ಚೀನಾ ಮೂಲದ ಪ್ರಸಿದ್ಧ ಶವೋಮಿ (Xiaomi) ಕಂಪನಿ ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ತನ್ನ ನಂಬರ್ ಒನ್ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲು ಇದೀದ ಒಂದರ ಹಿಂದೆ ಒಂದರಂತೆ ಆಕರ್ಷಕ ಫೋನ್ಗಳನ್ನು ಬಿಡುಗಡೆ ಮಾಡುತ್ತಿದೆ. ತನ್ನ ರೆಡ್ಮಿ ಬ್ರ್ಯಾಂಡ್ನಡಿಯಲ್ಲಿ ಬಜೆಟ್ ಬೆಲೆಗೆ ನೂತನ ಮೊಬೈಲ್ ಪರಿಚಯಿಸುತ್ತಿದೆ. ಇದೀಗ ಮೇ 19 ರಂದು ಒಂದೇ ದಿನ ಭಾರತದಲ್ಲಿ ಎರಡು ಆಕರ್ಷಕ ಮೊಬೈಲ್ ರಿಲೀಸ್ ಮಾಡಲು ತಯಾರಿ ನಡೆಸಿದೆ. ರೆಡ್ಮಿ ತನ್ನ ಎ ಸರಣಿಯಲ್ಲಿ ಹೊಸ ರೆಡ್ಮಿ ಎ2 (Redmi A2) ಮತ್ತು ರೆಡ್ಮಿ ಎ2+ (Redmi A2+) ಎಂಬ ಎರಡು ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಲು ದಿನಾಂಕ ಪ್ರಕಟಿಸಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಮೇ 19 ರಂದು ಬೆಳಗ್ಗೆ 11 ಗಂಟೆಗೆ ಮಾರುಕಟ್ಟೆಗೆ ಅಪ್ಪಳಿಸಲಿದೆ.
ಏನಿದೆ ವಿಶೇಷತೆ?:
ರೆಡ್ಮಿ A2 ಮತ್ತು ರೆಡ್ಮಿ A2+ ಈ ಎರಡು ಸ್ಮಾರ್ಟ್‌ಫೋನ್‌ಗಳ ಡಿಸ್ ಪ್ಲೇ ಒಂದೇ ರೀತಿಯಲ್ಲಿದೆ. ಇದು 1600 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.52 ಇಂಚಿನ LCD ಡಿಸ್ ಪ್ಲೇಯನ್ನು ಹೊಂದಿವೆ. ಈ ಡಿಸ್ ಪ್ಲೇ 20:9 ರಚನೆಯ ಅನುಪಾತವನ್ನು ಪಡೆದುಕೊಂಡಿದ್ದು, ವಾಟರ್‌ಡ್ರಾಪ್ ನಾಚ್ ವಿನ್ಯಾಸದಿಂದ ಕೂಡಿದೆ. ಪ್ರೊಸೆಸರ್ ಕೂಡ ಸೇಮ್ ಇದೆ. ಮೀಡಿಯಾಟೆಕ್ ಹಿಲಿಯೋ G36SoC ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು ಆಂಡ್ರಾಯ್ಡ್ 12 (Go Edition) ಬೆಂಬಲ ನೀಡಲಾಗಿದೆ. 3GB RAM ಮತ್ತು 32GB ಇಂಟರ್ ಸ್ಟೋರೇಜ್ ಬಲವನ್ನು ಒಳಗೊಂಡಿವೆ.
Tech Tips: ಹೊಸ ಸ್ಮಾರ್ಟ್‌ಫೋನ್ ಖರೀದಿಸುವಾಗ ಕನಿಷ್ಠ ಈ ವಿಚಾರ ನೆನಪಿರಲಿ
Presenting #RedmiA2 series, our #DeshKaSmartphone which will revolutionize the way you connect & communicate.#Giveaway Time!
1. Head to the link below and follow the easy steps to win #RedmiA2
2. Share screenshot below using the hashtags
Hurry here: https://t.co/hVagBMgofl pic.twitter.com/sCWZZKrK0l— Redmi India (@RedmiIndia) May 12, 2023
ಕ್ಯಾಮೆರಾ ವಿವಾರಕ್ಕೆ ಬರುವುದಾದರೆ, ರೆಡ್ಮಿ A2 ಮತ್ತು ರೆಡ್ಮಿ A2+ ಸ್ಮಾರ್ಟ್‌ಫೋನ್‌ಗಳು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿವೆ. ಮುಖ್ಯ ಕ್ಯಾಮೆರಾ 8MP ಸೆನ್ಸಾರ್ ಹೊಂದಿದ್ದು, LED ಫ್ಲ್ಯಾಷ್ ಅನ್ನು ಒಳಗೊಂಡಿದೆ. 0.08 ಮೆಗಾಫಿಕ್ಸೆಲ್ನ ಡೆಪ್ತ್ ಸೆನ್ಸಾರ್ ನೀಡಲಾಗಿದೆ. ಇದಲ್ಲದೆ ವಿಡಿಯೋ ಕರೆಗಳು ಮತ್ತು ಸೆಲ್ಫಿಗಳಿಗಾಗಿ 5MP ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ರೆಡ್ಮಿ A2 ಮತ್ತು ರೆಡ್ಮಿ A2+ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಬೆಂಬಲಿಸಲಿದೆ. ಇದು ಮೈಕ್ರೋ-ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ನಲ್ಲಿ 10W ಚಾರ್ಜಿಂಗ್ ನೀಡಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಸಿಮ್, 4G, 2.4GHz ವೈಫೈ, ಬ್ಲೂಟೂತ್ 5.0, GPS, ಗ್ಲೋನಾಸ್ ಮತ್ತು ಗೆಲಿಲಿಯೋವನ್ನು ಬೆಂಬಲಿಸುತ್ತವೆ. 5ಜಿ ಸಪೋರ್ಟ್ ನೀಡಲಾಗಿಲ್ಲ. ಈ ಎರಡೂ ಫೋನಿನ ಫೀಚರ್ಸ್ ಬಹುತೇಕ ಒಂದೇ ಆಗಿದ್ದು ರೆಡ್ಮಿ A2+ ನಲ್ಲಿ ಫಿಂಗರ್ಪ್ರಿಂಟ್ ಸೆನ್ಸಾರ್ ಆಯ್ಕೆ ನೀಡಲಾಗಿದೆ.
ರೆಡ್ಮಿ A2 ಮತ್ತು ರೆಡ್ಮಿ A2+ ಸ್ಮಾರ್ಟ್‌ಫೋನ್ ಬೆಲೆ ಇನ್ನು ತಿಳಿದುಬಂದಿಲ್ಲ. ಆದರೆ, ಮೂಲಗಳ ಪ್ರಕಾರ ಅತಿ ಕಡಿಮೆ ಬೆಲೆ ಈ ಫೋನ್ ಮಾರಾಟ ಕಾಣಲಿದೆಯಂತೆ. ಭಾರತದಲ್ಲಿ 10,000 ರೂ. ಗಿಂತಲೂ ಕಡಿಮೆ ಬೆಲೆಗೆ ಸೇಲ್ ಕಾಣಲಿದೆ ಎಂದು ಹೇಳಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ