AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Digital Rupee: ಡಿಜಿಟಲ್ ರೂಪಾಯಿ ಬಳಸಿ ಎಫ್​ಡಿ ಇಡಬಹುದೇ?

ಪಾವತಿ ಮತ್ತು ಹಣ ವರ್ಗಾವಣೆಗೆ ಬಳಕೆಯಾಗಲಿರುವ ಈ ಡಿಜಿಟಲ್ ರೂಪಾಯಿ ಮುಂದಿನ ದಿನಗಳಲ್ಲಿ ಠೇವಣಿ ಉದ್ದೇಶಕ್ಕೂ ಬಳಕೆಯಾಗಲಿದೆಯೇ? ಹಣಕಾಸು ಇಲಾಖೆಯ ರಾಜ್ಯ ಖಾತೆ ಸಚಿವ ಪಂಕಜ್ ಚೌಧರಿ ರಾಜ್ಯಸಭೆಯಲ್ಲಿ ನೀಡಿದ ಉತ್ತರದ ವಿವರ ಇಲ್ಲಿದೆ.

Digital Rupee: ಡಿಜಿಟಲ್ ರೂಪಾಯಿ ಬಳಸಿ ಎಫ್​ಡಿ ಇಡಬಹುದೇ?
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Dec 15, 2022 | 2:23 PM

Share

ಆರ್​ಬಿಐ (RBI) ಇತ್ತೀಚೆಗೆ ಪ್ರಾಯೋಗಿಕವಾಗಿ ಡಿಜಿಟಲ್ ರೂಪಾಯಿ (Digital Rupee) ಬಿಡುಗಡೆ ಮಾಡಿದ್ದು, ಆಯ್ದ ಬ್ಯಾಂಕ್​ಗಳಲ್ಲಿ ನಿರ್ದಿಷ್ಟ ಗ್ರಾಹಕರಿಗೆ ಮಾತ್ರ ಲಭ್ಯವಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೂ ಡಿಜಿಟಲ್ ರೂಪಾಯಿ ದೊರೆಯಲಿದೆ. ಸದ್ಯ ಡಿಜಿಟಲ್ ರೂಪಾಯಿಯನ್ನು ಟೋಕನ್ ರೂಪದಲ್ಲಿ ನೀಡಲಾಗುತ್ತಿದೆ. ಡಿಜಿಟಲ್ ವಾಲೆಟ್ ಮೂಲಕ ಇ-ರೂಪಾಯಿ ವಹಿವಾಟು ನಡೆಯುತ್ತಿದೆ. ಡಿಜಿಟಲ್ ರೂಪಾಯಿಯ ಚಿಲ್ಲರೆ ವಹಿವಾಟನ್ನು ಆರ್​ಬಿಐ ಪರಿಶೀಲಿಸುತ್ತಿದೆ. ಪಾವತಿ ಮತ್ತು ಹಣ ವರ್ಗಾವಣೆಗೆ ಬಳಕೆಯಾಗಲಿರುವ ಈ ಡಿಜಿಟಲ್ ರೂಪಾಯಿ ಮುಂದಿನ ದಿನಗಳಲ್ಲಿ ಠೇವಣಿ ಉದ್ದೇಶಕ್ಕೂ ಬಳಕೆಯಾಗಲಿದೆಯೇ? ಹಣಕಾಸು ಇಲಾಖೆಯ ರಾಜ್ಯ ಖಾತೆ ಸಚಿವ ಪಂಕಜ್ ಚೌಧರಿ ರಾಜ್ಯಸಭೆಯಲ್ಲಿ ನೀಡಿದ ಉತ್ತರದ ವಿವರ ಇಲ್ಲಿದೆ.

ಇ-ರೂಪಾಯಿ ಬಳಸಿ ಎಫ್​ಡಿ ಖಾತೆ ತೆರೆಯಬಹುದೇ?

ಬ್ಯಾಂಕ್​​ನಲ್ಲಿ ಇಟ್ಟ ಹಣಕ್ಕೆ ಬಡ್ಡಿ ಪಡೆಯುವಂತೆ ಭವಿಷ್ಯದಲ್ಲಿ ಡಿಜಿಟಲ್ ರೂಪಾಯಿಗೂ ಬಡ್ಡಿ ಪಡೆಯುವ ಅವಕಾಶ ದೊರೆಯಬಹುದು. ಡಿಜಿಟಲ್ ರೂಪಾಯಿಯನ್ನೂ ಇತರ ಕರೆನ್ಸಿಗಳಂತೆ ಪರಿವರ್ತಿಸಲು ಮುಂದಿನ ದಿನಗಳಲ್ಲಿ ಅವಕಾಶ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಇದು ನಿಜವಾದಲ್ಲಿ ಡಿಜಿಟಲ್ ರೂಪಾಯಿ ಬಳಸಿಕೊಂಡು ಎಫ್​ಡಿ ಠೇವಣಿ ಇಡುವುದೂ ಸಾಧ್ಯವಾಗಲಿದೆ ಎಂದು ‘ಫೈನಾನ್ಶಿಯಲ್ ಎಕ್ಸ್​​ಪ್ರೆಸ್ ಡಾಟ್​ಕಾಂ’ ವರದಿ ತಿಳಿಸಿದೆ.

ಇದನ್ನೂ ಓದಿ: Digital Rupee: ಆರ್​ಬಿಐ ಡಿಜಿಟಲ್ ರೂಪಾಯಿ ವಿಶೇಷತೆ ಬಗ್ಗೆ ಇಲ್ಲಿದೆ ಪೂರ್ಣ ವಿವರ

ಸದ್ಯ ಬಳಕೆಯಲ್ಲಿರುವ ಕರೆನ್ಸಿ ನೋಟುಗಳು ಮತ್ತು ನಾಣ್ಯಗಳ ಮುಖ ಬೆಲೆಯಲ್ಲೇ ಡಿಜಿಟಲ್ ಟೋಕನ್​ಗಳನ್ನು ನೀಡಲಾಗುತ್ತಿದೆ. ಇವುಗಳ ವಿತರಣೆ ಬ್ಯಾಂಕ್​ಗಳ ಮೂಲಕ ನಡೆಯುತ್ತಿದೆ. ಡಿಜಿಟಲ್ ವಾಲೆಟ್ ಮೂಲಕ ಗ್ರಾಹಕರು ಡಿಜಿಟಲ್ ರೂಪಾಯಿ ಮೂಲಕ ಪಾವತಿ, ಹಣ ವರ್ಗಾವಣೆ ಮಾಡಬಹುದಾಗಿದೆ. ವ್ಯಕ್ತಿಯಿಂದ ವ್ಯಕ್ತಿಗೆ, ವ್ಯಕ್ತಿಯಿಂದ ವ್ಯಾಪಾರಿಗೆ ಹಣ ಪಾವತಿ, ವರ್ಗಾವಣೆಗೆ ಅವಕಾಶವಿದೆ ಎಂದು ಸಚಿವ ಪಂಕಜ್ ಚೌಧರಿ ತಿಳಿಸಿದ್ದಾರೆ. ಬಳಕೆದಾರರಿ ಅಭಿಪ್ರಾಯ ಪಡೆದುಕೊಂಡು ಡಿಜಿಟಲ್ ರೂಪಾಯಿಯ ಕಾರ್ಯವ್ಯಾಪ್ತಿ ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಲಾಗುವುದು. ಹಂತ ಹಂತವಾಗಿ ವಿಸ್ತರಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈಗ ಡಿಜಿಟಲ್ ರೂಪಾಯಿಗೇಕಿಲ್ಲ ಬಡ್ಡಿ?

ಡಿಜಿಟಲ್ ರೂಪಾಯಿ ಸದ್ಯ ಡಿಜಿಟಲ್ ಟೋಕನ್​ಗಳ ರೂಪದಲ್ಲಿ ಬಿಡುಗಡೆಯಾಗಿದೆ. ಡಿಜಿಟಲ್ ವಾಲೆಟ್​​ ಮೂಲಕ ಇದರ ವ್ಯವಹಾರ ನಡೆಯುತ್ತಿದೆ. ಅಂದರೆ ನಮ್ಮ ಜೇಬಿಲ್ಲಿರುವ ಪರ್ಸ್​ನಲ್ಲಿ ಹಣ ಇದ್ದಂತೆಯೇ ಇದು ಡಿಜಿಟಲ್ ರೂಪದಲ್ಲಿರುತ್ತದೆ. ನಮ್ಮ ಪರ್ಸ್​ನಲ್ಲಿರುವ ಹಣಕ್ಕೆ ಹೇಗೆ ಬಡ್ಡಿ ದೊರೆಯುವುದಿಲ್ಲವೋ ಅದೇ ರೀತಿ ಡಿಜಿಟಲ್ ವಾಲೆಟ್​​ನಲ್ಲಿರುವ ಇ-ರೂಪಾಯಿಗೂ ಬಡ್ಡಿ ದೊರೆಯದು.

ಪ್ರಾಯೋಗಿಕ ಡಿಜಿಟಲ್ ರೂಪಾಯಿ ನೀಡುತ್ತಿರುವ ಬ್ಯಾಂಕ್​ಗಳು

ಡಿಜಿಟಲ್ ರೂಪಾಯಿಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡ, ಎಚ್​ಡಿಎಫ್​ಸಿ ಬ್ಯಾಂಕ್​, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಯೆಸ್ ಬ್ಯಾಂಕ್, ಐಡಿಎಫ್​ಸಿ ಫಸ್ಟ್ ಬ್ಯಾಂಕ್ ಹಾಗೂ ಎಚ್​​ಎಸ್​ಬಿಸಿ ಬ್ಯಾಂಕ್​ಗಳಲ್ಲಿ ಸದ್ಯ ಪ್ರಾಯೋಗಿಕವಾಗಿ ಚಲಾವಣೆಯಲ್ಲಿವೆ. ಬೆಂಗಳೂರು, ನವದೆಹಲಿ, ಮುಂಬೈ ಹಾಗೂ ಭುವನೇಶ್ವರಗಳಲ್ಲಿ ನಿರ್ದಿಷ್ಟ ಗ್ರಾಹಕರು ಮತ್ತು ಉದ್ಯಮಿಗಳನ್ನು ಒಳಗೊಂಡ ಬಳಕೆದಾರರ ಗುಂಪಿನಲ್ಲಿ ಮಾತ್ರ ಡಿಜಿಟಲ್ ರೂಪಾಯಿ ಚಲಾವಣೆಯಲ್ಲಿದೆ.

ಇದನ್ನೂ ಓದಿ: eRupee: ಬಂತು ಇ-ರೂಪಾಯಿ; ಕ್ರಿಪ್ಟೋ ಕರೆನ್ಸಿ ಮೇಲೆ ತೂಗುಗತ್ತಿ

ನವೆಂಬರ್ 1ರಂದು ಹೋಲ್​ಸೇಲ್ ಅಥವಾ ಸಗಟು ವಿಭಾಗದ ಪ್ರಾಯೋಗಿಕ ಡಿಜಿಟಲ್ ರೂಪಾಯಿಯನ್ನು ಬಿಡುಗಡೆ ಮಾಡಿದ್ದ ಆರ್​ಬಿಐ ಡಿಸೆಂಬರ್ 1ರಂದು ರಿಟೇಲ್ ಅಥವಾ ಚಿಲ್ಲರೆ ಬಳಕೆಯ ಡಿಜಿಟಲ್ ರೂಪಾಯಿಯನ್ನು ಬಿಡುಗಡೆ ಮಾಡಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!