WhatsApp: ತಕ್ಷಣವೇ ಅಪ್ಡೇಟ್ ಮಾಡಿ: ವಾಟ್ಸ್​ಆ್ಯಪ್​ನಲ್ಲಿ ಬಂದಿದೆ undo ಫೀಚರ್: ಹೇಗೆ ಬಳಸುವುದು?

WhatsApp New Feature: ಸದ್ಯ ವಾಟ್ಸ್​ಆ್ಯಪ್​ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಆಕ್ಸಿಡೆಂಟಲ್‌ ಡಿಲೀಟ್‌ ಫೀಚರ್ಸ್‌ ಅನ್ನು ಅನಾವರಣ ಮಾಡಿದೆ. ಡಿಲೀಟ್‌ ಫಾರ್‌ ಎವರಿಒನ್‌ ಮಾಡುವ ಬದಲು ನೀವು ಆಕಸ್ಮಿಕವಾಗಿ ಡಿಲೀಟ್‌ ಫಾರ್‌ ಮಿ ಆಯ್ಕೆ ಬಳಸಿದಲ್ಲಿ ಈ ಫೀಚರ್ಸ್‌ ಉಪಯೋಗಕ್ಕೆ ಬರಲಿದೆ.

| Updated By: Vinay Bhat

Updated on: Dec 20, 2022 | 12:50 PM

ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ ಈ ವರ್ಷ ಪರಿಚಯಿಸಿರುವ ಒಂದೊಂದು ಫೀಚರ್ ಕೂಡ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಅತಿ ಹೆಚ್ಚು ನೂತನ ಫೀಚರ್​ಗಳನ್ನು 2022 ರಲ್ಲಿ ಬಿಡುಗಡೆ ಮಾಡಿರುವ ವಾಟ್ಸ್​ಆ್ಯಪ್​ನಲ್ಲಿ ಇನ್ನೂ 10-15 ಅಪ್ಡೇಟ್​ಗಳು ಪರೀಕ್ಷಾ ಹಂತದಲ್ಲಿದೆ.

1 / 7
ತನ್ನ ಅಚ್ಚರಿಯ ಫೀಚರ್ ಹಾಗೂ ಯೂಸರ್ ಫ್ರೆಂಡ್ಲಿ ಮೂಲಕ ಮನಗೆದ್ದಿರುವ ವಾಟ್ಸ್​​ಆ್ಯಪ್ ಅನ್ನು ಇಂದು ಬಳಸುತ್ತಿರುವವರ ಸಂಖ್ಯೆ 2 ಬಿಲಿಯನ್ ದಾಟಿದೆ. ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ವಾರಕ್ಕೊಂದು ಹೊಸ ಅಪ್ಡೇಟ್​ಗಳನ್ನು ಘೋಷಿಸುವ ವಾಟ್ಸ್​ಆ್ಯಪ್ ಇದೀಗ ತನ್ನ ಬಹುನಿರೀಕ್ಷಿತ ಆಯ್ಕೆಯೊಂದನ್ನು ಬಳಕೆದಾರರಿಗೆ ನೀಡಿದೆ.

2 / 7
ಸದ್ಯ ವಾಟ್ಸ್​ಆ್ಯಪ್​ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಆಕ್ಸಿಡೆಂಟಲ್‌ ಡಿಲೀಟ್‌ ಫೀಚರ್ಸ್‌ ಅನ್ನು ಅನಾವರಣ ಮಾಡಿದೆ. ಡಿಲೀಟ್‌ ಫಾರ್‌ ಎವರಿಒನ್‌ ಮಾಡುವ ಬದಲು ನೀವು ಆಕಸ್ಮಿಕವಾಗಿ ಡಿಲೀಟ್‌ ಫಾರ್‌ ಮಿ ಆಯ್ಕೆ ಬಳಸಿದಲ್ಲಿ ಈ ಫೀಚರ್ಸ್‌ ಉಪಯೋಗಕ್ಕೆ ಬರಲಿದೆ.

3 / 7
ಅಂದರೆ ನೀವು ಡಿಲೀಟ್‌ ಫಾರ್‌ ಮಿ ಮೂಲಕ ಸಂದೇಶ ಡಿಲೀಟ್‌ ಮಾಡಿದರೆ ಅಂಡೂ ಎಂಬ ಆಯ್ಕೆ ಕಾಣುವ ಮೂಲಕ ಈ ಆಕ್ಸಿಡೆಂಟಲ್‌ ಡಿಲೀಟ್‌ ಫೀಚರ್ಸ್‌ ನಿಮ್ಮ ರಕ್ಷಣೆಗೆ ಬರಲಿದೆ. ಈ ಫೀಚರ್ಸ್‌ ನಿಮಗೆ ಒಂದು ಸ್ಮಾಲ್‌ ವಿಂಡೋದಲ್ಲಿ ನಿಮ್ಮ ಡಿಲೀಟ್‌ ಫಾರ್‌ ಮಿ ಸಂದೇಶಕ್ಕೆ ಹಿಂತಿರುಗಲು ಅವಕಾಶ ನೀಡಲಿದೆ. ಆಕ್ಸಿಡೆಂಟಲ್‌ ಫೀಚರ್ಸ್‌ ಬಳಕೆದಾರರಿಗೆ ಐದು ಸೆಕೆಂಡುಗಳ ವಿಂಡೋವನ್ನು ಒದಗಿಸಲಿದೆ.

4 / 7
ಇದರ ಜೊತೆಗೆ ಕಂಪ್ಯಾನಿಯನ್‌ ಮೋಡ್‌ ಆಯ್ಕೆ ಇದೀಗ ಆಯ್ದ ಕೆಲ ಬಳಕೆದಾರರಿಗೆ ಲಭ್ಯವಾಗುತ್ತಿದೆ. ಈ ಫೀಚರ್ಸ್‌ ಮೂಲಕ ಬಳಕೆದಾರರು ಏಕಕಾಲದಲ್ಲಿ ಎರಡು ಅಥವಾ ಹೆಚ್ಚಿನ ಡಿವೈಸ್‌ಗಳಲ್ಲಿ ವಾಟ್ಸ್​ಆ್ಯಪ್​​ ಬಳಸಬಹುದು. ಅಂದರೆ ನಿಮ್ಮ ವಾಟ್ಸ್​ಆ್ಯಪ್​​ ಆಕೌಂಟ್ ಅನ್ನು ಎರಡು ಮೊಬೈಲ್‌ಗಳಲ್ಲಿ ಬಳಸಬಹುದು.

5 / 7
ಇದು ಬಾರ್‌ಕೋಡ್‌ ಸ್ಕ್ಯಾನ್‌ ಮೂಲಕ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗಿದೆ. ಒಂದೇ ಸಮಯದಲ್ಲಿ ನಾಲ್ಕು ಡಿವೈಸ್‌ಗಳಲ್ಲಿ ಅಕೌಂಟ್‌ ಲಿಂಕ್‌ ಮಾಡಿದರೆ ಲಿಂಕ್ ಮಾಡಲಾದ ಎಲ್ಲಾ ಫೋನ್‌ಗಳಲ್ಲಿಯೂ ಚಾಟ್‌ಗಳು ಮತ್ತು ಡೇಟಾವನ್ನು ಬಳಕೆದಾರ ಸ್ವೀಕರಿಸುತ್ತಾನೆ.

6 / 7
ಅಂತೆಯೆ ನಿಮ್ಮ ನಂಬರ್​ಗೆ ನೀವೇ ಮೆಸೇಜ್ ಮಾಡಬಹುದಾದ ಆಯ್ಕೆಯನ್ನು ವಾಟ್ಸ್​ಆ್ಯಪ್ ಕಲ್ಪಿಸಿದೆ. ಮೆಸೇಜ್ ವಿಥ್ ಯುವರ್​ಸೆಲ್ಫ್ ಎಂಬ ಫೀಚರ್ ಕಾಂಟೆಕ್ಟ್ ಲಿಸ್ಟ್​​ನಲ್ಲಿ ಕಾಣಿಸಿಕೊಂಡಿದೆ. ವಾಟ್ಸ್​ಆ್ಯಪ್ ತೆರೆದು ನ್ಯೂ ಚಾಟ್​ನಲ್ಲಿ ಕಾಂಟೆಕ್ಟ್ ಲಿಸ್ಟ್​​ ಓಪನ್ ಮಾಡಿದರೆ ಅಲ್ಲಿ ನಿಮಗೆ ನಿಮ್ಮ ನಂಬರ್ ಕಾಣಸಿಗುತ್ತದೆ.

7 / 7
Follow us