Paytm Wallet Transit Card: ಪೇಟಿಎಂ ವಾಲೆಟ್ ಟ್ರಾನ್ಸಿಟ್ ಕಾರ್ಡ್ ಆ್ಯಕ್ಟಿವೇಟ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ಪೇಟಿಎಂ ಆ್ಯಪ್ ಮೂಲಕ ಪೇಟಿಎಂ ವಾಲೆಟ್ ಟ್ರಾನ್ಸಿಟ್ ಕಾರ್ಡ್ ಆ್ಯಕ್ಟಿವೇಟ್ ಮಾಡುವ ವಿಧಾನವನ್ನು ಹಂತ ಹಂತವಾಗಿ ಇಲ್ಲಿ ನೀಡಲಾಗಿದೆ.
ಡಿಜಿಟಲ್ ಇಂಡಿಯಾ (Digital India) ಮತ್ತು ‘ಒಂದು ದೇಶ ಒಂದು ಕಾರ್ಡ್’ (One Nation, One Card) ಅಭಿಯಾನದ ಅಂಗವಾಗಿ ಬಹು ಉಪಯೋಗಿ ಉದ್ದೇಶದೊಂದಿಗೆ ‘ಪೇಟಿಎಂ ವಾಲೆಟ್ ಟ್ರಾನ್ಸಿಟ್ ಕಾರ್ಡ್’ (Paytm Wallet Transit Card) ಅನ್ನು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (Paytm Payments Bank) ಪರಿಚಯಿಸಿದೆ. ಪೇಟಿಎಂ ವಾಲೆಟ್ ಜತೆ ಲಿಂಕ್ ಆಗಿರುವ ಈ ಕಾರ್ಡ್ ಅನ್ನು ದೇಶದ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಹಣಕಾಸು ವಹಿವಾಟಿಗೆ ಬಳಸಬಹುದಾಗಿದೆ. ಬಹು ಉಪಯೋಗಿ ಕಾರ್ಡ್ ಇದಾಗಿರುವುದರಿಂದ ಸಾರ್ವಜನಿಕ ಸಾರಿಗೆಗಳಾದ ಬಸ್, ರೈಲು ಹಾಗೂ ಮೆಟ್ರೋಗಳಲ್ಲಿ ಹಣಕಾಸು ವ್ಯವಹಾರಗಳಿಗೆ ಬಳಸಬಹುದಾಗಿದೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಖಾತೆ ಇಲ್ಲದಿದ್ದರೆ ಪೇಟಿಎಂ ವಾಲೆಟ್ ಟ್ರಾನ್ಸಿಟ್ ಕಾರ್ಡ್ ಅನ್ನು ಆ್ಯಕ್ಟಿವೇಟ್ ಮಾಡಲಾಗದು ಎಂದು ಪೇಟಿಎಂ ತಿಳಿಸಿದೆ. ಹಾಗೆಂದು ಖಾತೆ ಇರುವ ಗ್ರಾಹಕರು ಕಾರ್ಡ್ಗಾಗಿ ಹೆಚ್ಚುವರಿ ಖಾತೆ ತೆರೆಯಬೇಕಾಗಿಲ್ಲ. ಬದಲಿಗೆ ವಾಲೆಟ್ ಅನ್ನು ಟಾಪ್ ಅಪ್ ಮಾಡಿದರೆ ಸಾಕು. ಕಾರ್ಡ್ ನೇರವಾಗಿ ವಾಲೆಟ್ ಜತೆ ಲಿಂಕ್ ಆಗಿರುವುದರಿಂದ ವಾಲೆಟ್ಗೆ ಟಾಪ್ ಅಪ್ ಮಾಡುವುದು ಅಗತ್ಯ.
ಪೇಟಿಎಂ ಆ್ಯಪ್ ಮೂಲಕ ಕಾರ್ಡ್ಗೆ ಅಪ್ಲೈ ಮಾಡುವುದು ಹೇಗೆ?
ಪೇಟಿಎಂ ಆ್ಯಪ್ ಮೂಲಕ ಪೇಟಿಎಂ ವಾಲೆಟ್ ಟ್ರಾನ್ಸಿಟ್ ಕಾರ್ಡ್ ಆ್ಯಕ್ಟಿವೇಟ್ ಮಾಡುವ ವಿಧಾನವನ್ನು ಹಂತ ಹಂತವಾಗಿ ಇಲ್ಲಿ ನೀಡಲಾಗಿದೆ.
- ಸ್ಮಾರ್ಟ್ಫೋನ್ನಲ್ಲಿ ಪೇಟಿಎಂ ಆ್ಯಪ್ ಓಪನ್ ಮಾಡಿ.
- ಪೇಟಿಎಂ ವಾಲೆಟ್ನಲ್ಲಿರುವ Icon.S ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಪೇಟಿಎಂ ವಾಲೆಟ್ ಟ್ರಾನ್ಸಿಟ್ ಕಾರ್ಡ್ ಟ್ಯಾಬ್ ಕಾಣುವ ವರೆಗೆ ಸ್ಕ್ರಾಲ್ಡೌನ್ ಮಾಡಿ. ನಂತರ ‘ಆ್ಯಕ್ಟಿವೇಟ್ ನೌ’ ಬಟನ್ ಕ್ಲಿಕ್ ಮಾಡಿ.
- ಹೊಸ ಸ್ಕ್ರೀನ್ ಪಾಪ್-ಅಪ್ ಆಗುತ್ತದೆ. ಸ್ಕ್ರೀನ್ನ ಕೆಳಭಾಗದ ವರೆಗೆ ಸ್ಕ್ರಾಲ್ ಮಾಡಿ ‘ಆ್ಯಕ್ಟಿವೇಟ್’ ಬಟನ್ ಪ್ರೆಸ್ ಮಾಡಿ.
- ಈಗ ನಿಮ್ಮ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಪಾಸ್ಕೋಡ್ ಅನ್ನು ನಮೂದಿಸಿ.
- ‘ಆ್ಯಕ್ಟಿವೇಟ್ ನೌ’ ಆಯ್ಕೆಯನ್ನು ಟ್ಯಾಪ್ ಮಾಡಿ.
- ಈಗ ನಿಮ್ಮ ಪೇಟಿಎಂ ವಾಲೆಟ್ ಟ್ರಾನ್ಸಿಟ್ ಕಾರ್ಡ್ ಆ್ಯಕ್ಟಿವೇಟ್ ಆಗಿರುತ್ತದೆ.