Xiaomi 13: ಮಾರುಕಟ್ಟೆಗೆ ಅಪ್ಪಳಿಸಿತು ಶವೋಮಿ 13 ಸರಣಿ: ಇದರ ಫೀಚರ್ಸ್ ಕೇಳಿದ್ರೆ ದಂಗಾಗ್ತೀರ

| Updated By: Vinay Bhat

Updated on: Dec 12, 2022 | 2:38 PM

ಶವೋಮಿ 13 ಸರಣಿ (Xiaomi 13 Series) ಮಾರುಕಟ್ಟೆಗೆ ಅಪ್ಪಳಿಸಿದೆ. ಈ ನೂತನ ಸರಣಿಯಲ್ಲಿ ಶವೋಮಿ 13 ಮತ್ತು ಶವೋಮಿ 13 ಪ್ರೊ ಎಂಬ ಎರಡು ಸ್ಮಾರ್ಟ್​ಫೋನ್​ಗಳು ಅನಾವರಣವಾಗಿದೆ.

Xiaomi 13: ಮಾರುಕಟ್ಟೆಗೆ ಅಪ್ಪಳಿಸಿತು ಶವೋಮಿ 13 ಸರಣಿ: ಇದರ ಫೀಚರ್ಸ್ ಕೇಳಿದ್ರೆ ದಂಗಾಗ್ತೀರ
Xiaomi 13 Series
Follow us on

ಸ್ಮಾರ್ಟ್​​ಫೋನ್ (Smartphone) ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಚೀನಾ ಮೂಲದ ಶವೋಮಿ ಕಂಪನಿ ಅಪರೂಪಕ್ಕೆ ಮೊಬೈಲ್​ಗಳನ್ನು ಬಿಡುಗಡೆ ಮಾಡುತ್ತಿದೆ. ಕಳೆದ ವರ್ಷಾಂತ್ಯದಲ್ಲಿ ಶವೋಮಿ (Xiaomi) ತನ್ನ ಬ್ರ್ಯಾಂಡ್​ನಡಿಯಲ್ಲಿ ಶವೋಮಿ 12 ಸರಣಿಯನ್ನು ಅನಾವರಣ ಮಾಡಿ ಧೂಳೆಬ್ಬಿಸಿತ್ತು. ಭಾರತದಲ್ಲೂ ಈ ಸ್ಮಾರ್ಟ್​ಫೋನ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಈ ಸರಣಿಯ ಮುಂದುವರೆಗ ಭಾಗವಾಗಿ ಶವೋಮಿ 13 ಸರಣಿ (Xiaomi 13 Series) ಮಾರುಕಟ್ಟೆಗೆ ಅಪ್ಪಳಿಸಿದೆ. ಈ ನೂತನ ಸರಣಿಯಲ್ಲಿ ಶವೋಮಿ 13 ಮತ್ತು ಶವೋಮಿ 13 ಪ್ರೊ ಎಂಬ ಎರಡು ಸ್ಮಾರ್ಟ್​ಫೋನ್​ಗಳು ಅನಾವರಣವಾಗಿದೆ. ಈ ಎರಡೂ ಫೋನ್​ಗಳಲ್ಲಿ ಹುಬ್ಬೇರಿಸುವಂತಹ ಫೀಚರ್​ಗಳು ಅಡಕವಾಗಿದ್ದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 2 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಈ ಫೋನಿನ (Phone) ಬೆಲೆ ಎಷ್ಟು?, ಏನೆಲ್ಲ ವಿಶೇಷತೆಗಳಿವೆ? ಎಂಬ ಕುರಿತ ಸಂಪೂರ್ಣ ಮಾಹುತಿ ಇಲ್ಲಿದೆ.

ಶವೋಮಿ 13:

ಶವೋಮಿ 13 ಸ್ಮಾರ್ಟ್‌ಫೋನ್‌ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ 6.36 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ OLED ಡಿಸ್ ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಪಡೆದುಕೊಂಡಿದ್ದು, ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 8 Gen 2 SoC ಪ್ರೊಸೆಸರ್‌ ಅಳವಡಿಸಲಾಗಿದೆ. ಹಾಗೆಯೇ 12GB RAM ಮತ್ತು 512GB ಇನ್‌ಬಿಲ್ಟ್‌ ಸ್ಟೋರೇಜ್‌ ಪಡೆದುಕೊಂಡಿದೆ.

ಇದನ್ನೂ ಓದಿ
Year Ender 2022: ಈ ವರ್ಷ 15,000 ರೂ. ಒಳಗೆ ರಿಲೀಸ್ ಆದ ಟಾಪ್ 5 ಸ್ಮಾರ್ಟ್​ಫೋನ್​ಗಳು ಇಲ್ಲಿದೆ ನೋಡಿ
Twitter Blue Tick: ಇಂದಿನಿಂದ ಟ್ವಿಟರ್ ಬ್ಲೂಟಿಕ್ ಯಾರು ಬೇಕಾದರೂ ಪಡೆಯಬಹುದು: ಬೆಲೆ ಎಷ್ಟು ಗೊತ್ತೇ?
Tech Tips: ನಿಮ್ಮ ವಾಟ್ಸ್​ಆ್ಯಪ್ ಚಾಟ್ ಬೇರೆಯವರು ಕದ್ದು ಓದುತ್ತಿರಬಹುದು: ಹೇಗೆ ತಿಳಿಯುವುದು?
Twitter down: ದೇಶಾದ್ಯಂತ ಟ್ವಿಟರ್ ಸರ್ವರ್ ಡೌನ್: ಪೇಜ್​ ಎರರ್ ಸಮಸ್ಯೆ ಎದುರಿಸಿದ ನೆಟ್ಟಿಗರು

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಇದು ಲೈಕಾ-ಕ್ಯಾಮೆರಾ ಲೆನ್ಸ್​ನ ಟ್ರಿಪಲ್ ರಿಯರ್‌ ಕ್ಯಾಮೆರಾ ಹೊಂದಿದೆ. ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 10 ಮೆಗಾಪಿಕ್ಸೆಲ್ ಮತ್ತು ಮೂರನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ. 4500mAh ಸಾಮರ್ಥ್ಯದ ಬ್ಯಾಟರಿಗೆ 67W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್‌ ಬೆಂಬಲಿಸಲಿದೆ.

Redmi Note 12 Series: ಹೊಸ ವರ್ಷದಂದು ಭಾರತಕ್ಕೆ ಅಪ್ಪಳಿಸುತ್ತಿದೆ 200MP ಕ್ಯಾಮೆರಾದ ಹೊಸ ರೆಡ್ಮಿ ಸ್ಮಾರ್ಟ್​ಫೋನ್: ಬೆಲೆ ಎಷ್ಟು?

ಶವೋಮಿ 13 ಪ್ರೊ:

ಶವೋಮಿ 13 ಪ್ರೊ ಸ್ಮಾರ್ಟ್‌ಫೋನ್‌ 6.7-ಇಂಚಿನ LTPO OLED ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್​ನಿಂದ ಕೂಡಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್‌ ಪ್ರೊಟೆಕ್ಷನ್‌ ಪಡೆದಿದೆ. ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 8 Gen 2 SoC ಪ್ರೊಸೆಸರ್‌ ಹೊಂದಿದೆ. 12GB RAM ಮತ್ತು 512GB ಇನ್‌ಬಿಲ್ಟ್‌ ಸ್ಟೋರೇಜ್‌ ಪಡೆದುಕೊಂಡಿದೆ. ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಇದರಲ್ಲಿರುವ ಮೂರೂ ಕ್ಯಾಮೆರಾಗಳು 50 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. 4820mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 120W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸಲಿದೆ.

ಸದ್ಯಕ್ಕೆ ಈ ಎರಡೂ ಸ್ಮಾರ್ಟ್​ಫೋನ್​ಗಳು ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿವೆ. ಮುಂದಿನ ವರ್ಷದ ಆರಂಭದಲ್ಲಿ ಭಾರತಕ್ಕೂ ಕಾಲಿಡುವ ನಿರೀಕ್ಷೆಯಿದೆ. ಚೀನಾದಲ್ಲಿ ಶವೋಮಿ 13 8GM RAM ಮತ್ತು 128GB ಸ್ಟೋರೇಜ್ ಮಾಡೆಲ್‌ ಬೆಲೆ CNY 3,999, ಅಂದರೆ ಭಾರತದಲ್ಲಿ ಸುಮಾರು 47,300ರೂ. ಎನ್ನಬಹುದು. ಹಾಗೆಯೇ 12GB RAM ಮತ್ತು 512GB ಸಂಗ್ರಹದ ಬೆಲೆ CNY 4,999 (ಸುಮಾರು 60,000ರೂ.). ಇನ್ನು ಶವೋಮಿ 13 ಪ್ರೊ 8GB RAM ಮತ್ತು 128GB ಸ್ಟೋರೇಜ್ ಆವೃತ್ತಿಗೆ CNY 4,999 (ಸುಮಾರು 60,000ರೂ.), 12GB RAM ಮತ್ತು 512GB ಸ್ಟೋರೇಜ್ ಮಾದರಿಯ ಬೆಲೆ CNY 6,299 (ಸುಮಾರು 74,500ರೂ) ಆಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ