AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: 2025ರಲ್ಲಿ ಫೋನ್ ಖರೀದಿಸುವ ಮೊದಲು ಏನೆಲ್ಲ ಗಮನಿಸಬೇಕೆಂದು ನಿಮಗೆ ತಿಳಿದಿದೆಯೇ?

Mobile buying tips 2025: ಇಂದಿನ 2025ರ ಯುಗದಲ್ಲಿ ನೀವು ಸ್ಮಾರ್ಟ್ಫೋನ್ ಖರೀದಿಸುವಾಗ ಕೇವಲ ಬೆಲೆಯನ್ನು ಮಾತ್ರ ಗಮನಿಸಿದರೆ ಸಾಲದು. ಇದರ ಹೊರತಾಗಿ 2025 ಕ್ಕೆ ಸೂಕ್ತವಾದ ವೈಶಿಷ್ಟ್ಯಗಳನ್ನು ಆ ಹೊಸ ಸ್ಮಾರ್ಟ್ಫೋನ್ ಹೊಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ಕೂಡ ತಿಳಿದುಕೊಳ್ಳಬೇಕು. ಹಾಗಾದರೆ ಹೊಸ ಮೊಬೈಲ್ ಖರೀದಿಸುವಾಗ ಏನೆಲ್ಲ ನೋಡಬೇಕು?, ಈ ಕುರಿತ ಮಾಹಿತಿ ಇಲ್ಲಿದೆ.

Tech Tips: 2025ರಲ್ಲಿ ಫೋನ್ ಖರೀದಿಸುವ ಮೊದಲು ಏನೆಲ್ಲ ಗಮನಿಸಬೇಕೆಂದು ನಿಮಗೆ ತಿಳಿದಿದೆಯೇ?
Smartphone Unboxing
ಪ್ರೀತಿ ಭಟ್​, ಗುಣವಂತೆ
| Updated By: Vinay Bhat|

Updated on: Sep 26, 2025 | 12:45 PM

Share

ಬೆಂಗಳೂರು (ಸೆ. 26): ಫ್ಲಿಪ್‌ಕಾರ್ಟ್ (Flipkart) ಮತ್ತು ಅಮೆಜಾನ್‌ಗಳಲ್ಲಿ ಹಬ್ಬದ ಮಾರಾಟ ನಡೆಯುತ್ತಿದೆ. ಅಮೆಜಾನ್​ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಹಾಗೂ ಫ್ಲಿಪ್‌ಕಾರ್ಟ್​ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್ ಆಯೋಜಿಸಲಾಗಿದೆ. ಈ ಸಮಯದಲ್ಲಿ ಅನೇಕ ಜನರು ಆಫರ್‌ಗಳಿಗೆ ಮೋಹಗೊಂಡು ಹೆಚ್ಚಿನ ರಿಯಾಯಿತಿಯೊಂದಿಗೆ ಸ್ಮಾರ್ಟ್​ಫೋನ್‌ಗಳನ್ನು ಖರೀದಿಸುತ್ತಾರೆ. ಆದರೆ, ಫೋನ್ ಖರೀದಿಸುವ ಮೊದಲು ನೀವು ನೋಡಬೇಕಾದದ್ದು ಆಫರ್‌ಗಳು ಮತ್ತು ರಿಯಾಯಿತಿಗಳಲ್ಲ. ನೀವು ಹೊಸ ಮೊಬೈಲ್ ಫೋನ್ ಖರೀದಿಸಬೇಕೆಂದಾಗ, ಬೆಲೆಯನ್ನು ಮಾತ್ರ ಪರಿಗಣಿಸದೆ, ಅದು ಇತ್ತೀಚಿನ ತಂತ್ರಜ್ಞಾನವನ್ನು ಹೊಂದಿದೆಯೇ ಎಂಬುದನ್ನು ಸಹ ಪರಿಗಣಿಸಬೇಕು.

2025 ಕ್ಕೆ ಸೂಕ್ತವಾದ ವೈಶಿಷ್ಟ್ಯಗಳನ್ನು ನೀವು ಖರೀದಿಸುವ ಹೊಸ ಸ್ಮಾರ್ಟ್​ಫೋನ್ ಹೊಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕು. ಸ್ಮಾರ್ಟ್‌ಫೋನ್ ಖರೀದಿಸುವಾಗ ನೀವು ವಿಶೇಷ ಗಮನ ಹರಿಸಬೇಕಾದ ಕೆಲವು ವೈಶಿಷ್ಟ್ಯಗಳು ಮತ್ತು ಆಯ್ಕೆಗಳಿವೆ. ಅವುಗಳನ್ನು ಈಗ ನೋಡೋಣ.

ಪ್ರೊಸೆಸರ್

ಮೊಬೈಲ್ ಖರೀದಿಸುವಾಗ ಮೊದಲು ಪರಿಶೀಲಿಸಬೇಕಾದದ್ದು ಪ್ರೊಸೆಸರ್. ಈ ಪ್ರೊಸೆಸರ್ ಫೋನ್‌ನ ಹೃದಯ ವಿದ್ದಂತೆ. ಪ್ರಸ್ತುತ, ಮಾರುಕಟ್ಟೆಯಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್, ಮೀಡಿಯಾ ಟೆಕ್, ಸ್ಯಾಮ್‌ಸಂಗ್ ಎಕ್ಸಿನೋಸ್‌ನಂತಹ ಅನೇಕ ಪ್ರೊಸೆಸರ್‌ಗಳು ಲಭ್ಯವಿದೆ. ಯಾವ ಪ್ರೊಸೆಸರ್ ಯಾವ ಬೆಲೆಗೆ ಲಭ್ಯವಿದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ಉತ್ತಮ ಪ್ರೊಸೆಸರ್ ಕಡಿಮೆ ಬೆಲೆಗೆ ಲಭ್ಯವಿದ್ದರೆ, ಅದನ್ನು ಉತ್ತಮ ಡೀಲ್ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ
Image
ಈ ವಸ್ತುಗಳನ್ನು ಫ್ರಿಡ್ಜ್ ಮೇಲೆ ಇಡಬೇಡಿ: ಇಟ್ಟಿದ್ದರೆ ತಕ್ಷಣವೇ ತೆಗೆಯಿರಿ
Image
ಸ್ಯಾಮ್‌ಸಂಗ್ ಸೂಪರ್ ಬಿಗ್ ಸೆಲೆಬ್ರೇಷನ್ಸ್: AI ಸ್ಮಾರ್ಟ್ ಟಿವಿ ಮೇಲೆ ಆಫರ್
Image
ಸ್ಮಾರ್ಟ್​ಫೋನ್​ನಲ್ಲಿ ಲೊಕೇಷನ್ ಆನ್ ಇದ್ರೆ ಬ್ಯಾಟರಿ ಎಷ್ಟು ಖಾಲಿ ಆಗುತ್ತೆ?
Image
ಅಮೆಜಾನ್-ಫ್ಲಿಪ್‌ಕಾರ್ಟ್: ಐಫೋನ್ 16ಗೆ ಯಾವುದರಲ್ಲಿ ಕಡಿಮೆ ಬೆಲೆ ಇದೆ?

ಡಿಸ್​ಪ್ಲೇ

ಮೊಬೈಲ್ ಖರೀದಿಸುವ ಮೊದಲು ಪರಿಗಣಿಸಬೇಕಾದ ಇನ್ನೊಂದು ಪ್ರಮುಖ ವಿಷಯವೆಂದರೆ ಡಿಸ್​ಪ್ಲೇ. ಇವುಗಳಲ್ಲಿ LCD, LED, AMOLED ಮುಂತಾದ ಹಲವು ವಿಧಗಳಿವೆ. ಇವುಗಳಲ್ಲಿ LED ಮತ್ತು AMOLED ಇತ್ತೀಚಿನ ತಂತ್ರಜ್ಞಾನದ ಡಿಸ್​ಪ್ಲೇಗಳಾಗಿವೆ. LCD ಸ್ವಲ್ಪ ಹಳೆಯ ತಂತ್ರಜ್ಞಾನ. ಅದು ಅಷ್ಟು ಉತ್ತಮವಾಗಿಲ್ಲದಿರಬಹುದು. ಸ್ಕ್ರೀನ್ ರೆಸಲ್ಯೂಶನ್ ವಿಷಯದಲ್ಲಿ, ನೀವು ಕನಿಷ್ಠ ಪೂರ್ಣ HD ಅಥವಾ ಹೆಚ್ಚಿನದನ್ನು ಆಯ್ಕೆ ಮಾಡಬೇಕು. ಅಂದರೆ, 2K, 4K. ಸಾಮಾನ್ಯ HD ಡಿಸ್​ಪ್ಲೇಯನ್ನು ಪಡೆಯುವುದರಿಂದ ಡಿಸ್​ಪ್ಲೇ ಗುಣಮಟ್ಟ ಸುಧಾರಿಸುವುದಿಲ್ಲ. ಅಲ್ಲದೆ, ರಿಫ್ರೆಶ್ ದರ ಕನಿಷ್ಠ 90 Hz ಆಗಿರಬೇಕು.

Tech Utility: ಈ ವಸ್ತುಗಳನ್ನು ಫ್ರಿಡ್ಜ್ ಮೇಲೆ ಇಡಬೇಡಿ: ಇಟ್ಟಿದ್ದರೆ ತಕ್ಷಣವೇ ತೆಗೆಯಿರಿ

ಕ್ಯಾಮೆರಾ

ಇತ್ತೀಚಿನ ದಿನಗಳಲ್ಲಿ, ಫೋನ್‌ನಲ್ಲಿ ಕ್ಯಾಮೆರಾ ಬಹಳ ಮುಖ್ಯ. ಆದರೆ, ಮೊಬೈಲ್ ಕಂಪನಿಗಳು ಕ್ಯಾಮೆರಾದ ವಿಷಯದಲ್ಲಿ ಮೋಸ ಮಾಡುತ್ತವೆ. ಹೆಚ್ಚು ಮೆಗಾಪಿಕ್ಸೆಲ್‌ಗಳು, ಕ್ಯಾಮೆರಾ ಉತ್ತಮ ಎಂದು ಅವರು ಪ್ರಚಾರ ಮಾಡುತ್ತಾರೆ. ಆದರೆ, ಅದು ನಿಜವಲ್ಲ. ಫೋಟೋ ಗುಣಮಟ್ಟವು ಸಂವೇದಕವನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, ಸ್ಯಾಮ್‌ಸಂಗ್ ಎಸ್ ಸರಣಿಯ 16 MP ಕ್ಯಾಮೆರಾಗಳು ಮತ್ತು ಐಫೋನ್‌ಗಳು ಚೀನೀ ಬ್ರಾಂಡ್‌ಗಳ ಮೊಬೈಲ್‌ಗಳಲ್ಲಿರುವ 200 MP ಕ್ಯಾಮೆರಾಗಳಿಗಿಂತ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತವೆ. ಆದ್ದರಿಂದ ಗೂಗಲ್​ನಲ್ಲಿ ಕ್ಯಾಮೆರಾ ಗುಣಮಟ್ಟವನ್ನು ಪರಿಶೀಲಿಸುವುದು ಉತ್ತಮ.

ಸಂಗ್ರಹಣೆ, ಬ್ಯಾಟರಿ

ಬ್ಯಾಟರಿ ಮೊಬೈಲ್​ನ ಬಹು ಮುಖ್ಯವಾದ ಭಾಗ. ಹಾಗಾಗಿ, ಬ್ಯಾಟರಿ ಸಾಮರ್ಥ್ಯ ಕನಿಷ್ಠ 5000 mAh ಇರುವಂತೆ ನೋಡಿಕೊಳ್ಳಿ. ಅಲ್ಲದೆ, RAM ಕನಿಷ್ಠ 6 GB ಅಥವಾ ಅದಕ್ಕಿಂತ ಹೆಚ್ಚಿರಬೇಕು. ಅಲ್ಲದೆ, ಆಂತರಿಕ ಸಂಗ್ರಹಣೆ 128 GB ಅಥವಾ ಅದಕ್ಕಿಂತ ಹೆಚ್ಚಿದ್ದರೆ ಉತ್ತಮ. ಇವು ನಮ್ಮ ಇಂದಿನ ಲೈಫ್​ಸ್ಟೈಲ್​ಗೆ ಸೆಟ್ ಆಗುತ್ತದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ