ಚೀನಾ ಮೂಲದ ಪ್ರಸಿದ್ಧ ಶವೋಮಿ (Xiaomi) ಕಂಪೆನಿ ಇತ್ತೀಚೆಗಷ್ಟೆ ಸ್ಯಾಮ್ಸಂಗ್ (Samsung), ಆ್ಯಪಲ್ (Apple) ಅನ್ನು ಹಿಂದಿಕ್ಕಿ ವಿಶ್ವದ ನಂಬರ್ ಒನ್ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆಗಿ ಹೊರಹೊಮ್ಮಿತು. ಹೊಸ ಹೊಸ ಪ್ರಯೋಗ ನಡೆಸಿ ಫೋನನ್ನು ಬಿಡುಗಡೆ ಮಾಡುವ ಶವೋಮಿ ಇತ್ತೀಚೆಗಷ್ಟೆ ಅಂಡರ್ ಡಿಸ್ ಪ್ಲೇ ಸೆಲ್ಫೀ ಕ್ಯಾಮೆರಾ ಇರುವ ಎಂಐ ಮಿಕ್ಸ್ 4 ಸ್ಮಾರ್ಟ್ಫೋನನ್ನು ಪರಿಚಯಿಸಿತ್ತು. ಸದ್ಯ ಶವೋಮಿ ಮುಂದಿನ ತಿಂಗಳು ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ.
ಶವೋಮಿ ಕಂಪೆನಿ ತನ್ನ ಸಬ್ಬ್ರ್ಯಾಂಡ್ ಎಂಐ ಅಡಿಯಲ್ಲಿ ಕಳೆದ ವರ್ಷ ಎಂಐ 10 ಸರಣಿಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿ ಭರ್ಜರಿ ಯಶಸ್ಸು ಕಂಡಿತ್ತು. ಇದರ ಬೆನ್ನಲ್ಲೆ ಎಂಐ 11ಟಿ ಸರಣಿಯ ಫೋನನ್ನು ರಿಲೀಸ್ ಮಾಡಿ ಉತ್ತಮ ವಿಮರ್ಶೆ ಪಡೆದುಕೊಂಡಿದೆ. ಸದ್ಯ ಇದರ ಮುಂದುವರೆದ ಭಾಗವಾಗಿ ಎಂಐ 11ಟಿ ಮತ್ತು 11ಟಿ ಪ್ರೊ ಸ್ಮಾರ್ಟ್ಫೋನನ್ನು ಲಾಂಚ್ ಮಾಡಲು ತಯಾರು ಮಾಡಿದೆ. ಮುಂದಿನ ತಿಂಗಳು ಸೆಪ್ಟೆಂಬರ್ 23 ರಂದು ಈ ಫೋನ್ ಬಿಡುಗಡೆ ಆಗುವ ಸಾಧ್ಯತೆ ಇದೆ.
ಸದ್ಯ ಎಂಐ 11ಟಿ ಮತ್ತು 11ಟಿ ಪ್ರೊ ಸ್ಮಾರ್ಟ್‌ಫೋನ್ ಬಗ್ಗೆ ಕೆಲವು ಮಾಹಿತಿ ಹೊರಬಿದ್ದಿದ್ದು, ಇದು 120Hz ನ AMOLED ಪ್ಯಾನೆಲ್ನೊಂದಿಗೆ ಬರಲಿದೆಯಂತೆ. ಎಂಐ 11ಟಿ ಪ್ರೊ 144Hz ರಿಫ್ರೆಶ್ ರೇಟ್ ಹೊಂದಿರಲಿದೆ ಎನ್ನಲಾಗಿದೆ.
ವಿಶೇಷ ಎಂದರೆ ಇದು ಕ್ವಾಲ್ಕಂ ಸ್ನಾಪ್ಡ್ರಾಗನ್ 888 ಪ್ರೊಸೆಸರ್ನಿಂದ ಕಾರ್ಯನಿರ್ವಹಿಸುತ್ತದೆ. 64 ಮೆಗಾಫಿಕ್ಸೆಲ್ನ ಮುಖ್ಯ ಕ್ಯಾಮೆರಾ ಜೊತೆ 8 ಮೆಗಾಫಿಕ್ಸೆಲ್ನ ಆಲ್ಟ್ರಾ ವೈಡ್ ಮತ್ತು 5 ಮೆಗಾಫಿಕ್ಸೆಲ್ ಮ್ಯಾಕ್ರೊ ಸೆನ್ಸಾನ್ ಕ್ಯಾಮೆರಾ ಅಳವಡಿಸಲಾಗಿದೆಯಂತೆ.
ಎಂಐ 11ಟಿಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 1200 SoC ಪ್ರೊಸೆಸರ್ ನೀಡಲಾಗಿದ್ದು, 64 ಮೆಗಾಫಿಕ್ಸೆಲ್ನ ರಿಯರ್ ಕ್ಯಾಮೆರಾ ಇರಲಿದೆ. ಎರಡುಕೂಡ ಆಂಡ್ರಾಯ್ಡ್ 11 ನಲ್ಲಿ ಕಾರ್ಯನಿರ್ವಹಿಸಲಿದ್ದು, ಪ್ರೊ ಮಾಡೆಲ್ ಬರೋಬ್ಬರಿ 120W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿರಲಿದೆ. ಅಂತೆಯೆ ಇದರ ಬೆಲೆ ಭಾರತದಲ್ಲಿ ಅಂದಾಜಿ 42,000 – 49,000 ಒಳಗೆ ಇರಬಹುದೆಂದು ಅಂದಾಜಿಸಲಾಗಿದೆ.
ಈ ಹಿಂದೆ ಬಿಡುಗಡೆ ಆದ ಎಂಐ 11 ಸ್ಮಾರ್ಟ್‌ಫೋನ್ 6.81-ಇಂಚಿನ 2K WQHD ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿತ್ತು. ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್ ಜೊತೆಗೆ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 20ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. 4,600mAh ಸಾಮರ್ಥ್ಯದ ಬ್ಯಾಟರಿ ಸೆಟಪ್ ನೀಡಲಾಗಿತ್ತು. ಇದು ಮಿ ಟರ್ಬೊಚಾರ್ಜ್ 55W ವೈರ್ಡ್ ಮತ್ತು 50W ವಾಯರ್ ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಜೊತೆಗೆ 10W ವಾಯರ್‌ಲೆಸ್ ರಿವರ್ಸ್ ಚಾರ್ಜಿಂಗ್ ಬೆಂಬಲವೂ ಇದೆ.
Amazon: ಈ ಐದು ಪ್ರಶ್ನೆಗಳಿಗೆ ಉತ್ತರಿಸಿದ್ರೆ ಸಿಗುತ್ತೆ 25 ಸಾವಿರ ರೂ.
ಎಚ್ಚರ: ಎಂದಿಗೂ ಹೀಗೆ ಮಾಡಿದಿರಿ: ನಿಮ್ಮ ಮೊಬೈಲ್ ಕೂಡ ಬ್ಲಾಸ್ಟ್ ಆಗಬಹುದು
(Xiaomi is getting ready to launch new smartphones the Mi 11T and Mi 11T Pro)