Pro Kabaddi League
2014 ರಲ್ಲಿ ಆರಂಭವಾದ ಪ್ರೊ ಕಬಡ್ಡಿ ಲೀಗ್ ಇದುವರೆಗೆ 10 ಆವೃತ್ತಿಗಳನ್ನು ಕಂಡಿದೆ. 11ನೇ ಆವೃತ್ತಿಯ ಆರಂಭಕ್ಕೆ ಕ್ಷಣಗಣನೇ ಆರಂಭವಾಗಿದೆ. ಇನ್ನು ಈ ಲೀಗ್ನಲ್ಲಿ ದೇಶದ ವಿವಿದ ರಾಜ್ಯಗಳ 12 ತಂಡಗಳು ಭಾಗವಹಿಸುತ್ತಿವೆ. ಅವುಗಳಲ್ಲಿ ಪಾಟ್ನಾ ಪೈರೇಟ್ಸ್, ಯು ಮುಂಬಾ, ಬೆಂಗಾಲ್ ವಾರಿಯರ್ಸ್, ಗುಜರಾತ್ ಜೈಂಟ್ಸ್, ಹರಿಯಾಣ ಸ್ಟೀಲರ್ಸ್, ಜೈಪುರ ಪಿಂಕ್ ಪ್ಯಾಂಥರ್ಸ್, ಪುಣೇರಿ ಪಲ್ಟನ್, ತಮಿಳು ತಲೈವಾಸ್, ತೆಲುಗು ಟೈಟಾನ್ಸ್, ಯುಪಿ ಯೋಧಾಸ್, ಬೆಂಗಳೂರು ಬುಲ್ಸ್, ದಬಾಂಗ್ ದೆಹಲಿ ಕೆ.ಸಿ. ತಂಡಗಳು ಸೇರಿವೆ. ಕಳೆದ 10 ಆವೃತ್ತಿಗಳ ಚಾಂಪಿಯನ್ ಆದ ತಂಡಗಳ ಬಗ್ಗೆ ಹೇಳುವುದಾದರೆ.. ಈ ಟೂರ್ನಿಯಲ್ಲಿ ಅತ್ಯಂತ ಯಶಸ್ವಿ ತಂಡವೆಂದರೆ ಅದು ಪಾಟ್ನಾ ಪೈರೇಟ್ಸ್, ಈ ತಂಡ ಇದುವರೆಗೆ 3 ಬಾರಿ ಚಾಂಪಿಯನ್ ಆಗಿದೆ. ಉಳಿದಂತೆ ಜೈಪುರ ಪಿಂಕ್ ಪ್ಯಾಂಥರ್ಸ್ 2 ಬಾರಿ, ಯು ಮುಂಬಾ, ಬೆಂಗಾಲ್ ವಾರಿಯರ್ಸ್, ಪುಣೇರಿ ಪಲ್ಟನ್, ಬೆಂಗಳೂರು ಬುಲ್ಸ್, ದಬಾಂಗ್ ದೆಹಲಿ ಕೆ.ಸಿ. ತಂಡಗಳು ತಲಾ ಒಮ್ಮೆ ಚಾಂಪಿಯನ್ ಆಗಿ ಹೊರಹೊಮ್ಮಿವೆ.
News not found!