Year Ender 2021: ಈ ವರ್ಷ 10,000 ರೂ ಒಳಗೆ ಬಿಡುಗಡೆ ಆದ ಟಾಪ್​ ಸ್ಮಾರ್ಟ್​ಫೋನ್ ಯಾವುವು: ಈಗಲೂ ಇದೆ ಬೇಡಿಕೆ

| Updated By: Vinay Bhat

Updated on: Dec 17, 2021 | 2:33 PM

Smartphone Under rs 10,000: 2021ರಲ್ಲಿ ನೀವು 10,000 ರೂ. ಕ್ಕಿಂತ ಕಡಿಮೆ ಬೆಲೆಯನ್ನು ಹೊಂದಿರುವ ಒಂದು ಸ್ಮಾರ್ಟ್‌ಫೋನ್ ಅನ್ನು ಖರೀದಿಸಲು ಯೋಜಿಸಿದ್ದರೆ ಈ ಸ್ಟೋರಿ ಮೂಲಕ ತಿಳಿದುಕೊಳ್ಳಬಹುದು. ಈ ಸ್ಮಾರ್ಟ್​ಫೋನ್​ಗೆ ಈಗಲೂ ಬೇಡಿಕೆ ಭರ್ಜರಿ ಆಗೇ ಇದೆ.

Year Ender 2021: ಈ ವರ್ಷ 10,000 ರೂ ಒಳಗೆ ಬಿಡುಗಡೆ ಆದ ಟಾಪ್​ ಸ್ಮಾರ್ಟ್​ಫೋನ್ ಯಾವುವು: ಈಗಲೂ ಇದೆ ಬೇಡಿಕೆ
2021 Best Phone Under 10k
Follow us on

ಹೊಸ ವರ್ಷಕ್ಕೆ (New Year 2022) ಇನ್ನೇನು ಕೆಲವೇ ದಿನಗಳಷ್ಟೆ ಬಾಕಿಯಿದೆ. ಹೀಗಿರುವಾಗ ಸ್ಮಾರ್ಟ್‌ಫೋನ್‌ (Smartphone) ಮಾರುಕಟ್ಟೆಯಲ್ಲಿ ಹೊಸ ಹೊಸ ಮಾದರಿಯ ಮೊಬೈಲ್​ಗಳ ಭರಾಟೆ ಜೋರಾಗಿ ಸಾಗುತ್ತಿದೆ. ಕ್ರಿಸ್ ಮಸ್ (Christmas), ನ್ಯೂ ಇಯರ್​ಗೆ ಇನ್ನಷ್ಟು ಆಕರ್ಷಕ ಫೋನ್​ಗಳು ಬಿಡುಗಡೆ ಆಗುವುದರಲ್ಲಿದೆ. ಈ ವರ್ಷ ಪ್ರಸಿದ್ಧ ಮೊಬೈಲ್ ಬ್ರ್ಯಾಂಡ್​ಗಳು ದಾಖಲೆ ಎಂಬಂತೆ ಸ್ಮಾರ್ಟ್​ಫೋನ್​ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದರಲ್ಲಿ ಆಕರ್ಷಕ ಫೀಚರ್​ಗಳ ಬಜೆಟ್ ಬೆಲೆಯ ಫೋನ್ ಕೂಡ ಸೇರಿವೆ. ಹಾಗಾದ್ರೆ 2021 ರಲ್ಲಿ (2021 Best Smartphone) ನೀವು 10,000 ರೂ. ಕ್ಕಿಂತ ಕಡಿಮೆ ಬೆಲೆಯನ್ನು ಹೊಂದಿರುವ ಒಂದು ಸ್ಮಾರ್ಟ್‌ಫೋನ್ ಅನ್ನು ಖರೀದಿಸಲು ಯೋಜಿಸಿದ್ದರೆ ಈ ಸ್ಟೋರಿ ಮೂಲಕ ತಿಳಿದುಕೊಳ್ಳಬಹುದು (Smartphone Under rs 10,000). ಈ ಸ್ಮಾರ್ಟ್​ಫೋನ್​ಗೆ ಈಗಲೂ ಬೇಡಿಕೆ ಭರ್ಜರಿ ಆಗೇ ಇದೆ.

Realme Narzo 30A: ಈ ಸ್ಮಾರ್ಟ್​ಫೋನ್​ 6.5-ಇಂಚಿನ HD+ ಡಿಸ್​ಪ್ಲೇ ಹೊಂದಿದ್ದು, ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೊ G85 ಚಿಪ್‌ಸೆಟ್ ಒಳಗೊಂಡಿದೆ. 4GB RAM ಮತ್ತು 64GB ಆನ್‌ಬೋರ್ಡ್ ಸ್ಟೋರೇಜ್ ಆಯ್ಕೆಯಲ್ಲಿ ಸಿಗಲಿದೆ. ಡ್ಯುಯಲ್-ಸಿಮ್ ಕಾರ್ಡ್‌ ಬೆಂಬಲಿಸುವ ಈ ಸ್ಮಾರ್ಟ್​ಫೋನ್​ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. 13 ಮೆಗಾಪಿಕ್ಸೆಲ್  ಪ್ರೈಮರಿ  ಕ್ಯಾಮೆರಾವನ್ನು ಇದರಲ್ಲಿದೆ. ಯುಎಸ್‌ಬಿ ಟೈಪ್-ಸಿ ಪೋರ್ಟ್ ಮೂಲಕ 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 6,000mAh ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ 8,999 ರೂ.

Motorola Moto E7 Plus: ಈ ಫೋನ್ ಕ್ಲೀನ್ Android ಅನುಭವವನ್ನು ನೀಡಲು ಭರವಸೆ ನೀಡುತ್ತದೆ. ಫೋನ್ ಬದಿಯಲ್ಲಿ ಮೀಸಲಾದ ಗೂಗಲ್ ಅಸಿಸ್ಟೆಂಟ್ ಬಟನ್‌ನೊಂದಿಗೆ 6.5-ಇಂಚಿನ ಪರದೆಯನ್ನು ಹೊಂದಿದೆ. ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನ ಮೇಲ್ಭಾಗದಲ್ಲಿ ಇರಿಸಲಾಗಿರುವ ಡ್ಯುಯಲ್-ಕ್ಯಾಮೆರಾ ಸೆಟಪ್ ಅನ್ನು ಮೊಟೊರೊಲಾ ತಂದಿದೆ. ಕ್ಯಾಮೆರಾ ವ್ಯವಸ್ಥೆಯು ಹಿಂಭಾಗದಲ್ಲಿ 48-ಮೆಗಾಪಿಕ್ಸೆಲ್ ಮತ್ತು 2-ಮೆಗಾಪಿಕ್ಸೆಲ್ ಕ್ಯಾಮೆರಾಗಳನ್ನು ಮತ್ತು ಮುಂಭಾಗದಲ್ಲಿ 8-ಮೆಗಾಪಿಕ್ಸೆಲ್ ಶೂಟರ್ ಅನ್ನು ಒಳಗೊಂಡಿದೆ. Qualcomm Snapdragon 460 SoC, ಮೈಕ್ರೋ-USB ಪೋರ್ಟ್ ಮೂಲಕ ಚಾರ್ಜ್ ಮಾಡುವ ದೊಡ್ಡ 5,000mAh ಬ್ಯಾಟರಿ ಮತ್ತು 4GB RAMಹೊಂದಿರುವ ಈ ಫೋನ್ ಇದು ರೂ. 8,999 ಕ್ಕೆ ಲಭ್ಯವಿದೆ.

Samsung Galaxy F02s: ಸ್ಯಾಮ್‌ಸಂಗ್‌ನ ಈ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ 6.5 ಇಂಚಿನ HD+ Infinity-V ಡಿಸ್​​ಪ್ಲೇ ಹೊಂದಿದೆ, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 450 SoC ಜೊತೆಗೆ 4GB RAM ಒಳಗೊಂಡಿದೆ, ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿರುವ ಈ ಸ್ಮಾರ್ಟ್​ಫೋನ್​ ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸಾರ್ ಹೊಂದಿದೆ. ಸೆಲ್ಫಿಗಾಗಿ 5 ಮೆಗಾಪಿಕ್ಸೆಲ್ ಕ್ಯಾಮೆರಾ  ನೀಡಲಾಗಿದೆ. ಧೀರ್ಘ ಕಾಲ ಬ್ಯಾಟರಿಯಾಗಿ 6,000mAh ಬ್ಯಾಟರಿಯನ್ನು ನೀಡಲಾಗಿದೆ. ಇದರ ಬೆಲೆ 9,499 ರೂ ಆಗಿದೆ.

Nokia C20 Plus: ನೋಕಿಯಾ ಸಿ 20 ಪ್ಲಸ್ 4,950mAh ಬ್ಯಾಟರಿಯೊಂದಿಗೆ 6.5-ಇಂಚಿನ HD+ ಸ್ಕ್ರೀನ್ ಮತ್ತು ಆಕ್ಟಾ-ಕೋರ್ ಯುನಿಸೋಕ್ SC9863a SoC ಯನ್ನು ಹೊಂದಿದೆ. ಜೊತೆಗೆ 3GB RAM ಆಯ್ಕೆಯಲ್ಲಿ ಸಿಗುತ್ತಿದೆ. 8 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸಾರ್ ಹೊಂದಿರುವ ಈ ಸ್ಮಾರ್ಟ್​ಫೋನ್​ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರ ಬೆಲೆ 9,999 ರೂ.

Infinix Hot 11S: ಈ ಸ್ಮಾರ್ಟ್‌ಫೋನನ್ನು ಪರಿಶೀಲಿಸಿದಾಗ ಇದರ ಬಜೆಟ್ ಬೆಲೆಗೆ ಉತ್ತಮ ಪ್ರದರ್ಶನ ನೀಡುತ್ತಿದೆ ಎಂಬುದು ಅನೇಕರ ಅಭಿಪ್ರಾಯ. ವೇಗದ ಕಾರ್ಯಕ್ಷಮತೆಯೊಂದಿಗೆ ಮೃದುವಾದ ಪ್ರದರ್ಶನವನ್ನು ಹೊಂದಿರುವ ಈ ಪೋನಿನ ಪರದೆಯು 6.78-ಇಂಚಿನದ್ದಾಗಿದೆ. ಇದು ಈ ಪಟ್ಟಿಯಲ್ಲಿರುವ ಯಾವುದೇ ಫೋನ್‌ಗಿಂತ ದೊಡ್ಡದಾಗಿದೆ. ಈ ಫೋನಿನಲ್ಲಿ ನಾವು MediaTek Helio G88, 5,000mAh ಬ್ಯಾಟರಿ ಮತ್ತು 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ನೋಡಬಹುದು. ಈ ಫೋನ್‌ನ ಬೆಲೆ 10,999 ರೂ.ಗಳು. ಆದರೆ ಗ್ರಾಹಕರು ಬ್ಯಾಂಕ್ ಕೊಡುಗೆಗಳೊಂದಿಗೆ ಬೆಲೆಯಲ್ಲಿ ಡಿಸ್ಕೌಂಟ್ಸ್ ಪಡೆಯಬಹುದು.

Realme GT 2: ಮಾರುಕಟ್ಟೆಯಲ್ಲಿ ಮೋಡಿ ಮಾಡುತ್ತಿರುವ ರಿಯಲ್‌ ಮಿ GT 2 ಸರಣಿ ಸ್ಮಾರ್ಟ್​ಫೋನ್: ಮುಂದಿನ ವಾರ ಬಿಡುಗಡೆ

WhatsApp: ವಾಟ್ಸ್​ಆ್ಯಪ್ ವಾಯ್ಸ್ ಮೆಸೇಜ್​ನಲ್ಲಿ ಹೊಸ ಫೀಚರ್: ಬಳಕೆದಾರರು ಫುಲ್ ಖುಷ್

(Here are the 2021 Year five best Smartphone under Rs 10000)