AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Agniveer Salary Accounts: 11 ಬ್ಯಾಂಕ್​ಗಳಲ್ಲಿ ಅಗ್ನಿವೀರರ ವೇತನ ಖಾತೆ, ಇಲ್ಲಿದೆ ಬ್ಯಾಂಕ್​ಗಳ ಪಟ್ಟಿ

Agnipath: ಭಾರತೀಯ ಸೇನೆಯು ಅಗ್ನಿಪಥ ಯೋಜನೆ ಅಡಿಯಲ್ಲಿ ನೇಮಕವಾಗುವ ಅಗ್ನಿವೀರರ ವೇತನ ಖಾತೆಗಳನ್ನು ತೆರೆಯಲು ಮತ್ತು ಅವರಿಗೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಸಲುವಾಗಿ 11 ಬ್ಯಾಂಕ್​ಗಳ ಜತೆ ಒಪ್ಪಂದ ಮಾಡಿಕೊಂಡಿದೆ.

Agniveer Salary Accounts: 11 ಬ್ಯಾಂಕ್​ಗಳಲ್ಲಿ ಅಗ್ನಿವೀರರ ವೇತನ ಖಾತೆ, ಇಲ್ಲಿದೆ ಬ್ಯಾಂಕ್​ಗಳ ಪಟ್ಟಿ
ಸಾಂದರ್ಭಿಕ ಚಿತ್ರ
TV9 Web
| Updated By: Ganapathi Sharma|

Updated on: Oct 15, 2022 | 7:27 PM

Share

ನವದೆಹಲಿ: ಭಾರತೀಯ ಸೇನೆಯು (Indian Army) ಅಗ್ನಿಪಥ (Agnipath Scheme) ಯೋಜನೆ ಅಡಿಯಲ್ಲಿ ನೇಮಕವಾಗುವ ಅಗ್ನಿವೀರರ (Agniveer) ವೇತನ ಖಾತೆಗಳನ್ನು (Salary Account) ತೆರೆಯಲು ಮತ್ತು ಅವರಿಗೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಸಲುವಾಗಿ 11 ಬ್ಯಾಂಕ್​ಗಳ ಜತೆ ಒಪ್ಪಂದ ಮಾಡಿಕೊಂಡಿದೆ. ಸೇನೆಯ ಮಾನವಸಂಪನ್ಮೂಲ ಯೋಜನೆ ಮತ್ತು ವ್ಯಕ್ತಿಗತ ಸೇವೆಗಳ ಪ್ರಧಾನ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ವಿ. ಶ್ರೀಹರಿ ಹಾಗೂ ಬ್ಯಾಂಕ್​ಗಳ ಹಿರಿಯ ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕಿದರು. ಲೆಫ್ಟಿನೆಂಟ್ ಜನರಲ್ ಸಿ. ಬನ್ಸಿ ಪೊನ್ನಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಎಂದು ರಕ್ಷಣಾ ಸಚಿವಾಲಯ ತಿಳಿಸಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಅಗ್ನಿವೀರರ ವೇತನ ಪ್ಯಾಕೇಜ್ ರಕ್ಷಣಾ ಇಲಾಖೆಯ ವೇತನ ಪ್ಯಾಕೇಜ್​ಗೆ ಸಮನಾಗಿರಲಿದೆ ಎಂದು ಸಚಿವಾಲಯ ಹೇಳಿದೆ. ಅಗ್ನಿವೀರರಿಗೆ ತಮ್ಮ ಉದ್ಯಮ ಕೌಶಲವನ್ನು ವೃದ್ಧಿಸಿಕೊಳ್ಳುವ ಸಲುವಾಗಿ ಸಾಲಗಳನ್ನು ನೀಡುವ ಬಗ್ಗೆಯೂ ಬ್ಯಾಂಕ್​ಗಳು ಭರವಸೆ ನೀಡಿವೆ.

ಈ ಬ್ಯಾಂಕ್​ಗಳಲ್ಲಿ ಅಗ್ನಿವೀರರಿಗೆ ಸಿಗಲಿದೆ ಸೇವೆ:

1. ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ

2. ಪಂಜಾಬ್ ನ್ಯಾಷನಲ್ ಬ್ಯಾಂಕ್

3. ಬ್ಯಾಂಕ್ ಆಫ್ ಬರೋಡಾ

4. ಐಡಿಬಿಐ ಬ್ಯಾಂಕ್

5. ಐಸಿಐಸಿಐ ಬ್ಯಾಂಕ್

6. ಎಚ್​ಡಿಎಫ್​ಸಿ ಬ್ಯಾಂಕ್

7. ಆ್ಯಕ್ಸಿಸ್ ಬ್ಯಾಂಕ್

8. ಯೆಸ್ ಬ್ಯಾಂಕ್

9. ಕೋಟಕ್ ಮಹೀಂದ್ರಾ ಬ್ಯಾಂಕ್

10. ಐಡಿಎಫ್​ಸಿ ಬ್ಯಾಂಕ್

11. ಬಂಧನ್ ಬ್ಯಾಂಕ್

ಇದನ್ನೂ ಓದಿ: SBI Interest Rate on FD: ಎಫ್​ಡಿ ಬಡ್ಡಿ ಹೆಚ್ಚಿಸಿದ ಎಸ್​ಬಿಐ, ಇಲ್ಲಿದೆ ಪರಿಷ್ಕೃತ ಬಡ್ಡಿ ದರ ಮಾಹಿತಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜೂನ್ 14ರಂದು ಸೇನೆಯ ಮೂರು ಪಡೆಗಳಿಗೆ (ಭೂಸೇನೆ, ವಾಯುಪಡೆ, ನೌಕಾಪಡೆ) ಅಲ್ಪಾವಧಿ ನೇಮಕಾತಿ ಮಾಡುವ ಅಗ್ನಿಪಥ ಯೋಜನೆಯನ್ನು ಘೋಷಿಸಿತ್ತು. ಸೇನೆಯನ್ನು ಭವಿಷ್ಯದ ಸವಾಲುಗಳಿಗೆ ಸನ್ನದ್ಧಗೊಳಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಸರ್ಕಾರ ಹೇಳಿತ್ತು.

ಅಗ್ನಿಪಥ ಯೋಜನೆಯ ಅಡಿಯಲ್ಲಿ ಅಗ್ನಿವೀರರ ಮೊದಲ ಬ್ಯಾಚ್ 2023ರ ಜನವರಿಯಲ್ಲಿ ತರಬೇತಿಗೆ ಹಾಜರಾಗಲಿದೆ.

ಅಗ್ನಿಪಥ ಯೋಜನೆ ಘೊಷಣೆಯಾದ ಆರಂಭದಲ್ಲಿ ದೇಶದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅನೇಕ ಕಡೆಗಳಲ್ಲಿ, ವಿಶೇಷವಾಗಿ ಉತ್ತರ ಭಾರತದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದವು. ಆದರೆ, ಕೇಂದ್ರ ಸರ್ಕಾರ ಮಾತ್ರ ತನ್ನ ನಿಲುವನ್ನು ಸಮರ್ಥಿಸಿಕೊಂಡಿದ್ದಲ್ಲದೆ, ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ ದೃಢ ನಿರ್ಧಾರ ತಳೆದಿತ್ತು. ಯಾವುದೇ ಕಾರಣಕ್ಕೂ ಯೋಜನೆ ಹಿಂಪಡೆಯುವುದಲ್ಲಿ ಎಂದು ತಿಳಿಸಿತ್ತು.

ಅಗ್ನಿಪಥ ಯೋಜನೆ ಅಡಿ ನೇಮಕವಾಗುವ ಅಗ್ನಿವೀರರಿಗೆ ಸೇವೆಯಿಂದ ನಿವೃತ್ತರಾದ ಬಳಿಕ ಸ್ವ-ಉದ್ಯಮಕ್ಕೆ ಪ್ರೋತ್ಸಾಹ, ವಿವಿಧ ಇಲಾಖೆಗಳಲ್ಲಿ ನೇಮಕಾತಿ ಮಾಡುವ ವೇಳೆ ಆದ್ಯತೆ ನೀಡುವುದಾಗಿಯೂ ಕೇಂದ್ರ ಸರ್ಕಾರ ಭರವಸೆ ನೀಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು