ಚೀನಾ ಮೂಲದ ಪ್ರಸಿದ್ಧ ಶವೋಮಿ ಕಂಪೆನಿ ಇದೇ ಮೊದಲ ಬಾರಿಗೆ ಜೂನ್ ತಿಂಗಳ ವಿಶ್ವದ ನಂಬರ್ ಒನ್ ಸ್ಮಾರ್ಟ್ಫೋನ್ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಜೂನ್ನಲ್ಲಿ ಶವೋಮಿ ಕಂಪೆನಿ ಬರೋಬ್ಬರಿ ಶೇ. 26 ರಷ್ಟು ಬೆಳವಣಿಗೆ ಕಂಡಿದೆಯಂತೆ. ಈ ಬಗ್ಗೆ ಕೌಂಟರ್ಪ್ರಿಂಟ್ ರಿಸರ್ಚ್ ಮಾಹಿತಿ ನೀಡಿದೆ. ಭಾರತ, ಚೀನಾ ಹಾಗೂ ಯುರೋಪ್ ದೇಶಗಳಲ್ಲಿ ಶವೋಮಿಯ ಸ್ಮಾರ್ಟ್ಫೋನ್ ಅತಿ ಹೆಚ್ಚು ಸೇಲ್ ಕಂಡಿದೆಯಂತೆ. ಈ ಮೂಲಕ ಸ್ಯಾಮ್ಸಂಗ್, ಆ್ಯಪಲ್ ಕಂಪೆನಿಯನ್ನು ಹಿಂದಿಕ್ಕಿ ಶವೋಮಿ ಹೊಸ ಸಾಧನೆ ಮಾಡಿದೆ.
ಇತ್ತೀಚೆಗಷ್ಟೆ ಭಾರತದಲ್ಲಿ ಕೂಡ ಶವೋಮಿ 2021ರ ಎರಡನೇ ಅವಧಿ ವೇಳೆಗೆ ಅತಿ ಹೆಚ್ಚು ಸೇಲ್ ಕಂಡು ನಂಬರ್ ಒನ್ ಸ್ಥಾನದಲ್ಲಿದೆ. ಭಾರತದಲ್ಲಿ ಶೇ. 28 ರಷ್ಟು ಮಾರ್ಕೆಟ್ ಅನ್ನು ಶವೋಮಿ ಹೊಂದಿದೆ. ಹೀಗಾಗಿ ಸ್ಯಾಮ್ಸಂಗ್, ವಿವೋ, ರಿಯಲ್ ಮಿ ಮತ್ತು ಒಪ್ಪೋಗಳನ್ನು ಹಿಂದಿಕ್ಕಿ ಶವೋಮಿ ಕಳೆದ ಎರಡು ವರ್ಷಗಳಿಂದ ನಂಬರ್ ಒನ್ ಸ್ಥಾನದಲ್ಲಿಯೇ ಭದ್ರವಾಗಿದೆ.
ಇನ್ನೂ ಶವೋಮಿ ಕಂಪೆನಿಯ ರೆಡ್ಮಿ 9 ಸರಣಿ ಮತ್ತು ರೆಡ್ಮಿ ನೋಟ್ 10 ಸರಣಿಯ ಸ್ಮಾರ್ಟ್ಫೊನ್ಗಳು ಭಾರತದಲ್ಲಿ ಅತಿ ಹೆಚ್ಚಿ ಮಾರಾಟವಾಗಿದೆಯಂತೆ. ಜೊತೆಗೆ ಸ್ಯಾಮ್ಸಂಗ್ನ ಗ್ಯಾಲಕ್ಸಿ M ಸರಣಿ ಮತ್ತು F ಸರಣಿಯ ಫೋನ್ ಕೂಡ ಭರ್ಜರಿ ಸೇಲ್ ಕಂಡಿದೆ. ಒಟ್ಟಾರೆಯಾಗಿ ಭಾರತದಲ್ಲಿ 2021 ಕ್ವಾರ್ಟರ್ 2 ನಲ್ಲಿ 33 ಮಿಲಿಯನ್ ಯುನಿಟ್ ಸೇಲ್ ಆಗಿವೆ. ಕೋವಿಡ್ ಲಾಕ್ಡೌನ್ ಕಾರಣದಿಂದಾಗಿ ಆಫ್ಲೈನ್ ಸ್ಟೋರ್ಗಳಲ್ಲಿ ಮಾರಾಟ ಕಡಿಮೆ ಆಗಿದ್ದು ಆನ್ಲೈನ್ನಲ್ಲೇ ಅತಿ ಹೆಚ್ಚು ಖರೀದಿ ಮಾಡಿದ್ದಾರಂತೆ.
ಶವೋಮಿ ಇಷ್ಟರ ಮಟ್ಟಿಗೆ ಯಶಸ್ಸು ಕಾಣಲು ಕಾರಣ ಇದು ಬಿಡುಗಡೆ ಮಾಡಿದ್ದ ರೆಡ್ಮಿ 9 ಸರಣಿ ಮತ್ತು ರೆಡ್ಮಿ ನೋಟ್ 10 ಸರಣಿಯ ಸ್ಮಾರ್ಟ್ಫೋನ್ಗಳು ಎಂದು ಹೇಳಲಾಗಿದೆ. ಟಾಪ್ 5 ಮೊಬೈಲ್ಗಳ ಪೈಕಿ ಮೊದಲ 4 ಸ್ಥಾನದಲ್ಲಿ ರೆಡ್ಮಿಯೇ ಇವೆ. ಅವುಗಳು ರೆಡ್ಮಿ 9A, ರೆಡ್ಮಿ 9 ಪವರ್, ರೆಡ್ಮಿ ನೋಟ್ 10 ಮತ್ತು ರೆಡ್ಮಿ 9 ಆಗಿವೆ. ಇದರಲ್ಲಿ ರೆಡ್ಮಿ 9A ಅತಿ ಹೆಚ್ಚು ಸೇಲ್ ಕಂಡ ಸ್ಮಾರ್ಟ್ಫೋನ್ ಆಗಿದೆ.
ಉಳಿದಂತೆ ಸ್ಯಾಮ್ಸಂಗ್, ವಿವೋ, ರಿಯಲ್ ಮಿ ಕಂಪೆನಿ ಭಾರತದಲ್ಲಿ ತನ್ನ ಬ್ರ್ಯಾಂಡ್ ಅನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಷ್ಟೊಂದು ಉತ್ತಮವಾಗಿ ಗುರುತಿಸಿಕೊಂಡಿಲ್ಲ. ಸ್ಯಾಮ್ಸಂಗ್ 2020 ರಲ್ಲಿ ನಂಬರ್ ಒನ್ ಸ್ಮಾರ್ಟ್ಫೋನ್ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿತ್ತು.
ಸ್ಮಾರ್ಟ್ಫೋನಿನ ಮೆಮೊರಿ ಹೆಚ್ಚಿಸಲು ಮೆಮೊರಿ ಕಾರ್ಡ್ ಬೇಡ: ಈ ಟ್ರಿಕ್ ಪಾಲೋ ಮಾಡಿ
(Xiaomi first time to become the number one smartphone brand in the world in June)