ಭಾರತದಲ್ಲಿ ದಿನದಿಂದ ದಿನಕ್ಕೆ ಸ್ಮಾರ್ಟ್ಫೋನ್ಗಳು (Smartphones) ಬಿಡುಗಡೆ ಆಗುತ್ತಿರುವ ಸಂಖ್ಯೆ ಏರಿಕೆಯಾಗುತ್ತಿದೆ. ಯಾಕೆಂದರೆ ವಿದೇಶಿ ಮೊಬೈಲ್ ಬ್ರ್ಯಾಂಡ್ಗಳ ನೆಚ್ಚಿನ ತಾಣ ಭಾರತವೇ ಆಗಿದೆ. ಇಲ್ಲಿ ಬಜೆಟ್ ಬೆಲೆಯಿಂದ ಹಿಡಿದು ಹೈ–ರೇಂಜ್ ಮಾದರಿಯ ಫೋನುಗಳಿಗೆ ಭರ್ಜರಿ ಬೇಡಿಕೆ ಇದೆ. ಹೀಗಾಗಿ ತಿಂಗಳಿಗೆ ಕಡಿಮೆ ಎಂದರೂ 5-7 ಫೋನ್ಗಳು ಅನಾವರಣಗೊಳ್ಳುತ್ತದೆ. ಇದೀಗ ಇಂದು ಒಂದೇ ದಿನ ಎರಡೆರಡು ಫೋನ್ಗಳು ದೇಶದಲ್ಲಿ ರಿಲೀಸ್ ಆಗುತ್ತಿದೆ. ಶವೋಮಿ ಕಂಪನಿಯ ರೆಡ್ಮಿ ಎ1 (Redmi A1) ಫೋನ್ ಹಾಗೂ ರಿಯಲ್ ಮಿ ಸಿ33 (Realme C33) ಸ್ಮಾರ್ಟ್ಫೋನ್ಗಳು ಇಂದು ಮಧ್ಯಾಹ್ನ ದೇಶದಲ್ಲಿ ಬಿಡುಗಡೆ ಆಗಲಿದೆ. ಹಾಗಾದ್ರೆ ಈ ಫೋನುಗಳ ಬೆಲೆ ಎಷ್ಟಿರಬಹುದು?, ಏನೆಲ್ಲ ಫೀಚರ್ಸ್ ಇರಬಹುದು ಎಂಬುದನ್ನು ನೋಡೋಣ.
ರೆಡ್ಮಿ A1:
ಫ್ಲಾಟ್ ಎಡ್ಜ್ ಡಿಸೈನ್ ಹೊಂದಿರುವ ಈ ಸ್ಮಾರ್ಟ್ಫೋನ್ನಲ್ಲಿ ವಾಟರ್ಡ್ರಾಪ್ ನಾಚ್ ಡಿಸ್ ಪ್ಲೇ ನೀಡಲಾಗಿದ್ದು ಇದು 6.58 ಇಂಚಿನಿಂದ ಕೂಡಿರಲಿದೆ. 90Hz ರಿಫ್ರೆಶ್ ರೇಟ್ ನೀಡಲಾಗಿದೆ. ಮೀಡಿಯಾಟೆಕ್ ಹೀಲಿಯೊ A22 ಚಿಪ್ ಅಳವಡಿಸಲಾಗಿದ್ದು, ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
ರೆಡ್ಮಿ A1 ಸ್ಮಾರ್ಟ್‌ಫೋನ್ ಕ್ವಾಡ್ ಡ್ಯುಯೆಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದೆ ಎನ್ನಲಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ನೀಡಲಾಗಿದೆ. ಎರಡನೇ ಕ್ಯಾಮೆರಾ 2 ಡೆಪ್ತ್ ಸೆನ್ಸಾರ್‌ನಿಂದ ಕೂಡಿದೆ. ಇವುಗಳ ಜೊತಗೆ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದದು, ಇದಕ್ಕೆ ತಕ್ಕಂತೆ 18W ವೇಗದ ಚಾರ್ಜಿಂಗ್ ಬೆಂಬಲ ನೀಡಬಹುದು. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, ಡ್ಯುಯಲ್–ಬ್ಯಾಂಡ್ Wi-Fi, ಬ್ಲೂಟೂತ್ v5.0, ಮತ್ತು ಮಲ್ಟಿಫಂಕ್ಷನಲ್ NFC ಅನ್ನು ಬೆಂಬಲಿಸುತ್ತದೆ. ಇದರ ನಿಖರ ಬೆಲೆ ಬಹಿರಂಗಗೊಂಡಿಲ್ಲ. ಆದರೆ, ಶವೋಮಿ ಬಹಳ ಸಮಯದ ನಂತರ ಭಾರತದಲ್ಲಿ 10,000 ರೂ. ಒಳಗೆ ಈ ಫೋನನ್ನು ಲಾಂಚ್ ಮಾಡಲಿದೆ ಎಂಬ ಮಾತಿದೆ.
ರಿಯಲ್ ಮಿ C33:
ಈ ಸ್ಮಾರ್ಟ್‌ಫೋನ್ 6.6 ಇಂಚಿನ ಫುಲ್ HD+ ಡಿಸ್‌ಪ್ಲೇಯನ್ನು ಹೊಂದಿರಬಹುದು. ಈ ಡಿಸ್‌ಪ್ಲೇ 1,080×2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಪಡೆದುಕೊಂಡಿದ್ದು 90Hz ರಿಫ್ರೆಶ್ ರೇಟ್ ಇರಬಹುದೆಂದು ಹೇಳಲಾಗಿದೆ. ಮೀಡಿಯಾ ಟೆಕ್ ಹೀಲಿಯೊ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಬೆಂಬಲವನ್ನು ಪಡೆದಿದೆ.
ಡ್ಯುಯೆಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ನೀಡಲಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ನಲ್ಲಿರುವುದು ಕಂಪನಿ ಬಹಿರಂಗ ಪಡಿಸಿದೆ. ಎರಡನೇ ಕ್ಯಾಮೆರಾ ಎಷ್ಟು ಮೆಗಾಫಿಕ್ಸೆಲ್ ಎಂಬುದು ಇನ್ನೂ ತಿಳಿದುಬಂದಿಲ್ಲ. 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಕೂಡ ಇರಬಹುದು.
ಇನ್ನು ರಿಯಲ್‌ಮಿ C33 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಲೈಫ್ ಹೊಂದಿದ್ದು ಇದಕ್ಕೆ ಪೂರಕವಾಗಿ 18W ಕ್ವಿಕ್ ಚಾರ್ಜ್ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ. 37 ಗಂಟೆಗಳ ಕಾಲ ಸ್ಟ್ಯಾಂಡ್ ಬೈ ಟೈಮ್ ಬರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಜೊತೆಗೆ ಆಲ್ಟ್ರಾ ಸೇವಿಂಗ್ ಮೋಡ್ ಆಯ್ಕೆ ಇರಲಿದೆಯಂತೆ.
ಭಾರತದಲ್ಲಿ ರಿಯಲ್ ಮಿ C33 ಸ್ಮಾರ್ಟ್‌ಫೋನ್ ಒಟ್ಟು ಎರಡು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಲಿದೆ. ಇದರ ಖಚಿತ ಬೆಲೆ ಬಹಿರಂಗವಾಗಿಲ್ಲವಾದರೂ 3GB RAM + 32GB ಸ್ಟೋರೇಜ್ ಆವೃತ್ತಿಗೆ 9,500ರೂ. ಹಾಗೂ 4GB RAM + 64GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 10,500 ರೂ. ಇರಬಹುದೆಂದು ಅಂದಾಜಿಸಲಾಗಿದೆ.