WhatsApp: ಭಾರತದಲ್ಲಿ 37 ಲಕ್ಷಕ್ಕೂ ಅಧಿಕ ಖಾತೆ ಬ್ಯಾನ್ ಮಾಡಿದ ವಾಟ್ಸ್​ಆ್ಯಪ್: ತಪ್ಪಿಯೂ ಹೇಗೆ ಮಾಡಬೇಡಿ

TV9 Digital Desk

| Edited By: Vinay Bhat

Updated on:Dec 22, 2022 | 11:54 AM

WhatsApp Ban: ನವೆಂಬರ್ 01-30ರ ಅವಧಿಯಲ್ಲಿ ಅನೇಕ ದೂರುಗಳನ್ನು ಸ್ವೀಕರಿಸಲಾಗಿದೆ. ವಾಟ್ಸ್​ಆ್ಯಪ್​ ಸೇವಾ ಷರತ್ತುಗಳ ಉಲ್ಲಂಘನೆ ಮತ್ತು ಬಳಕೆದಾರರ ದೂರುಗಳನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದ್ದು, ಅದರಂತೆ 37.16 ಲಕ್ಷ ವಾಟ್ಸ್​ಆ್ಯಪ್​ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ.

WhatsApp: ಭಾರತದಲ್ಲಿ 37 ಲಕ್ಷಕ್ಕೂ ಅಧಿಕ ಖಾತೆ ಬ್ಯಾನ್ ಮಾಡಿದ ವಾಟ್ಸ್​ಆ್ಯಪ್: ತಪ್ಪಿಯೂ ಹೇಗೆ ಮಾಡಬೇಡಿ
WhatsApp

ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್​ಆ್ಯಪ್ ನವೆಂಬರ್ ತಿಂಗಳಲ್ಲಿ 37 ಲಕ್ಷಕ್ಕೂ ಅಧಿಕ ಭಾರತೀಯ ಖಾತೆಗಳನ್ನು ನಿರ್ಬಂಧಿಸಿದೆ. 2021 ಬಳಕೆದಾರರ ಸುರಕ್ಷತ ಕಾಯಿದೆ 4(1)(D) ಅಡಿಯಲ್ಲಿ ವಾಟ್ಸ್​ಆ್ಯಪ್ ಈ ನಿರ್ಧಾರವನ್ನು ತೆಗೆದುಕೊಂಡಿದೆ. ನವೆಂಬರ್ 01-30ರ ಅವಧಿಯಲ್ಲಿ ಅನೇಕ ದೂರುಗಳನ್ನು ಸ್ವೀಕರಿಸಲಾಗಿದೆ. ವಾಟ್ಸ್​ಆ್ಯಪ್​ (WhatsApp) ಸೇವಾ ಷರತ್ತುಗಳ ಉಲ್ಲಂಘನೆ ಮತ್ತು ಬಳಕೆದಾರರ ದೂರುಗಳನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದ್ದು, ಅದರಂತೆ 37.16 ಲಕ್ಷ ವಾಟ್ಸ್​ಆ್ಯಪ್​ ಖಾತೆಗಳನ್ನು ಬ್ಯಾನ್ (Ban) ಮಾಡಲಾಗಿದೆ ಎಂದು ವಾಟ್ಸ್​ಆ್ಯಪ್ ತಿಳಿಸಿದೆ. ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ಶೇ. 60 ರಷ್ಟು ಅಧಿಕ ಖಾತೆ ನವೆಂಬರ್​ನಲ್ಲಿ ನಿಷೇಧ ಮಾಡಲಾಗಿದೆ. ಈ ಹಿಂದೆ ಅಕ್ಟೋಬರ್​ ತಿಂಗಳಲ್ಲಿ ಕೂಡ ಭಾರತದಲ್ಲಿ 23 ಲಕ್ಷಕ್ಕೂ ಅಧಿಕತ ಖಾತೆಗಳನ್ನು ನಿಷೇಧಿಸಿದೆ ಎಂದು ವಾಟ್ಸ್​ಆ್ಯಪ್ ಹೇಳಿತ್ತು.

ಬ್ಯಾನ್‌ ಆಗಿರುವ ಖಾತೆಗಳು ಕಿರುಕುಳ, ನಕಲಿ ಮಾಹಿತಿಯನ್ನು ಫಾರ್ವರ್ಡ್ ಮಾಡುವುದು, ಇತರ ಬಳಕೆದಾರರನ್ನು ವಂಚಿಸಿರುವುದು ಕಂಡುಬಂದಿದೆ. ಇದಲ್ಲದೆ ಹಾನಿಕಾರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಈ ಖಾತೆಗಳನ್ನು ನಿಷೇಧಿಸಲಾಗಿದೆ. ಮೇ 26 ರಂದು ಜಾರಿಗೆ ಬಂದ ಹೊಸ ಐಟಿ ನಿಯಮಗಳ ಪ್ರಕಾರ ದೊಡ್ಡ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು (5 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರು) ಪ್ರತಿ ತಿಂಗಳು ವರದಿಗಳನ್ನು ಪ್ರಕಟಿಸಬೇಕು. ಈ ವರದಿಯಲ್ಲಿ ಸ್ವೀಕರಿಸಿದ ದೂರುಗಳು ಹಾಗೂ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸ್ಪಷ್ಟನೆ ನೀಡಬೇಕು.

ವಾಟ್ಸ್​ಆ್ಯಪ್ ತನ್ನ ಬಳಕೆದಾರರ ಸುರಕ್ಷತೆಗೆ ಹೆಚ್ಚು ಗಮನ ಹರಿಸುತ್ತಿದೆ. ಆದರೆ ಇದಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸುವ ಚಂದಾದಾರರ ಮೇಲೆ ವಿಷೇಧ ವಿಧಿಸುತ್ತದೆ. ಈ ಬಗ್ಗೆ ವಕ್ತಾರರೊಬ್ಬರು ಮಾತನಾಡಿ, ವಾಟ್ಸ್​ಆ್ಯಪ್ ನಿಂದನೆಯನ್ನು ತಡೆಗಟ್ಟುವ ಉದ್ಯಮದ ಮುಂಚೂಣಿಯಲ್ಲಿದೆ, ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಸಂದೇಶ ಸೇವೆಗಳ ಬಗ್ಗೆ ಹೆಚಚಿನ ಗಮನ ಹರಿಸುತ್ತಿದೆ ಎಂದಿದ್ದಾರೆ. ವಾಟ್ಸ್‌ಆ್ಯಪ್ ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ಕಾನೂನು ಬಾಹಿರ, ಅಶ್ಲೀಲ, ಮಾನಹಾನಿಕರ, ಬೆದರಿಕೆಯ, ಕಿರುಕುಳದ, ದ್ವೇಷಪೂರಿತ ಸಂದೇಶಗಳನ್ನು ಕಳುಹಿಸಿದರೆ ನಿಮ್ಮನ್ನು ವಾಟ್ಸ್‌ಆ್ಯಪ್ ಬ್ಯಾನ್ ಮಾಡುತ್ತದೆ. ಹಿಂಸಾತ್ಮಕ ಅಪರಾಧಗಳನ್ನು ಪ್ರಚೋದಿಸುವ ಅಥವಾ ಉತ್ತೇಜಿಸುವ ಸಂದೇಶಗಳನ್ನು ಕಳುಹಿಸಿದರೂ ವಾಟ್ಸ್‌ಆ್ಯಪ್ ನಿಮ್ಮನ್ನು ಬ್ಯಾನ್ ಮಾಡಬಹುದು.

ಇದನ್ನೂ ಓದಿ

Google: ವೈದ್ಯರ ಕೈಬರಹ ಅರ್ಥೈಸಲು ಗೂಗಲ್​ನಿಂದ ಹೊಸ ಆ್ಯಪ್ ಬಿಡುಗಡೆ: ಯಾವುದು ಗೊತ್ತೇ?

ವಾಟ್ಸ್​ಆ್ಯಪ್​ನಲ್ಲಿ ಬಂದಿದೆ undo ಫೀಚರ್:

ವಾಟ್ಸ್​ಆ್ಯಪ್​ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಆಕ್ಸಿಡೆಂಟಲ್‌ ಡಿಲೀಟ್‌ ಫೀಚರ್ಸ್‌ ಅನ್ನು ಅನಾವರಣ ಮಾಡಿದೆ. ಡಿಲೀಟ್‌ ಫಾರ್‌ ಎವರಿಒನ್‌ ಮಾಡುವ ಬದಲು ನೀವು ಆಕಸ್ಮಿಕವಾಗಿ ಡಿಲೀಟ್‌ ಫಾರ್‌ ಮಿ ಆಯ್ಕೆ ಬಳಸಿದಲ್ಲಿ ಈ ಫೀಚರ್ಸ್‌ ಉಪಯೋಗಕ್ಕೆ ಬರಲಿದೆ. ಅಂದರೆ ನೀವು ಡಿಲೀಟ್‌ ಫಾರ್‌ ಮಿ ಮೂಲಕ ಸಂದೇಶ ಡಿಲೀಟ್‌ ಮಾಡಿದರೆ ಅಂಡೂ ಎಂಬ ಆಯ್ಕೆ ಕಾಣುವ ಮೂಲಕ ಈ ಆಕ್ಸಿಡೆಂಟಲ್‌ ಡಿಲೀಟ್‌ ಫೀಚರ್ಸ್‌ ನಿಮ್ಮ ರಕ್ಷಣೆಗೆ ಬರಲಿದೆ. ಈ ಫೀಚರ್ಸ್‌ ನಿಮಗೆ ಒಂದು ಸ್ಮಾಲ್‌ ವಿಂಡೋದಲ್ಲಿ ನಿಮ್ಮ ಡಿಲೀಟ್‌ ಫಾರ್‌ ಮಿ ಸಂದೇಶಕ್ಕೆ ಹಿಂತಿರುಗಲು ಅವಕಾಶ ನೀಡಲಿದೆ. ಆಕ್ಸಿಡೆಂಟಲ್‌ ಫೀಚರ್ಸ್‌ ಬಳಕೆದಾರರಿಗೆ ಐದು ಸೆಕೆಂಡುಗಳ ವಿಂಡೋವನ್ನು ಒದಗಿಸಲಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada