Year Ender 2022: ಅತ್ಯುತ್ತಮ ಫೀಚರ್​ಗಳಿದ್ದರೂ ಈ ವರ್ಷ ಮಾರುಕಟ್ಟೆಯಲ್ಲಿ ಫೇಲ್ ಸ್ಮಾರ್ಟ್​ಫೋನ್​ಗಳು ಯಾವುವು?

| Updated By: Vinay Bhat

Updated on: Dec 26, 2022 | 11:59 AM

Underrated Smartphones: ವಿಶೇಷ ಎಂದರೆ ಈ ವರ್ಷ ಬಿಡುಗಡೆ ಆದ ಕೆಲವು ಫೋನ್​ಗಳು ಆಕರ್ಷಕ ಫೀಚರ್​ಗಳಿಂದ ಕೂಡಿದ್ದರೂ ಅವುಗಳು ಮಾರುಕಟ್ಟೆಯಲ್ಲಿ ಮೋಡಿ ಮಾಡಲು ಫೇಲ್ ಆದವು. ಅಂಥಹ ಟಾಪ್ 5 ಫೋನ್​ಗಳ ಪಟ್ಟಿ ಇಲ್ಲಿದೆ.

Year Ender 2022: ಅತ್ಯುತ್ತಮ ಫೀಚರ್​ಗಳಿದ್ದರೂ ಈ ವರ್ಷ ಮಾರುಕಟ್ಟೆಯಲ್ಲಿ ಫೇಲ್ ಸ್ಮಾರ್ಟ್​ಫೋನ್​ಗಳು ಯಾವುವು?
Smartphones
Follow us on

2023 ರ ಹೊಸ ವರ್ಷದ (New Year 2023) ಆಗಮನಕ್ಕೆ ಇನ್ನೇನು ಕೆಲವು ದಿನಗಳಷ್ಟೆ ಬಾಕಿಯಿದೆ. ಹೀಗಿರುವಾಗ 2022ನೇ ವರ್ಷದ ಸ್ಮಾರ್ಟ್​ಫೋನ್​​ ಜಗತ್ತನ್ನು ಮೆಲುಕಿ ಹಾಕಿ ನೋಡಿದಾಗ ಈ ವರ್ಷ ತಿಂಗಳಿಗೆ ಕಡಿಮೆ ಎಂದರೂ ಐದರಿಂದ-ಏಳು ಫೋನುಗಳು ಮಾರುಕಟ್ಟೆಗೆ ಆಗಮಿಸಿವೆ. ಬಜೆಟ್ ಫೋನಿನಿಂದ ಹಿಡಿದು ಹೈ ರೇಂಜ್ ಫೋನುವರೆಗೂ ಅನೇಕ ಸ್ಮಾರ್ಟ್​ಫೋನ್​​ಗಳು (Smrtphones) ಮೋಡಿ ಮಾಡಿವೆ. ಐಫೋನ್ 14 (iPhone 14) ಸರಣಿಯಿಂದ ಹಿಡಿದು ಅತಿ ಕಡಿಮೆ ಬೆಲೆಯ ಇನ್ಫಿನಿಕ್ಸ್ ಫೋನ್​ಗಳು ಈ ವರ್ಷ ಮಾರುಕಟ್ಟೆಗೆ ಅಪ್ಪಳಿಸಿವೆ. ಇದರಲ್ಲಿ ಕೆಲವು ಸ್ಮಾರ್ಟ್​ಫೋನ್​ಗಳು ಈಗಲೂ ಟ್ರೆಂಡಿಂಗ್​ನಲ್ಲಿದ್ದು ಭರ್ಜರಿ ಸೇಲ್ ಕಾಣುತ್ತಿದ್ದರೆ, ಇನ್ನೂ ಕೆಲ ಮೊಬೈಲ್​ಗಳು ಹೇಳ ಹೆಸರಿಲ್ಲದಂತೆ ಮಾಯವಾಗಿವೆ. ವಿಶೇಷ ಎಂದರೆ ಈ ವರ್ಷ ಬಿಡುಗಡೆ ಆದ ಕೆಲವು ಫೋನ್​ಗಳು ಆಕರ್ಷಕ ಫೀಚರ್​ಗಳಿಂದ ಕೂಡಿದ್ದರೂ ಅವುಗಳು ಮಾರುಕಟ್ಟೆಯಲ್ಲಿ ಮೋಡಿ ಮಾಡಲು ಫೇಲ್ ಆದವು. ಅಂಥಹ ಟಾಪ್ 5 ಫೋನ್​ಗಳ ಪಟ್ಟಿ ಇಲ್ಲಿದೆ.

ಐಕ್ಯೂ 9 SE:

ಐಕ್ಯೂ ಕಂಪನಿ ಭಾರತದಲ್ಲಿ ಮಧ್ಯಮ ಬೆಲೆಗೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಇದೇ ಸಾಲಿನಲ್ಲಿ ರಿಲೀಸ್ ಆಗಿದ್ದು ಐಕ್ಯೂ 9 ಎಸ್​ಇ. 33,990 ರೂ. ಬೆಲೆಯ ಈ ಸ್ಮಾರ್ಟ್​ಫೋನ್​ನಲ್ಲಿ ಆಕರ್ಷಕ ಫೀಚರ್​ಗಳಿವೆ. ಈ ದರಕ್ಕೆ ಮಾರುಕಟ್ಟೆಯಲ್ಲಿರುವ ಅತ್ಯಂತ ವೇಗದ ಸ್ಮಾರ್ಟ್​ಫೋನ್ ಇದಾಗಿದೆ. ಆದರೆ, ಇದು ಮಾರುಕಟ್ಟೆಯಲ್ಲಿ ಸದ್ದು ಮಾಡಲೇಯಿಲ್ಲ. ಇದು 6.62 ಇಂಚಿನ ಫುಲ್‌ ಹೆಚ್‌ಡಿ+ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು, ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಅಳವಡಿಸಲಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೋನಿ IMX598 ಸೆನ್ಸಾರ್‌ ಅನ್ನು ನೀಡಲಾಗಿದೆ. 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 66W ಫ್ಲ್ಯಾಶ್ ಚಾರ್ಜ್ ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ.

Tecno Pova 3: 7000mAh ಬ್ಯಾಟರಿ, 50MP ಕ್ಯಾಮೆರಾ: ಕೇವಲ 9,999 ರೂ. ಗೆ ಖರೀದಿಸಿ ಟೆಕ್ನೋ ಪೊವಾ 3 ಸ್ಮಾರ್ಟ್​ಫೋನ್

ಇದನ್ನೂ ಓದಿ
Tech Tips: ಪೇಟಿಯಂ ಆ್ಯಪ್ ಮೂಲಕ ರೈಲು ಎಲ್ಲಿದೆ ಎಂದು ಟ್ರ್ಯಾಕ್ ಮಾಡುವುದು ಹೇಗೆ?: ಇಲ್ಲಿದೆ ನೋಡಿ ಟ್ರಿಕ್
Redmi Note 12 Series: ಬರೋಬ್ಬರಿ 200MP ಕ್ಯಾಮೆರಾ: ಇದುವೇ ನೋಡಿ ಹೊಸ ವರ್ಷ ಬಿಡುಗಡೆ ಆಗುವ ಮೊದಲ ಸ್ಮಾರ್ಟ್​ಫೋನ್
WhatsApp: ಇನ್ಮುಂದೆ ವಾಟ್ಸ್​ಆ್ಯಪ್​ನಲ್ಲಿ ಸಿಕ್ಕ ಸಿಕ್ಕ ಸ್ಟೇಟಸ್ ಹಾಕುವಂತಿಲ್ಲ: ಬರುತ್ತಿದೆ ಹೊಸ ರೂಲ್ಸ್
YouTube Ambient Mode: ಯೂಟ್ಯೂಬ್​ನಲ್ಲಿರುವ ಆಂಬಿಯೆಂಟ್ ಮೋಡ್ ಬಳಸುವುದು ಹೇಗೆ?

ರಿಯಲ್ ಮಿ ಜಿಟಿ ನಿಯೋ 3:

ರಿಯಲ್ ಮಿ ಈಗ ಹೆಚ್ಚಾಗಿ ಬಜೆಟ್ ಬೆಲೆಯ ಸ್ಮಾರ್ಟ್​ಫೋನ್​ಗಳಿಂದ ಗುರುತಿಸಿಕೊಂಡಿದೆ. ಇದರ ನಡುವೆ 42,999 ರೂ. ಗೆ ಬಿಡುಗಡೆ ಮಾಡಿದ ಮೊಬೈಲ್ ರಿಯಲ್ ಮಿ ಜಿಟಿ ನಿಯೋ 3. ವೇಗದ ಚಾರ್ಜರ್, ಬಲಿಷ್ಠ ಪ್ರೊಸೆಸರ್ ಮೂಲಕ ಸದ್ದು ಮಾಡಿದ್ದ ಈ ಸ್ಮಾರ್ಟ್​ಫೋನ್ ಬಿಡುಗಡೆಯ ನಂತರ ಯಶಸ್ಸು ಸಾಧಿಸಲಿಲ್ಲ. ಇದು 6.43 ಇಂಚಿನ ಹೆಚ್‌ಡಿ + AMOLED ಡಿಸ್‌ಪ್ಲೇಯನ್ನು ಹೊಂದಿದೆ. ಮೀಡಿಯಾ ಟೆಕ್ Dimensity 8100 SoC ಪ್ರೊಸೆಸರ್‌ ನೀಡಲಾಗಿದೆ. ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್​ನಲ್ಲಿದೆ. 4,500 mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಇದರೊಂದಿಗೆ 150W ಸಾಮರ್ಥ್ಯದ ಆಲ್ಟ್ರಾ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ. ಇದು ಕೇವಲ 5 ನಿಮಿಷಗಳಲ್ಲಿ ಶೇ. 50 ರಷ್ಟು ಚಾರ್ಜ್ ಆಗುತ್ತಂತೆ.

ಐಕ್ಯೂ 9T:

ಐಕ್ಯೂ 9ಟಿ ಸ್ಮಾರ್ಟ್​ಫೋನ್ ಕೂಡ ಹೊಚ್ಚಹೊಸ ಪ್ರೊಸೆಸರ್, ಫಾಸ್ಟ್ ಚಾರ್ಜರ್ ಹೊಂದಿದ್ದರೂ ಮಾರುಕಟ್ಟೆಯಲ್ಲಿ ವಿಫಲವಾಯಿತು. ಈ ಫೋನ್ 6.78 ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದೆ. ಸ್ನಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಅನ್ನು ಬೆಂಬಲಿಸುವ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಐಕ್ಯೂ 9T ಸ್ಮಾರ್ಟ್‌ಫೋನ್‌ 4,700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 120W ವೇಗದ ಚಾರ್ಜಿಂಗ್‌ ಬೆಂಬಲಿಸುತ್ತದೆ. ಕಂಪನಿ ಹೇಳಿರುವ ಪ್ರಕಾರ ಇದು 0-100% ಚಾರ್ಜ್ ಆಗಲು ಕೇವಲ 20 ನಿಮಿಷ ಸಾಕಂತೆ.

ವಿವೋ X80:

ಅತ್ಯಂತ ವೇಗದ ಆಂಡ್ರಯ್ಡ್ ಸ್ಮಾರ್ಟ್​ಫೋನ್ ಎಂಬ ಪಟ್ಟ ಪಡೆದುಕೊಂಡಿರುವ ವಿವೋ ಎಕ್ಸ್80 ಈ ವರ್ಷದ ಅನ್​ಲಕ್ಕಿ ಮೊಬೈಲ್ ಎಂದೇ ಹೇಳಬಹುದು. 79,999 ರೂ. ಬೆಲೆಯ ಈ ಮೊಬೈಲ್​ನಲ್ಲಿ ಬಲಿಷ್ಠ ಪ್ರೊಸೆಸರ್, ಅದ್ಭುತ ಕ್ಯಾಮೆರಾ ಸೇರಿದಂತೆ ಅನೇಕ ಫೀಚರ್​ಗಳಿದ್ದರೂ ಯಶಸ್ಸು ಸಾಧಿಸಲಿಲ್ಲ. ಇದು 6.78-ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಮೀಡಿಯಾಟೆಕ್‌ ಡೈಮೆನ್ಸಿಟಿ 9000 SoC ಪ್ರೊಸೆಸರ್‌ ಬಲವಿದೆ. ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX866 RGBW ಸೆನ್ಸಾರ್‌ ಹೊಂದಿದೆ. 4,500mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, 80W ಫ್ಲ್ಯಾಶ್ ಚಾರ್ಜ್ ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ.

ಮೋಟೋರೊಲಾ ಎಡ್ಜ್ 30 ಫ್ಯೂಶನ್:

ಮೋಟೋರೊಲಾ ಈ ವರ್ಷ ಕಡಿಮೆ ಬೆಲೆಗೆ ಎಡ್ಜ್ 30 ಫ್ಯೂಶನ್ ಫೋನನ್ನು ಅನಾವರಣ ಮಾಡಿತ್ತು. 39,999 ರೂ. ವಿನ ಈ ಫೋನ್​ನಲ್ಲಿ ಎಲ್ಲವೂ ಬೆಲೆಗೆ ತಕ್ಕಂತೆ ಅದ್ಭುತವಾಗಿದೆ. ಆದರೆ, ಮಾರುಕಟ್ಟೆಯಲ್ಲಿ ಫೇಲ್ ಆಯಿತು. ಇದು 6.55 ಇಂಚಿನ ಕರ್ವ್ಡ್ ಎಂಡ್‌ಲೆಸ್ ಎಡ್ಜ್ ಪೋಲ್ಡ್ ಡಿಸ್‌ಪ್ಲೇ ಹೊಂದಿದೆ. ಸ್ನಾಪ್‌ಡ್ರಾಗನ್‌ 888+ SoC ಪ್ರೊಸೆಸರ್‌ನಲ್ಲಿ ಅಳವಡಿಸಲಾಗಿದ್ದು ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಇದೆ. 4,400mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 68W ಟರ್ಬೋಪವರ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ