Tecno Pova 3: 7000mAh ಬ್ಯಾಟರಿ, 50MP ಕ್ಯಾಮೆರಾ: ಕೇವಲ 9,999 ರೂ. ಗೆ ಖರೀದಿಸಿ ಟೆಕ್ನೋ ಪೊವಾ 3 ಸ್ಮಾರ್ಟ್‌ಫೋನ್
ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ನಲ್ಲಿ ಟೆಕ್ನೋ ಪೊವಾ 3 ಫೋನ್ ಬೆಲೆ 2,000 ರೂ. ಇಳಿಕೆ ಮಾಡಲಾಗಿದೆ. ಈ ಸ್ಮಾರ್ಟ್ಫೋನ್ನಲ್ಲಿ ಬರೋಬ್ಬರಿ 7,000mAh ಸಾಮರ್ಥ್ಯದ ಅತ್ಯಂತ ದೊಡ್ಡದಾದ ಬ್ಯಾಟರಿ ಬ್ಯಾಕ್‌ಅಪ್ ನೀಡಲಾಗಿದೆ.
ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೆಚ್ಚು ಬಜೆಟ್ ಬೆಲೆಯ ಮೊಬೈಲ್ಗಳಿಗೆ (Budget Smartphone) ಹೆಸರುವಾಸಿಯಾಗಿರುವ ಪ್ರಸಿದ್ಧ ಟೆಕ್ನೋ (Tecno) ಕಂಪನಿ ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಹೊಸ ಫೋನ್ಗಳನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ತನ್ನ ಹಳೆಯ ಫೋನ್ಗಳ ಬೆಲೆಯಲ್ಲಿ ಇಳಿಕೆ ಮಾಡುವುದರಲ್ಲಿ ಟೆಕ್ನೋ ಕಂಪನಿ ಕೂಡ ಮುಂದಿದೆ. ಇದೀಗ ಟೆಕ್ನೋ ಪೊವಾ 4 ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಬೆನ್ನಲ್ಲೇ ಸಂಸ್ಥೆಯು ಹಿಂದಿನ ಟೆಕ್ನೋ ಪೊವಾ 3 (Tecno Pova 3) ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ ಮಾಡಿದೆ.
ಈ ಸ್ಮಾರ್ಟ್ಫೋನ್ನಲ್ಲಿ ಬರೋಬ್ಬರಿ 7,000mAh ಸಾಮರ್ಥ್ಯದ ಅತ್ಯಂತ ದೊಡ್ಡದಾದ ಬ್ಯಾಟರಿ ಬ್ಯಾಕ್‌ಅಪ್ ನೀಡಲಾಗಿದೆ. ಇದಿಷ್ಟೇ ಅಲ್ಲದೆ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಪಡೆದಿದೆ. ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಿಂದ ಕೂಡಿದೆ. ಹಾಗಾದರೆ ಬೆಲೆ ಕಡಿತದಿಂದ ಈ ಫೋನ್ ಈಗ ಎಷ್ಟಕ್ಕೆ ಲಭ್ಯವಿದೆ ಎಂಬುದನ್ನು ನೋಡೋಣ.
ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ನಲ್ಲಿ ಟೆಕ್ನೋ ಪೊವಾ 3 ಫೋನ್ ಬೆಲೆ 2,000 ರೂ. ಇಳಿಕೆ ಮಾಡಲಾಗಿದೆ. ಇದರ 4GB RAM + 64GB ಮತ್ತು 6GB RAM + 128GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಹೊಂದಿದ್ದು, ಬೆಲೆ ಇಳಿಕೆಯಿಂದಾಗಿ 4GB RAM + 64GB ಫೋನ್ 9,999 ರೂ. ಗಳಿಗೆ ಲಭ್ಯ ಇದೆ. ಅಂತೆಯೆ 6GB RAM + 128GB ಸ್ಟೋರೇಜ್ ವೇರಿಯಂಟ್ ಫೋನ್ ಅನ್ನು 10,999 ರೂ. ಗಳಿಗೆ ನಿಮ್ಮದಾಗಿಸಬಹುದು.
Elon Musk: ಟ್ವಿಟರ್ಗೆ ಹೊಸ ಸಿಇಒ ಹುಡುಕಾಟದಲ್ಲಿದ್ದಾರೆ ಎಲಾನ್ ಮಸ್ಕ್
ಈ ಸ್ಮಾರ್ಟ್‌ಫೋನ್ 1080 × 2460 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.9 ಇಂಚಿನ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 90Hz ರೀಫ್ರೇಶ್ ರೇಟ್ನಿಂದ ಕೂಡಿದ್ದು, 480ನಿಟ್ಸ್ ಬ್ರೈಟ್‌ನೆಶ್ ಅನ್ನು ನೀಡುತ್ತದೆ. ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೊ G88 ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿರಲಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಮೆಮೊರಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವ ಅವಕಾಶವನ್ನು ಸಹ ನೀಡಲಾಗಿದೆ.
ಟೆಕ್ನೋ ಪೊವಾ 3 ಸ್ಮಾರ್ಟ್‌ಫೋನ್ ತ್ರಿವಳಿ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್, ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ದೀರ್ಘ ಸಮಯ ಬಾಳಿಕ ಬರುವ 7,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿರಲಿದೆ. ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇದು 40 ನಿಮಿಷಗಳಲ್ಲಿ ಶೇ. 50 ಚಾರ್ಜ್ ಆಗುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ