Digital Banking Units: ಡಿಜಿಟಲ್ ಮೂಲಸೌಕರ್ಯ ವೃದ್ಧಿಗೆ ನೆರವಾಗಲಿವೆ ಡಿಬಿಯು; ಆರ್​ಬಿಐ ಗವರ್ನರ್

ಡಿಜಿಟಲ್ ಬ್ಯಾಂಕಿಂಗ್ ಘಟಕಗಳು ದೇಶದಲ್ಲಿ ಡಿಜಿಟಲ್ ಮೂಲಸೌಕರ್ಯ ವೃದ್ಧಿಗೆ ಹೆಚ್ಚಿನ ನೆರವು ನೀಡಲಿವೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ಹೇಳಿದ್ದಾರೆ.

Digital Banking Units: ಡಿಜಿಟಲ್ ಮೂಲಸೌಕರ್ಯ ವೃದ್ಧಿಗೆ ನೆರವಾಗಲಿವೆ ಡಿಬಿಯು; ಆರ್​ಬಿಐ ಗವರ್ನರ್
ಆರ್​ಬಿಐ ಗವರ್ನರ್ ಶಕ್ತಿಕಾಂತದಾಸ್ (ಸಂಗ್ರಹ ಚಿತ್ರ)
Follow us
TV9 Web
| Updated By: Ganapathi Sharma

Updated on:Oct 16, 2022 | 4:14 PM

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಚಾಲನೆ ನೀಡಿರುವ ಡಿಜಿಟಲ್ ಬ್ಯಾಂಕಿಂಗ್ ಘಟಕಗಳು (Digital Banking Units) ದೇಶದಲ್ಲಿ ಡಿಜಿಟಲ್ ಮೂಲಸೌಕರ್ಯ ವೃದ್ಧಿಗೆ ಹೆಚ್ಚಿನ ನೆರವು ನೀಡಲಿವೆ ಎಂದು ಆರ್​ಬಿಐ (Reserve Bank of India) ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಹೇಳಿದ್ದಾರೆ. ಡಿಜಿಟಲ್ ಬ್ಯಾಂಕಿಂಗ್ ಘಟಕಗಳು ಡಿಜಿಟಲ್ ವ್ಯವಸ್ಥೆಯಲ್ಲಿ ಸಶಕ್ತವಾಗಿ ಕಾರ್ಯನಿರ್ವಹಿಸಲಿವೆ ಮತ್ತು ತಡೆರಹಿತ ಬ್ಯಾಂಕಿಂಗ್ ವಹಿವಾಟುಗಳನ್ನು ಸುಗಮಗೊಳಿಸುವ ಮೂಲಕ ಗ್ರಾಹಕರ ಅನುಭವವನ್ನು ಸುಧಾರಿಸಲಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಾಗದರಹಿತ, ಸಮರ್ಥ, ಸುರಕ್ಷತೆಯಿಂದ ಕೂಡಿದ ಹಾಗೂ ಭದ್ರತೆಯ ವಾತಾವರಣದೊಂದಿಗೆ ಡಿಬಿಯುಗಳು ಹಣಕಾಸು ಹರಿವನ್ನು ಹೆಚ್ಚಿಸುವ ನಮ್ಮ ಪ್ರಯತ್ನಗಳಿಗೆ ನೆರವಾಗಲಿವೆ ಎಂದು ಅವರು ಹೇಳಿದ್ದಾರೆ. ಡಿಬಿಯುಗಳಲ್ಲಿ ಉಳಿತಾಯ, ಸಾಲ, ಹೂಡಿಕೆ ಮತ್ತು ವಿಮೆಗೆ ಸಂಬಂಧಿಸಿದ ಸೇವೆಗಳೂ ದೊರೆಯಲಿವೆ.

ಚಿಲ್ಲರೆ ಮತ್ತು ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳ ಸಾಲಕ್ಕೆ ಸಂಬಂಧಿಸಿದ ಸೇವೆಗಳು ಡಿಬಿಯುಗಳಲ್ಲಿ ಸಿಗಲಿವೆ. ಆನ್​ಲೈನ್ ಅರ್ಜಿ ವಿತರಣೆ ಮತ್ತು ಸಲ್ಲಿಕೆಗೆ ಅವಕಾಶವಿದೆ. ಆಯ್ದ ಸರ್ಕಾರಿ ಪ್ರಾಯೋಜಿತ ಯೋಜನೆಗಳಿಗೆ ಸಂಬಂಧಿಸಿದ ಸೇವೆಗಳೂ ಲಭ್ಯವಾಗಲಿವೆ. ಡಿಬಿಯುಗಳಲ್ಲಿ ಸೆಲ್ಫ್ ಸರ್ವೀಸ್ ಹಾಗೂ ಅಸಿಸ್ಟೆಡ್ ಝೋನ್ ಮಾದರಿಯಲ್ಲಿ ಸೇವೆಗಳು ಸಿಗಲಿವೆ ಎಂದು ದಾಸ್ ಹೇಳಿದ್ದಾರೆ.

ಇದನ್ನೂ ಓದಿ
Image
Global Recession: ಆರ್ಥಿಕ ಹಿಂಜರಿತದಿಂದ ಭಾರತಕ್ಕೆ ಹೆಚ್ಚಿನ ತೊಂದರೆಯಾಗದೆಂದ ಎಸ್​ಬಿಐ ಅಧ್ಯಕ್ಷ, ಕಾರಣವೇನು?
Image
Gold Price Today: ಬೆಂಗಳೂರು, ದೆಹಲಿ, ಮುಂಬೈ ಸೇರಿ ಹಲವೆಡೆ ಇಂದಿನ ಚಿನ್ನದ ಬೆಲೆ ಹೀಗಿದೆ; ಬೆಳ್ಳಿ ದರವೆಷ್ಟು?
Image
E-Passbook ಸೌಲಭ್ಯ ಬಿಡುಗಡೆ: ಆನ್​ಲೈನ್​ನಲ್ಲಿ ನಿಮ್ಮ ಪಾಸ್‌ಬುಕ್ ಅನ್ನು ಹೀಗೆ ಪರಿಶೀಲಿಸಿ
Image
HDFC Bank: ನಿಮ್ಮ ಖಾತೆಗೆ 13 ಕೋಟಿ ಜಮೆ ಆಗಿದೆ; ಎಚ್​ಡಿಎಫ್​ಸಿ ಬ್ಯಾಂಕ್​​ನಿಂದ 100 ಖಾತೆಗೆ ತಪ್ಪಾಗಿ ಹೋಗಿದ್ದು 1300 ಕೋಟಿ ರೂ.

ಇದನ್ನೂ ಓದಿ: Digital Banking Units: ಡಿಜಿಟಲ್ ಬ್ಯಾಂಕಿಂಗ್ ಘಟಕದಲ್ಲಿ ನೀವು ಏನೇನು ವ್ಯವಹಾರ ಮಾಡಬಹುದು?

ದೇಶಾದ್ಯಂತ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಡಿಬಿಯುಗಳನ್ನು ಆರಂಭಿಸುವ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಘೋಷಿಸಿದ್ದರು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ಹಮ್ಮಿಕೊಂಡಿತ್ತು. ಬಜೆಟ್​ನಲ್ಲಿ ಘೋಷಣೆಯಾದ ಬಳಿಕ ಭಾರತೀಯ ಬ್ಯಾಂಕ್​ಗಳ ಸಂಘಟನೆ ಮತ್ತು ತಜ್ಞರ ಜತೆ ಸಮಾಲೋಚನೆ ನಡೆಸಿದ್ದ ಆರ್​ಬಿಐ ಡಿಬಿಯು ಸ್ಥಾಪನೆಗೆ ಸಂಬಂಧಿಸಿ ಮಾರ್ಗಸೂಚಿಯನ್ನು ಸಿದ್ಧಪಡಿಸಿತ್ತು.

ಡಿಬಿಯು ಸ್ಥಾಪನೆ ಕೇಂದ್ರ ಸರ್ಕಾರ, ಆರ್​ಬಿಐ ಹಾಗೂ ಭಾರತೀಯ ಬ್ಯಾಂಕ್​ಗಳ ಸಂಘಟನೆಯ ಜಂಟಿ ಯೋಜನೆಯಾಗಿದೆ. ಡಿಬಿಯುಗಳ ಅಸ್ತಿತ್ವವನ್ನು ವಿಸ್ತರಿಸಲು ಡಿಜಿಟಲ್ ವ್ಯವಹಾರ ಸುಗಮಗೊಳಿಸುವವರು ಮತ್ತು ಬ್ಯುಸಿನೆಸ್ ಕರೆಸ್ಪಾಂಡೆಂಟ್​ಗಳನ್ನು ಸೇವೆಗಳಲ್ಲಿ ತೊಡಗಿಸಿಕೊಳ್ಳಲು ಬ್ಯಾಂಕುಗಳು ಮುಕ್ತವಾಗಿವೆ ಎಂದು ದಾಸ್ ಹೇಳಿದ್ದಾರೆ.

ದೇಶದ ಖಾಸಗಿ ಕ್ಷೇತ್ರದ ಅತಿದೊಡ್ಡ ಬ್ಯಾಂಕ್​ಗಳಾದ ಐಸಿಐಸಿಐ, ಎಚ್​ಡಿಎಫ್​ಸಿ ಬ್ಯಾಂಕ್​ ಸಹ ಡಿಬಿಯುಗಳನ್ನು ತೆರೆದಿವೆ. ಐಸಿಐಸಿಐ ಬ್ಯಾಂಕ್ ಉತ್ತರಾಖಂಡದ ಡೆಹ್ರಾಡೂನ್, ತಮಿಳುನಾಡಿನ ಕರೂರ್, ನಾಗಾಲ್ಯಾಂಡ್​ನ ಕೊಹಿಮಾ, ಪುದುಚೇರಿಗಳಲ್ಲಿ ಡಿಬಿಯುಗಳನ್ನು ತೆರೆದಿದೆ. ಎಚ್​ಡಿಎಫ್​ಸಿ ಬ್ಯಾಂಕ್ ಹರಿದ್ವಾರ, ಚಂಡೀಗಢ, ಫರೀದಾಬಾದ್ ಹಾಗೂ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಗಳಲ್ಲಿ ಡಿಬಿಯುಗಳನ್ನು ಆರಂಭಿಸಿದೆ.

Published On - 4:12 pm, Sun, 16 October 22

Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ