Digital Banking Units: ಡಿಜಿಟಲ್ ಬ್ಯಾಂಕಿಂಗ್ ಘಟಕದಲ್ಲಿ ನೀವು ಏನೇನು ವ್ಯವಹಾರ ಮಾಡಬಹುದು?

ಡಿಜಿಟಲ್ ಬ್ಯಾಂಕಿಂಗ್ ಘಟಕ ಅಥವಾ ಡಿಬಿಯು ಮೂಲಕ ಗ್ರಾಹಕರು ಏನೇನು ವ್ಯವಹಾರಗಳನ್ನು ಮಾಡಬಹುದು? ಏನೇನು ಬ್ಯಾಂಕಿಂಗ್ ಸೇವೆಗಳು ಲಭ್ಯವಿರಲಿವೆ? ಇಲ್ಲಿದೆ ಮಾಹಿತಿ.

Digital Banking Units: ಡಿಜಿಟಲ್ ಬ್ಯಾಂಕಿಂಗ್ ಘಟಕದಲ್ಲಿ ನೀವು ಏನೇನು ವ್ಯವಹಾರ ಮಾಡಬಹುದು?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Oct 16, 2022 | 3:33 PM

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ದೇಶಾದ್ಯಂತ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳಿಗೆ (DBU) ಚಾಲನೆ ನೀಡಿದ್ದಾರೆ. ಎಸ್​ಬಿಐ (SBI), ಕೆನರಾ (Canara), ಇಂಡಿಯನ್​ ಬ್ಯಾಂಕ್ (Indian Bank), ಪಿಎನ್​ಬಿ ಬ್ಯಾಂಕ್​ (PNB Bank) ಸೇರಿದಂತೆ ದೇಶದ ಪ್ರಮುಖ ಬ್ಯಾಂಕ್​ಗಳು ಡಿಬಿಯು ಸೇವೆ ಒದಗಿಸುತ್ತಿವೆ. ಐಸಿಐಸಿಐ ಬ್ಯಾಂಕ್ (ICICI Bank) ಉತ್ತರಾಖಂಡದ ಡೆಹ್ರಾಡೂನ್, ತಮಿಳುನಾಡಿನ ಕರೂರ್, ನಾಗಾಲ್ಯಾಂಡ್​ನ ಕೊಹಿಮಾ, ಪುದುಚೇರಿಗಳಲ್ಲಿ ಡಿಬಿಯುಗಳನ್ನು ತೆರೆದಿದ್ದರೆ, ಎಚ್​ಡಿಎಫ್​ಸಿ ಬ್ಯಾಂಕ್ (HDFC Bank) ಹರಿದ್ವಾರ, ಚಂಡೀಗಢ, ಫರೀದಾಬಾದ್ ಹಾಗೂ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಗಳಲ್ಲಿ ಡಿಬಿಯುಗಳನ್ನು ಆರಂಭಿಸಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಉಪಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್ ಬ್ಯಾಂಕಿಂಗ್ ಘಟಕಗಳಿಗೆ ಚಾಲನೆ ನೀಡಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಆರಂಭಿಸುವ ಯೋಜನೆ ಹಮ್ಮಿಕೊಂಡಿತ್ತು.

ಡಿಜಿಟಲ್ ಬ್ಯಾಂಕಿಂಗ್ ಘಟಕ ಅಥವಾ ಡಿಬಿಯು ಮೂಲಕ ಗ್ರಾಹಕರು ಏನೇನು ವ್ಯವಹಾರಗಳನ್ನು ಮಾಡಬಹುದು? ಇಲ್ಲಿದೆ;

ಇದನ್ನೂ ಓದಿ
Image
ದೇಶದಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
Image
Digital Banking Units: 75ನೇ ಸ್ವಾತಂತ್ರ್ಯೋತ್ಸವ ವಿಶೇಷ, 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕ ಉದ್ಘಾಟಿಸಲಿರುವ ಪ್ರಧಾನಿ ಮೋದಿ
Image
SBI Interest Rate on FD: ಎಫ್​ಡಿ ಬಡ್ಡಿ ಹೆಚ್ಚಿಸಿದ ಎಸ್​ಬಿಐ, ಇಲ್ಲಿದೆ ಪರಿಷ್ಕೃತ ಬಡ್ಡಿ ದರ ಮಾಹಿತಿ
Image
HDFC Bank Net Profit: ಎಚ್​ಡಿಎಫ್​ಸಿ ಬ್ಯಾಂಕ್​ ನಿವ್ವಳ ಲಾಭದಲ್ಲಿ ಭಾರಿ ಜಿಗಿತ

ಐಸಿಐಸಿಐ ಬ್ಯಾಂಕ್ ಡಿಬಿಯು:

ಐಸಿಐಸಿಐ ಬ್ಯಾಂಕ್ ಪ್ರಕಟಣೆ ಪ್ರಕಾರ, ಡಿಬಿಯುನಲ್ಲಿ ಎರಡು ಆಯ್ಕೆಗಳಿವೆ. ಅವುಗಳೆಂದರೆ, ಸೆಲ್ಫ್ ಸರ್ವೀಸ್ ಝೋನ್ ಮತ್ತು ಡಿಜಿಟಲ್ ಅಸಿಸ್ಟೆನ್ಸ್ ಝೋನ್.

ಸೆಲ್ಫ್ ಸರ್ವೀಸ್ ಝೋನ್​ನಲ್ಲಿ ಎಟಿಎಂ, ಕ್ಯಾಶ್ ಡೆಪಾಸಿಟ್ ಮಷಿನ್, ಮಲ್ಟಿ ಫಂಕ್ಷನಲ್ ಕಿಯೋಸ್ಕ್​ಗಳು ಇರಲಿದ್ದು ಪಾಸ್​ಬುಕ್ ಪ್ರಿಂಟ್ ಮಾಡುವುದು, ಚೆಕ್ ಡೆಪಾಸಿಟ್ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳು ದೊರೆಯಲಿವೆ. ಡಿಜಿ ಬ್ರ್ಯಾಂಚ್ ಕಿಯೋಸ್ಕ್ ಕೂಡ ಇರಲಿದ್ದು, ಮೊಬೈಲ್​ ಬ್ಯಾಂಕಿಂಗ್ ಆ್ಯಪ್​ಗಳಲ್ಲಿ ಲಭ್ಯವಿರುವ ಎಲ್ಲ ಸೇವೆಗಳೂ ಇದರಲ್ಲಿ ದೊರೆಯಲಿವೆ ಎಂದು ಐಸಿಐಸಿಐ ಬ್ಯಾಂಕ್ ಹೇಳಿದೆ. ಸೆಲ್ಫ್ ಸರ್ವೀಸ್ ಝೋನ್​ನಲ್ಲಿ ಗ್ರಾಹಕರ ಜತೆ ಸಂವಹನಕ್ಕೆಂದು ಚಾಟ್​ಬಾಟ್ ಇರಲಿದ್ದು ದಿನದ 24 ಗಂಟೆಯೂ ಸೇವೆ ಲಭ್ಯವಿರಲಿದೆ.

ಇದನ್ನೂ ಓದಿ: ದೇಶದಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ಡಿಜಿಟಲ್ ಅಸಿಸ್ಟೆನ್ಸ್ ಝೋನ್​ನಲ್ಲಿ ಬ್ರ್ಯಾಂಚ್ ಅಧಿಕಾರಿಗಳಿರಲಿದ್ದು, ಹಣಕಾಸು ಮತ್ತು ಹಣಕಾಸೇತರ ವ್ಯವಹಾರಗಳಲ್ಲಿ ಗ್ರಾಹಕರಿಗೆ ನೆರವಾಗಲಿದ್ದಾರೆ. ಉಳಿತಾಯ ಖಾತೆ, ಕರೆಂಟ್ ಅಕೌಂಟ್ ತೆರೆಯುವುದು, ಗೃಹ ಸಾಲ, ಆಟೊ ಸಾಲ, ವೈಯಕ್ತಿಕ ಸಾಲ ಹಾಗೂ ಕ್ರೆಡಿಟ್ ಕಾರ್ಡ್​ಗೆ ಅರ್ಜಿ ಸಲ್ಲಿಸಲು ಈ ಸೇವೆ ಉಪಯೋಗಕ್ಕೆ ಬರಲಿದೆ.

ಈ ಮೇಲೆ ಹೇಳಿರುವ ಎಲ್ಲ ಸೇವೆಗಳೂ ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ಆಧಾರ್ ಆಧಾರಿತ ಇ-ಕೆವೈಸಿ ಮೂಲಕ ದೊರೆಯಲಿವೆ. ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಬಳಕೆಗೆ ಗ್ರಾಹಕರಿಗೆ ಅಧಿಕಾರಿಗಳು ನೆರವಾಗಲಿದ್ದಾರೆ.

ಐಸಿಐಸಿಐ ಬ್ಯಾಂಕ್​ನ ಡಿಜಿಟಲ್ ಅಸಿಸ್ಟೆನ್ಸ್ ಝೋನ್ ಸೋಮವಾರದಿಂದ ಶುಕ್ರವಾರದ ವರೆಗೆ ಬೆಳಗ್ಗೆ 9.30ರಿಂದ ಸಂಜೆ 3 ಗಂಟೆವರೆಗೆ ಲಭ್ಯವಿರಲಿದೆ. ಅದೇ ರೀತಿ ಮೊದಲ, ಮೂರನೇ ಹಾಗೂ ಐದನೇ ಶನಿವಾರಗಳಂದು ಕೂಡ ಸೇವೆ ಲಭ್ಯವಿರಲಿದೆ.

ಎಚ್​ಡಿಎಫ್​ಸಿ ಬ್ಯಾಂಕ್ ಡಿಬಿಯುನಲ್ಲಿ ದೊರೆಯುವ ಸೇವೆಗಳು:

ಎಚ್​ಡಿಎಫ್​ಸಿ ಬ್ಯಾಂಕ್ ಡಿಬಿಯುನಲ್ಲಿ ಕೂಡ ಸೆಲ್ಫ್ ಸರ್ವೀಸ್ ಝೋನ್ ಹಾಗೂ ಅಸಿಸ್ಟೆಡ್ ಝೋನ್ ಇರಲಿದೆ.

– ಸ್ಥಿರ ಹಾಗೂ ಆರ್​ಡಿ ಠೇವಣಿ ತೆರೆಯುವುದು

– ಗ್ರಾಹಕರಿಗೆ ಡಿಜಿಟಲ್ ಕಿಟ್: ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಹಾಗೂ ಟ್ರಾನ್ಸಿಟ್ ಸಿಸ್ಟಂ ಕಾರ್ಡ್

– ಉದ್ಯಮಿಗಳಿಗೆ ಡಿಜಿಟಲ್ ಕಿಟ್: ಯುಪಿಐ ಕ್ಯುಆರ್ ಕೋಡ್, ಭೀಮ್ ಆಧಾರ್, ಪಿಒಎಸ್​

– ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯದ ಯೋಜನೆಗಳ ಅನ್ವಯ ದೊರೆಯುವ ಸಾಲಗಳು

– ಆನ್‌ಲೈನ್ ಅರ್ಜಿ ಸಲ್ಲಿಸುವಿಕೆಯಿಂದ ತೊಡಗಿ ವಿತರಣೆಯವರೆಗೆ ಅಂತಹ ಸಾಲಗಳ ಡಿಜಿಟಲ್ ಪ್ರಕ್ರಿಯೆಗೆ ನೆರವು

– ಕ್ಯಾಷ್ ಡೆಪಾಟಿಸ್ ಮಷಿನ್​ಗಳ ಮೂಲಕ ನಗದು ಪಡೆಯುವಿಕೆ ಮತ್ತು ಠೇವಣಿ ಇಡುವುದಕ್ಕೆ ವ್ಯವಸ್ಥೆ

– ಪಾಸ್​ಬುಕ್ ಪ್ರಿಂಟಿಂಗ್ ಮತ್ತು ಸ್ಟೇಟ್​ಮೆಂಟ್ ಜನರೇಟ್ ಮಾಡುವುದು

– ಫಂಡ್ ಟ್ರಾನ್ಸ್​ಫರ್ (ನೆಫ್ಟ್/ ಐಎಂಪಿಎಸ್)

– ಕೆವೈಸಿ ಅಪ್​ಡೇಟ್ / ವೈಯಕ್ತಿಕ ವಿವರಗಳು ಇತ್ಯಾದಿಗಳ ಅಪ್​ಡೇಟ್

– ಅಕೌಂಟ್ ಓಪನಿಂಗ್ ಕಿಯೋಸ್ಕ್ / ಕಿಯೋಸ್ಕ್ ವಿತ್ ಇ-ಕೆವೈಸಿ

– ಅಟಲ್ ಪಿಂಚಣಿ ಯೋಜನೆ

– ಪ್ರಧಾನಮಂತ್ರಿ ಜೀವನಜ್ಯೋತಿ ಹಾಗೂ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಅಡಿಯಲ್ಲಿ ಬರುವ 15 ವಿಮಾ ಸೇವೆಗಳು

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್