ ಬೆಲೆ CNY 5,299 (ಸರಿಸುಮಾರು ರೂ. 66,000) ಆಗಿದೆ.

ಶಿಯೋಮಿ 17 ಸರಣಿ ಫೀಚರ್ಸ್

ಈ ಶಿಯೋಮಿ ಫೋನ್ 6.3-ಇಂಚಿನ 1.5K OLED ಡಿಸ್​ಪ್ಲೇಯೊಂದಿಗೆ ಬರುತ್ತದೆ. ಈ ಫೋನ್ HDR10+, HDR ವಿವಿದ್ ಮತ್ತು ಡಾಲ್ಬಿ ವಿಷನ್ ಅನ್ನು ಬೆಂಬಲಿಸುತ್ತದೆ. ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 ಎಲೈಟ್ ಜೆನ್ 5 ಪ್ರೊಸೆಸರ್ ನಿಂದ ಚಾಲಿತವಾಗಿದ್ದು, OIS ಹೊಂದಿರುವ 50MP ಪ್ರಾಥಮಿಕ ಕ್ಯಾಮೆರಾ, 50MP ಟೆಲಿಫೋಟೋ ಕ್ಯಾಮೆರಾ ಮತ್ತು 50MP ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದಿದೆ. ಮುಂಭಾಗ 50MP ಕ್ಯಾಮೆರಾ ಲಭ್ಯವಿದೆ. 7000mAh ಬ್ಯಾಟರಿಯೊಂದಿಗೆ ಬರುತ್ತದೆ ಮತ್ತು 100W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಇದನ್ನೂ ಓದಿ
ನೀವು ಯೂಟ್ಯೂಬರ್ ಆಗಲು ಬಯಸುವಿರಾ?: ಇಲ್ಲಿವೆ ನೋಡಿ ಅತ್ಯುತ್ತಮ ಐಡಿಯಾಗಳು
2025ರಲ್ಲಿ ಫೋನ್ ಖರೀದಿಸುವ ಮೊದಲು ಏನೆಲ್ಲ ಗಮನಿಸಬೇಕೆಂದು ತಿಳಿದಿದೆಯೇ?
ಈ ವಸ್ತುಗಳನ್ನು ಫ್ರಿಡ್ಜ್ ಮೇಲೆ ಇಡಬೇಡಿ: ಇಟ್ಟಿದ್ದರೆ ತಕ್ಷಣವೇ ತೆಗೆಯಿರಿ
ಸ್ಯಾಮ್‌ಸಂಗ್ ಸೂಪರ್ ಬಿಗ್ ಸೆಲೆಬ್ರೇಷನ್ಸ್: AI ಸ್ಮಾರ್ಟ್ ಟಿವಿ ಮೇಲೆ ಆಫರ್

Tech Tips: ನೀವು ಯೂಟ್ಯೂಬರ್ ಆಗಲು ಬಯಸುವಿರಾ?: ಇಲ್ಲಿವೆ ನೋಡಿ ಅತ್ಯುತ್ತಮ ಐಡಿಯಾಗಳು

ಶಿಯೋಮಿ 17 ಪ್ರೊ, 6.3-ಇಂಚಿನ OLED ಡಿಸ್ಪ್ಲೇಯನ್ನು ಸಹ ಹೊಂದಿದೆ. ಶಿಯೋಮಿ 17 ಪ್ರೊ ಮ್ಯಾಕ್ಸ್ 6.9-ಇಂಚಿನ OLED ಡಿಸ್ಪ್ಲೇಯನ್ನು ಹೊಂದಿದೆ. ಪ್ರೊ ಮ್ಯಾಕ್ಸ್ ಮಾದರಿಯ ಡಿಸ್​ಪ್ಲೇ 2K ರೆಸಲ್ಯೂಶನ್ ಮತ್ತು ಶಿಯೋಮಿ ಡ್ರ್ಯಾಗನ್ ಕ್ರಿಸ್ಟಲ್ ಗ್ಲಾಸ್ ರಕ್ಷಣೆಯನ್ನು ಹೊಂದಿದೆ. ಎರಡೂ ಫೋನ್‌ಗಳು ಹಿಂಭಾಗದಲ್ಲಿ ಕ್ಯಾಮೆರಾದ ಜೊತೆಗೆ ಸೆಕೆಂಡರಿ ಡಿಸ್ಪ್ಲೇಯನ್ನು ಹೊಂದಿದ್ದು, ನೋಟಿಫಿಕೇಷನ್ ನೀಡುತ್ತವೆ.

ಎರಡೂ ಫೋನ್‌ಗಳು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಜೆನ್ 5 ಪ್ರೊಸೆಸರ್‌ನಿಂದ ಚಾಲಿತವಾಗಿವೆ. ಎರಡೂ ಫೋನ್‌ಗಳು OIS ಹೊಂದಿರುವ 50MP ಮುಖ್ಯ ಕ್ಯಾಮೆರಾ, 50MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು ಹಿಂಭಾಗದಲ್ಲಿ 50MP ಪೆರಿಸ್ಕೋಪ್ ಕ್ಯಾಮೆರಾವನ್ನು ಸಹ ಹೊಂದಿವೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಾಗಿ 50MP ಮುಂಭಾಗದ ಕ್ಯಾಮೆರಾವನ್ನು ಒದಗಿಸಲಾಗಿದೆ. ಶಿಯೋಮಿ 17 Pro 6,300mAh ಬ್ಯಾಟರಿಯನ್ನು ಹೊಂದಿದ್ದರೆ, Pro Max ರೂಪಾಂತರವು 7,500mAh ಬ್ಯಾಟರಿಯನ್ನು ಹೊಂದಿದೆ. ಎರಡೂ ಫೋನ್‌ಗಳು 100W ವೇಗದ ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ