Digital Rupee: ಆರ್​ಬಿಐ ಡಿಜಿಟಲ್ ರೂಪಾಯಿ ವಿಶೇಷತೆ ಬಗ್ಗೆ ಇಲ್ಲಿದೆ ಪೂರ್ಣ ವಿವರ

ಸಾಮಾನ್ಯ ಆನ್​ಲೈನ್ ಹಣಕಾಸು ಚಟುವಟಿಕೆಗಳಿಗೂ ಡಿಜಿಟಲ್ ರೂಪಾಯಿಗೂ ಏನು ವ್ಯತ್ಯಾಸವಿದೆ? ಕೇಂದ್ರೀಯ ಬ್ಯಾಂಕ್​ಗಳ ಡಿಜಿಟಲ್ ರೂಪಾಯಿಯಿಂದ ಜನಸಾಮಾನ್ಯರಿಗೆ ಪ್ರಯೋಜನವಾಗಲಿದೆಯೇ? ಈ ಪ್ರಶ್ನೆಗಳಿಗೆ ಬ್ಯಾಂಕಿಂಗ್ ತಜ್ಞರು ನೀಡಿರುವ ಉತ್ತರ ಇಲ್ಲಿದೆ.

Digital Rupee: ಆರ್​ಬಿಐ ಡಿಜಿಟಲ್ ರೂಪಾಯಿ ವಿಶೇಷತೆ ಬಗ್ಗೆ ಇಲ್ಲಿದೆ ಪೂರ್ಣ ವಿವರ
ಸಾಂದರ್ಭಿಕ ಚಿತ್ರ
Follow us
| Updated By: ಗಣಪತಿ ಶರ್ಮ

Updated on: Nov 30, 2022 | 3:20 PM

ರಿಟೇಲ್ ಅಥವಾ ಚಿಲ್ಲರೆ ಬಳಕೆಯ ಡಿಜಿಟಲ್ ರೂಪಾಯಿಯನ್ನು (Digital Rupee) ಆರ್​ಬಿಐ (RBI) ಪ್ರಾಯೋಗಿಕವಾಗಿ ಬಿಡುಗಡೆ ಮಾಡುತ್ತಿದೆ. ಬೆಂಗಳೂರು (Bengaluru) ಸೇರಿದಂತೆ ದೇಶದ ನಾಲ್ಕು ನಗರಗಳಲ್ಲಿ ರಿಟೇಲ್ ಇ-ರೂಪಾಯಿ ಬಿಡುಗಡೆಯಾಗುತ್ತಿದೆ. ಸದ್ಯ ಆಯ್ದ ಪ್ರದೇಶಗಳಲ್ಲಿ ನಿರ್ದಿಷ್ಟ ಗ್ರಾಹಕರು ಮತ್ತು ಉದ್ಯಮಿಗಳನ್ನು ಒಳಗೊಂಡ ಬಳಕೆದಾರರ ಗುಂಪಿನಲ್ಲಿ ಮಾತ್ರ ಡಿಜಿಟಲ್ ರೂಪಾಯಿ ಚಲಾವಣೆಗೆ ಬರುತ್ತಿದೆ. ಮುಂದೊಂದು ದಿಜ ಸಾರ್ವಜನಿಕರಿಗೂ ಇದು ಬಳಕೆಗೆ ಲಭ್ಯವಾಗಲಿದೆ. ಹಾಗಿದ್ದರೆ ಸಾಮಾನ್ಯ ಆನ್​ಲೈನ್ ಹಣಕಾಸು ಚಟುವಟಿಕೆಗಳಿಗೂ (Traditional e-Transactions) ಡಿಜಿಟಲ್ ರೂಪಾಯಿಗೂ ಏನು ವ್ಯತ್ಯಾಸವಿದೆ? ಕೇಂದ್ರೀಯ ಬ್ಯಾಂಕ್​ಗಳ ಡಿಜಿಟಲ್ ರೂಪಾಯಿಯಿಂದ (CBDCs) ಜನಸಾಮಾನ್ಯರಿಗೆ ಪ್ರಯೋಜನವಾಗಲಿದೆಯೇ? ಈ ಪ್ರಶ್ನೆಗಳಿಗೆ ಬ್ಯಾಂಕಿಂಗ್ ತಜ್ಞರು ನೀಡಿರುವ ಉತ್ತರ ಇಲ್ಲಿದೆ. ಡಿಜಿಟಲ್ ರೂಪಾಯಿಗೆ ಸಂಬಂಧಿಸಿ ತಜ್ಞರು ನೀಡಿರುವ ವಿವರ ಹೀಗಿದೆ.

ರಿಟೇಲ್ ಆವೃತ್ತಿಯಲ್ಲಿ ಹೇಗಿರಲಿದೆ ಡಿಜಿಟಲ್ ರೂಪಾಯಿ?

ಡಿಜಿಟಲ್ ರೂಪಾಯಿಯು ಡಿಜಿಟಲ್ ಟೋಕನ್ ರೂಪದಲ್ಲಿ ಇರಲಿದೆ. ಸದ್ಯ ಬಳಕೆಯಲ್ಲಿರುವ ಕರೆನ್ಸಿ ನೋಟುಗಳು ಮತ್ತು ನಾಣ್ಯಗಳ ಮುಖ ಬೆಲೆಯಲ್ಲೇ ಡಿಜಿಟಲ್ ಟೋಕನ್​ಗಳು ಮುದ್ರಿತವಾಗಿರಲಿವೆ. 10, 100, 200, 500 ರೂ. ಮುಖಬೆಲೆಯ ಡಿಜಿಟಲ್ ರೂಪಾಯಿಯೂ ದೊರೆಯಲಿದೆ. 50 ಪೈಸೆ ಹಾಗೂ 1 ರೂ. ಮುಖಬೆಲೆಯ ಡಿಜಿಟಲ್ ರೂಪಾಯಿಯೂ ಲಭ್ಯವಾಗಲಿದೆ ಎಂದು ಬ್ಯಾಂಕಿಂಗ್ ತಜ್ಞರು ಮಾಹಿತಿ ನೀಡಿದ್ದಾರೆ.

ಡಿಜಿಟಲ್ ಕರೆನ್ಸಿಯನ್ನು ಎಲ್ಲಿ ಬಳಸಬಹುದು?

ಯುಪಿಐ ವ್ಯವಸ್ಥೆಗೆ ಯುಪಿಐ ಐಡಿ ಅಥವಾ ಕ್ಯುಆರ್ ಕೋಡ್ ಇದ್ದಂತೆ ಡಿಜಿಟಲ್ ರೂಪಾಯಿಗೂ ಡಿಜಿಟಲ್ ರೂಪಾಯಿ ವಾಲೆಟ್ ವ್ಯವಸ್ಥೆ ಇರಲಿದೆ. ಬಳಕೆದಾರರಿಗೆ ಇದನ್ನು ಮೊಬೈಲ್ ಫೋನ್‌ಗಳು/ಸಾಧನಗಳಲ್ಲಿ ಸಂಗ್ರಹಿಸಡಲು ಸಾಧ್ಯವಾಗಲಿದೆ. ವ್ಯಕ್ತಿಯಿಂದ ವ್ಯಕ್ತಿಗೆ, ವ್ಯಕ್ತಿಯಿಂದ ಉದ್ಯಮಿಗಳ ಮಧ್ಯೆ ಟ್ರಾನ್ಸಾಕ್ಷನ್ ನಡೆಸಬಹುದು ಎಂದು ಆರ್​ಬಿಐ ಹೇಳಿದೆ.

ಆನ್​ಲೈನ್ ಹಣಕಾಸು ವಹಿವಾಟಿಗೂ ಡಿಜಿಟಲ್ ರೂಪಾಯಿಗೂ ಏನು ವ್ಯತ್ಯಾಸ?

ಸಾಮಾನ್ಯ ಆನ್​ಲೈನ್ ವಹಿವಾಟಿಗಿಂತಲೂ ಡಿಜಿಟಲ್ ರೂಪಾಯಿ ವ್ಯವಹಾರ ಹೆಚ್ಚು ಅನಾಮಧೇಯವಾಗಿರಲಿದೆ. ಇಲ್ಲಿ ಒಂದು ಬಾರಿ ಬ್ಯಾಂಕ್​ನಿಂದ ಕರೆನ್ಸಿ ಖರೀದಿ ಮಾಡಿದರೆ ನಂತರ ಅದು ವಾಲೆಟ್​ನಿಂದ ವಾಲೆಟ್​ಗೆ ವರ್ಗಾವಣೆಯಾಗುತ್ತಾ ಇರಲಿದೆ. ಹೆಚ್ಚು ಸುರಕ್ಷಿತವಾಗಿರಲಿದೆ ಎಂದಿದ್ದಾರೆ ತಜ್ಞರು.

ಡಿಜಿಟಲ್ ರೂಪಾಯಿಯ ಪ್ರಯೋಜನವೇನು?

ಡಿಜಿಟಲ್ ರೂಪಾಯಿ ಹೆಚ್ಚು ಸುರಕ್ಷಿತವಾಗಿದೆ. ಡಿಜಿಟಲ್ ಕರೆನ್ಸಿಯು ಇರುವುದು ಗ್ರಾಹಕರ ವಾಲೆಟ್​ನಲ್ಲಾದರೂ ಅದರ ನಿಯಂತ್ರಣ ಬ್ಯಾಂಕ್​ನ ಬಳಿಯೇ ಇರುತ್ತದೆ ಎಂದು ಬ್ಯಾಂಕಿಂಗ್ ತಜ್ಞರು ಮಾಹಿತಿ ನೀಡಿದ್ದಾರೆ.

ಡಿಜಿಟಲ್ ರೂಪಾಯಿಗೆ ಬಡ್ಡಿ ಸಿಗುತ್ತದೆಯೇ?

ನಾವು ಜೇಬಿನಲ್ಲಿಟ್ಟಿರುವ ದುಡ್ಡಿಗೆ ಹೇಗೆ ಬಡ್ಡಿ ದೊರೆಯುವುದಿಲ್ಲವೋ ಹಾಗೆಯೇ, ಡಿಜಿಟಲ್ ವಾಲೆಟ್​ನಲ್ಲಿರುವ ಇ-ರೂಪಾಯಿಗೂ ಬಡ್ಡಿ ದೊರೆಯದು. ಜೇಬಿನಲ್ಲಿರುವ ಬದಲು ಡಿಜಿಟಲ್ ವಾಲಟ್​ನಲ್ಲಿ ಡಿಜಿಟಲ್ ರೂಪಾಯಿ ಇರುತ್ತದೆ ಅಷ್ಟೇ.

ಇ-ರೂಪಾಯಿ ಹಾಗೂ ಕ್ರಿಪ್ಟೋ ಕರೆನ್ಸಿ ನಡುವಣ ವ್ಯತ್ಯಾಸವೇನು?

ಇ-ರೂಪಾಯಿ ಫಿಯೆಟ್ ಕರೆನ್ಸಿಯಂತೆ, ಬಿಟ್​ಕಾಯಿನ್​ಗಿಂತ ಭಿನ್ನವಾಗಿದೆ. ಇದನ್ನು ಯಾವುದೇ ಪ್ರಾಧಿಕಾರ ಬಿಡುಗಡೆ ಮಾಡುವುದಿಲ್ಲ. ನೇರವಾಗಿ ಆರ್​ಬಿಐ ಬಿಡುಗಡೆ ಮಾಡುತ್ತದೆ. ಪ್ಟೋದಂತೆ ಇ-ರೂಪಾಯಿಗೆ ಪಬ್ಲಿಕ್ ಲೆಡ್ಜರ್ ಅಗತ್ಯವಿಲ್ಲ. ಯಾಕೆಂದರೆ ಇದರ ದಾಖಲೆಗಳನ್ನು ಕೇಂದ್ರೀಯ ಬ್ಯಾಂಕ್​ಗಳೇ ಇಟ್ಟುಕೊಂಡಿರುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್