Redmi 10 Prime: ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಬಹುನಿರೀಕ್ಷಿತ ರೆಡ್ಮಿ 10 ಪ್ರೈಮ್ ಸ್ಮಾರ್ಟ್​ಫೋನ್ ಬಿಡುಗಡೆ

| Updated By: Vinay Bhat

Updated on: Sep 03, 2021 | 12:51 PM

ರೆಡ್ಮಿ 10 ಪ್ರೈಮ್ ಸ್ಮಾರ್ಟ್​ಫೋನ್ ಜೊತೆ ರೆಡ್‌ಮಿ ಟಿಡಬ್ಲ್ಯೂಎಸ್ ಇಯರ್‌ಬಡ್ಸ್ ಕೂಡ ಲಾಂಚ್ ಆಗಿದ್ದು, ಆಪ್ಟ್​ಎಕ್ಸ್ ಕೋಡೆಕ್ ಬೆಂಬಲದೊಂದಿಗೆ ಕ್ವಾಲ್ಕಾಮ್ ಚಿಪ್‌ಸೆಟ್‌ನೊಂದಿಗೆ ಬಂದಿದೆ.

Redmi 10 Prime: ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಬಹುನಿರೀಕ್ಷಿತ ರೆಡ್ಮಿ 10 ಪ್ರೈಮ್ ಸ್ಮಾರ್ಟ್​ಫೋನ್ ಬಿಡುಗಡೆ
Redmi 10 Prime
Follow us on

ಚೀನಾ ಮೂಲದ ಶವೋಮಿ (Xiaomi) ಕಂಪೆನಿಯ ರೆಡ್ಮಿ ಸ್ಮಾರ್ಟ್​ಫೋನ್​ಗಳಿಗೆ ಭಾರತದಲ್ಲಿ ಎಲ್ಲಿಲ್ಲದ ಬೇಡಿಕೆ ಇದೆ. ಅದಕ್ಕಾಗಿಯೇ ಕಡಿಮೆ ಬೆಲೆಗೆ ಶವೋಮಿ ಆಕರ್ಷಕ ಫೀಚರ್​​ಗಳುಳ್ಳ ರೆಡ್ಮಿ ಫೋನನ್ನು ದೇಶದಲ್ಲಿ ಬಿಡುಗಡೆ ಮಾಡುತ್ತಿರುತ್ತದೆ. ಸದ್ಯ ಇದೇ ಸಾಲಿಗೆ ಮತ್ತೊಂದು ಸ್ಮಾರ್ಟ್​ಫೋನ್ ಸೇರ್ಪಡೆಯಾಗಿದೆ. ಭಾರತದಲ್ಲಿಂದು ರೆಡ್ಮಿ 10 ಪ್ರೈಮ್ (Redmi 10 Prime) ಸ್ಮಾರ್ಟ್​ಫೋನ್ ಅನಾವರಣಗೊಂಡಿದೆ. ಸಾಕಷ್ಟು ಕುತೂಹಲ ಕೆರಳಿಸಿದ್ದು ಈ ಸ್ಮಾರ್ಟ್​ಫೋನ್ ಮಧ್ಯಾಹ್ನ 12 ಗಂಟೆಗೆ ಬಿಡುಗಡೆ ಆಗಿದ್ದು, ಅತ್ಯಂತ ಕಡಿಮೆ ಬೆಲೆಗೆ ಆಕರ್ಷಕ ಫೀಚರ್​ಗಳನ್ನು ನೀಡಿದೆ.

ಒಟ್ಟು ಎರಡು ಆಯ್ಕೆಯಲ್ಲಿ ರೆಡ್ಮಿ 10 ಪ್ರೈಮ್ ಸ್ಮಾರ್ಟ್​ಫೋನ್ ಖರೀದಿಗೆ ಸಿಗಲಿದೆ. 4GB RAM ಮತ್ತು 64GB ಸ್ಟೋರೆಜ್ ಆಯ್ಕೆಗೆ 12,499 ರೂ. ಇದ್ದರೆ, 6GB RAM ಮತ್ತು 128GB ಸ್ಟೋರೆಜ್ ಸಾಮರ್ಥ್ಯಕ್ಕೆ 14,499 ರೂ. ನಿಗದಿ ಮಾಡಲಾಗುದೆ. ಪ್ರಸಿದ್ಧ ಇ ಕಾಮರ್ಸ್​ ತಾಣವಾದ ಅಮೆಜಾನ್ ಮತ್ತು ಶವೋಮಿಯ ಅಧಿಕೃತ ವೆಬ್​ಸೈಟ್​ನಲ್ಲಿ ಈ ಸ್ಮಾರ್ಟ್​ಫೋನ್ ಖರೀದಿಗೆ ಸಿಗಲಿದೆ. ಸೆಪ್ಟೆಂಬರ್ 7 ರಂದು ರೆಡ್ಮಿ 10 ಪ್ರೈಮ್ ಮೊದಲ ಸೇಲ್ ಕಾಣಲಿದೆ.

 

ರೆಡ್ಮಿ 10 ಪ್ರೈಮ್ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೋ ಜಿ 88 SoC ಪ್ರೊಸೆಸರ್ ಹೊತ್ತು ತಂದಿದ್ದು,  6.5 ಇಂಚಿನ ಪೂರ್ಣ ಹೆಚ್​ಡಿ ಪ್ಲಸ್ (1,080×2,400 ಪಿಕ್ಸೆಲ್​ಗಳು) ಅಡಾಪ್ಟಿವ್ ಸಿಂಕ್ ಡಿಸ್ಪ್ಲೇ, 90Hz ರಿಫ್ರೆಶ್ ರೇಟ್​ನಿಂದ ಕೂಡಿದೆ.

ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಈ ಪೈಕಿ ಮೊದಲನೆಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ನಿಂದ ಕೂಡಿದೆ. ಅಲ್ಟ್ರಾ ವೈಡ್ ಗಾಗಿ ಕಂಪೆನಿಯು 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಒದಗಿಸಿದೆ. 2 ಮೆಗಾಫಿಕ್ಸೆಲ್​ನ ಮ್ಯಾಕ್ರೊ ಲೆನ್ಸ್ ಮತ್ತು ಡೆಪ್ತ್ ಸೆನ್ಸಾಲ್ ನೀಡಲಾಗಿದೆ. ಇನ್ನು ಫ್ರಂಟ್‌ನಲ್ಲಿ ಸೆಲ್ಫಿಗಾಗಿ ಕಂಪನಿಯು 8 ಮೆಗಾ ಪಿಕ್ಸೆಲ್ ಕ್ಯಾಮರೆಯಾ ಒದಗಿಸಿದೆ.

ಗ್ರಾಹಕರ ಆಯ್ಕೆಯಲ್ಲಿ ಯಾವಾಗಲೂ ಮುಂದಿರುವ ರೆಡ್ಮಿ 10 ಪ್ರೈಮ್ ಸ್ಮಾರ್ಟ್‌ಫೋನಿನಲ್ಲಿ 18W ವೇಗದ ಚಾರ್ಜಿಂಗ್ ಮತ್ತು 9W ರಿವರ್ಸ್ ವೈರ್ಡ್ ಚಾರ್ಜಿಂಗ್‌ನೊಂದಿಗೆ 6000mAh ಬ್ಯಾಟರಿಯನ್ನು ಸಹ ಅಳವಡಿಸಿದೆ.

 

ಇನ್ನೂ ಇದರ ಜೊತೆ ರೆಡ್‌ಮಿ ಟಿಡಬ್ಲ್ಯೂಎಸ್ ಇಯರ್‌ಬಡ್ಸ್ ಕೂಡ ಲಾಂಚ್ ಆಗಿದ್ದು, ಆಪ್ಟ್​ಎಕ್ಸ್ ಕೋಡೆಕ್ ಬೆಂಬಲದೊಂದಿಗೆ ಕ್ವಾಲ್ಕಾಮ್ ಚಿಪ್‌ಸೆಟ್‌ನೊಂದಿಗೆ ಬಂದಿದೆ. TWS ಇಯರ್‌ಬಡ್‌ಗಳು ಬ್ಲೂಟೂತ್ v5.2 ಸಂಪರ್ಕದ ಹೊರತಾಗಿ ಆಕರ್ಷಕವಾಗಿದೆ. ಮೊದಲೇ ಹೇಳಿದಂತೆ, TWS ಇಯರ್‌ಬಸ್ 30 ಗಂಟೆಗಳ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇದು ಸ್ಪೆಷಲ್ ಪ್ರೈಸ್​ನಲ್ಲಿ ಕೇವಲ 2999 ರೂ. ಗೆ ಲಭ್ಯವಿದೆ.

ಈ ತಿಂಗಳು ಬಿಡುಗಡೆ ಆಗಲಿವೆ ಸಾಲು ಸಾಲು ಸ್ಮಾರ್ಟ್​ಫೋನ್​ಗಳು: ಇಲ್ಲಿದೆ ಪಟ್ಟಿ

Amazon app quiz: ಅಮೆಜಾನ್​ನ ಈ ಐದು ಪ್ರಶ್ನೆಗಳಿಗೆ ಉತ್ತರಿಸಿದ್ರೆ ಸಿಗುತ್ತೆ 50 ಸಾವಿರ ರೂ.

(Redmi 10 Prime and Redmi Ear buds 3 Pro launched in India Price offer and features here)