OnePlus Nord 3: ಬಿಡುಗಡೆಗು ಮುನ್ನ ರೋಚಕತೆ ಸೃಷ್ಟಿಸಿದ ಒನ್​ಪ್ಲಸ್ ನಾರ್ಡ್ 3 ಸ್ಮಾರ್ಟ್​ಫೋನ್​: ಫೀಚರ್ಸ್ ಏನಿದೆ ನೋಡಿ?

ವೆಬ್​ಸೈಟ್​ನ ಸೋರ್ಸ್ ಕೋಡ್​ನಲ್ಲಿ ಒನ್​ಪ್ಲಸ್ ನಾರ್ಡ್ 3 (OnePlus Nord 3) ಫೋನ್ ಕಾಣಿಸಿಕೊಂಡಿದ್ದು ಕೆಲವೇ ವಾರಗಳಲ್ಲಿ ಅನಾವರಣಗೊಳ್ಳಲಿದೆ ಎಂದು ಹೇಳಲಾಗಿದೆ.

OnePlus Nord 3: ಬಿಡುಗಡೆಗು ಮುನ್ನ ರೋಚಕತೆ ಸೃಷ್ಟಿಸಿದ ಒನ್​ಪ್ಲಸ್ ನಾರ್ಡ್ 3 ಸ್ಮಾರ್ಟ್​ಫೋನ್​: ಫೀಚರ್ಸ್ ಏನಿದೆ ನೋಡಿ?
OnePlus Nord 3
Follow us
|

Updated on: May 13, 2023 | 12:57 PM

ಇತ್ತೀಚೆಗಷ್ಟೆ ಭಾರತದಲ್ಲಿ ಒನ್​ಪ್ಲಸ್ ನಾರ್ಡ್ ಸಿಇ 3 ಲೈಟ್ (OnePlus Nord CE 3 Lite) ಹೆಸರಿನ ಫೋನನ್ನು ರಿಲೀಸ್ ಮಾಡಿ ಭರ್ಜರಿ ಸದ್ದು ಮಾಡಿದ್ದ ಪ್ರಸಿದ್ಧ ಒನ್​ಪ್ಲಸ್​ ಕಂಪನಿ ಇದೀಗ ಪುನಃ ಬಂದಿದೆ. ಸತತವಾಗಿ ಹಲವಾರು ಹೊಸ ಸ್ಮಾರ್ಟ್​ಫೋನ್​ಗಳನ್ನು (Smartphones) ಬಿಡುಗಡೆ ಮಾಡುತ್ತಿರುವ ಒನ್​ಪ್ಲಸ್ ಕಂಪನಿ ಹೊಸ ಒನ್​ಪ್ಲಸ್ ನಾರ್ಡ್ 3 (OnePlus Nord 3) ಸ್ಮಾರ್ಟ್​ಫೋನನ್ನು ರಿಲೀಸ್ ಮಾಡಲು ಮುಂದಾಗಿದೆ. ವೆಬ್​ಸೈಟ್​ನ ಸೋರ್ಸ್ ಕೋಡ್​ನಲ್ಲಿ ಈ ಫೋನ್ ಕಾಣಿಸಿಕೊಂಡಿದ್ದು ಕೆಲವೇ ವಾರಗಳಲ್ಲಿ ಅನಾವರಣಗೊಳ್ಳಲಿದೆ ಎಂದು ಹೇಳಲಾಗಿದೆ. ಇದು ಒನ್​ಪ್ಲಸ್ ನಾರ್ಡ್ 2 ವಿನ ಮುಂದಿನ ವರ್ಷನ್ ಆಗಿದೆ. ಇದೊಂದು ಮಧ್ಯಮ ಬೆಲೆಯ ಫೋನಾಗಿದ್ದು, ಆಕರ್ಷಕ ಫೀಚರ್​ಗಳಿಂದ ಆವೃತ್ತವಾಗಿದೆ.

ಒನ್​ಪ್ಲಸ್ ನಾರ್ಡ್ 3 ಸ್ಮಾರ್ಟ್​ಫೋನ್​ನ ಅಧಿಕೃತ ಬೆಲೆ ಬಹಿರಂಗವಾಗಿಲ್ಲ. ಆದರೆ, ಮೂಲಗಳ ಪ್ರಕಾರ 30,000-35,000 ರೂ. ಒಳಗೆ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಹಿಂದೆ ಬಿಡುಗಡೆ ಆದ ಒನ್​ಪ್ಲಸ್ ನಾರ್ಡ್ 2 ಆರಂಭಿಕ ಬೆಲೆ 27,999 ರೂ. ಆಗಿತ್ತು. ಈಗ ಹೊಸ ಫೋನ್ ಸಾಕಷ್ಟು ಅಭಿವೃದ್ದಿ ಹೊಂದಿ ನೂತನ ಆಯ್ಕೆಗಳೊಂದಿಗೆ ಬರಲಿದೆ. ಈ ಫೋನಿನ ಫೀಚರ್ಸ್ ಕುರಿತ ಕೆಲ ಮಾಹಿತಿ ಆನ್​ಲೈನಲ್​ನಲ್ಲಿ ಸೋರಿಕೆ ಆಗಿದೆ.

Tech Tips: ಇನ್ನುಂದೆ ಮೊಬೈಲ್ ಕದ್ದರೆ, ಕಳೆದು ಹೋದರೆ ಟೆನ್ಶನ್ ಬೇಡ: ಸರ್ಕಾರ ನಿಮ್ಮ ಮೊಬೈಲ್ ಹುಡುಕಿ ಕೊಡುತ್ತೆ

ಇದನ್ನೂ ಓದಿ
Image
Redmi K50i: ಶಓಮಿ ರೆಡ್ಮಿ ಸ್ಮಾರ್ಟ್​ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ
Image
AGI: ‘ಹತ್ತಿಪ್ಪತ್ತು ವರ್ಷಗಳಲ್ಲಿ ಸಾರ್ವತ್ರಿಕ ಕೃತಕ ಬುದ್ಧಿಮತ್ತೆಯ ಕನಸು ಸಾಕಾರವಾದೀತು’
Image
Tech Tips: ಹೊಸ ಸ್ಮಾರ್ಟ್​ಫೋನ್ ಖರೀದಿಸುವಾಗ ಕನಿಷ್ಠ ಈ ವಿಚಾರ ನೆನಪಿರಲಿ
Image
Redmi K50i: ಕಳೆದ ವರ್ಷ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ್ದ ಈ ರೆಡ್ಮಿ ಸ್ಮಾರ್ಟ್​ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ

ಒನ್​ಪ್ಲಸ್ ನಾರ್ಡ್ 3 ಫೋನ್​ನಲ್ಲಿ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ6.7 ಇಂಚಿನ ಅಮೋಲೆಡ್‌ ಪೂರ್ಣ ಹೆಚ್‌ಡಿ+ ಡಿಸ್‌ಪ್ಲೇ ಇರುವ ಸಾಧ್ಯತೆ ಇದೆ. ಇದು 120Hz ರಿಫ್ರೆಶ್ ರೇಟ್‌ ಆಯ್ಕೆ ನೀಡಲಾಗಿದೆ. ಜೊತೆಗೆ ಬಯೋಮೆಟ್ರಿಕ್ ಭದ್ರತೆಗಾಗಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಇನ್‌ಡಿಸ್‌ಪ್ಲೇ ನಲ್ಲಿ ನೀಡಲಾಗಿದೆಯಂತೆ.

ಈ ಫೋನಿನಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್‌ ಇದ್ದರೂ ಅಚ್ಚರಿ ಪಡಬೇಕಿಲ್ಲ. ಬಲಿಷ್ಠವಾದ ಮೀಡಿಯಾಟೆಕ್ ಡೈಮನ್ಸಿಟಿ 900 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 12GB RAM ಹಾಗೂ 256GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯದೊಂದಿಗೆ ಬರಬಹುದು ಎನ್ನಲಾಗಿದೆ. ಆಂಡ್ರಾಯ್ಡ್ 13 ಬಂಬಲ ಪಡೆದಿರಲಿದೆ. ಮೈಕ್ರೊ ಎಸ್​ಡಿ ಕಾರ್ಡ್ ಮೂಲಕ ಸ್ಟೋರೇಜ್ ಅನ್ನು ಹೆಚ್ಚಿಸಬಹುದು.

ಒನ್​ಪ್ಲಸ್ ನಾರ್ಡ್ 3 ಕ್ಯಾಮೆರಾ ವಿ‍ಚಾರಕ್ಕೆ ಬಂದರೆ, ಇದರಲ್ಲಿರುವ ಹಿಂಭಾಗದ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸಾಮರ್ಥ್ಯದಲ್ಲಿ ಇರಲಿದೆ. ಇದು ಸೋನಿ ಸೆನ್ಸಾರ್ ಸಾಮರ್ಥ್ಯ ಇರುವ ಸಾಧ್ಯತೆ ಇದೆ. ಹಾಗೆಯೆ 8 ಮೆಗಾಪಿಕ್ಸೆಲ್​ನ ಸೆಕೆಂಡರಿ ಕ್ಯಾಮೆರಾ ಇರಲಿದ್ದು 2 ಮೆಗಾಪಿಕ್ಸೆಲ್​ನ ಕ್ಯಾಮೆರಾ ಕೂಡ ಇರಲಿದೆ. ಮುಂಭಾಗ ವಿಡಿಯೋ ಕರೆ ಮತ್ತು ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಈ ಸ್ಮಾರ್ಟ್‌ಫೋನ್ ದೀರ್ಘ ಸಮಯ ಬಾಳಿಕೆ ಬರುವ 5,000mAh ಬ್ಯಾಟರಿಯನ್ನು ಒಳಗೊಂಡಿರುವುದು ಬಹುತೇಕ ಖಚಿತ. ಇದು ಬರೋಬ್ಬರಿ 80W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿರುವ ಜೊತೆಗೆ ಹಾಟ್‌ಸ್ಪಾಟ್‌, ಬ್ಲೂಟೂತ್‌ 5.1, ವೈಫೈ, ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಎಂದಿನಂತೆ ಇರಲಿದೆ. ಈ ತಿಂಗಳ ಅಂತ್ಯದಲ್ಲಿ ಅಥವಾ ಮೇ ಮೊದಲ ವಾರದಲ್ಲಿ ಒನ್​ಪ್ಲಸ್ ನಾರ್ಡ್ 3 ಭಾರತದಲ್ಲಿ ಬಿಡುಗಡೆ ಆಗಲಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?