CNG
ಸಿಎನ್‌ಜಿ ಎಂದರೆ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್. ಇದು ಮೀಥೇನ್ ಇತ್ಯಾದಿ ನೈಸರ್ಗಿಕ ಅನಿಲವನ್ನು ಅತೀವವಾಗಿ ಒತ್ತಡೀಕರಿಸಿ ಸಿಲಿಂಡರ್ನಲ್ಲಿ ನಿರ್ದಿಷ್ಟ ಒತ್ತಡದಲ್ಲಿ ತುಂಬಿಸಲಾಗಿರುತ್ತದೆ. ಮೋಟಾರು ವಾಹನಗಳಿಗೆ ಇದು ಇಂಧನವಾಗಿ ಬಳಕೆ ಮಾಡಲಾಗುತ್ತದೆ. ಪೆಟ್ರೋಲ್, ಡೀಸಲ್ ಎಂಜಿನ್ಗಳನ್ನು ಸಿಎನ್‌ಜಿ ಬಳಕೆಗೆ ಮಾರ್ಪಡಿಸುವ ಅವಕಾಶ ಇರುತ್ತದೆ. ಪೆಟ್ರೋಲ್, ಡೀಸಲ್ ದರಕ್ಕೆ ಹೋಲಿಸಿದರೆ ಸಿಎನ್‌ಜಿ ಬೆಲೆಯೂ ಕಡಿಮೆ. ಬಹಳಷ್ಟು ಕಾರು, ಆಟೋರಿಕ್ಷಾಗಳ ಎಂಜಿನ್ಗಳನ್ನು ಸಿಎನ್ಜಿಗೆ ಬದಲಾಯಿಸಿರುವುದನ್ನು ಕಾಣಬಹುದು. ಇವು ಪೆಟ್ರೋಲ್, ಡೀಸಲ್ನಷ್ಟು ಮಾಲಿನ್ಯ ಮಾಡುವುದಿಲ್ಲ. ಈಗ ಸಿಎನ್ಜಿಗೆಂದೇ ರೂಪಿಸಲಾದ ಎಂಜಿನ್ಗಳನ್ನು ಹೊಂದಿರುವ ವಾಹನಗಳು ಮಾರುಕಟ್ಟೆಗೆ ಬಿಡುಗಡೆ ಅಗುತ್ತಿವೆ. ಸಿಎನ್‌ಜಿ ಬಳಕೆಯಿಂದ ಬಹಳಷ್ಟು ಅನುಕೂಲತೆಗಳಿವೆ. ಇದರ ಬೆಲೆ ಕಡಿಮೆ ಇರುವುದರ ಜೊತೆಗೆ ಪರಿಸರಕ್ಕೆ ಹೆಚ್ಚು ಮಾರಕ ಅಲ್ಲ. ಸಿಎನ್‌ಜಿ ವಾಹನಗಳು ಹೆಚ್ಚು ಸುರಕ್ಷಿತ, ಅದರ ಮೈಂಟೆನೆನ್ಸ್ ವೆಚ್ಚವೂ ಕಡಿಮೆ.