AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samsung

Samsung

ಸ್ಯಾಮ್‌ಸಂಗ್ ಜನಪ್ರಿಯ ಜಾಗತಿಕ ಎಲೆಕ್ಟ್ರಾನಿಕ್ಸ್ ಕಂಪನಿಯಾಗಿದ್ದು, ಇದು ಸ್ಮಾರ್ಟ್‌ಫೋನ್‌ಗಳು, ಟೆಲಿವಿಷನ್‌ಗಳು, ಲ್ಯಾಪ್‌ಟಾಪ್‌ಗಳು, ವಾಷಿಂಗ್ ಮೆಷಿನ್‌ಗಳು, ರೆಫ್ರಿಜರೇಟರ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಒಳಗೊಂಡಂತೆ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಅದರಲ್ಲೂ ಸ್ಯಾಮ್‌ಸಂಗ್‌ನ ಸ್ಮಾರ್ಟ್‌ಫೋನ್ ಉತ್ಪನ್ನಗಳು ಬಳಕೆದಾರರಲ್ಲಿ ಜನಪ್ರಿಯವಾಗಿವೆ. ಈ ಹೆಸರುಗಳನ್ನು ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳ ಜನಪ್ರಿಯ ಸರಣಿಯಲ್ಲಿ ಸೇರಿಸಲಾಗಿದೆ.

50MP ಸೆಲ್ಫಿ ಕ್ಯಾಮೆರಾ, 5000mAh ಬ್ಯಾಟರಿ: ಭರ್ಜರಿಯಾಗಿ ಎಂಟ್ರಿಕೊಟ್ಟ ಗ್ಯಾಲಕ್ಸಿ M55 5G ಫೋನ್

Samsung Galaxy M55 5G: ಗ್ಯಾಲಕ್ಸಿ M55 5G ಅನ್ನು ಗ್ಯಾಲಕ್ಸಿ M54 5G ಗೆ ಉತ್ತರಾಧಿಕಾರಿಯಾಗಿ ಬಿಡುಗಡೆ ಮಾಡಲಾಗಿದೆ. ಇದು ಬಾಗಿದ ಅಂಚುಗಳು ಮತ್ತು ಪಂಚ್-ಹೋಲ್ ಡಿಸ್​ಪ್ಲೇಯೊಂದಿಗೆ ಅದೇ ವಿನ್ಯಾಸ ಹೊಂದಿದೆ. ನವೀಕರಣಗಳ ವಿಷಯದಲ್ಲಿ, ನೀವು ಗ್ಯಾಲಕ್ಸಿ M54 5G ನಲ್ಲಿ 32MP ಸಂವೇದಕದಿಂದ ಉತ್ತಮ 50MP ಮುಂಭಾಗದ ಕ್ಯಾಮೆರಾವನ್ನು ಪಡೆಯುತ್ತೀರಿ.

ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ 4 ಬಿಡುಗಡೆ: ಬೆಲೆ ಬರೋಬ್ಬರಿ 70,990 ರೂ.

Samsung Galaxy Book 4 Launched: ಗ್ಯಾಲಕ್ಸಿ ಬುಕ್ 4 ಅನ್ನು ಸ್ಯಾಮ್​ಸಂಗ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದ್ದು, ಇದರ ಆರಂಭಿಕ ಬೆಲೆ ಇಂಟೆಲ್ ಕೋರ್ 5 CPU ಮತ್ತು 8GB RAM ಆಯ್ಕೆಗೆ 70,990 ರೂ. ಅದೇ ಪ್ರೊಸೆಸರ್ ಹೊಂದಿರುವ 16GB RAM ರೂಪಾಂತರವು 75,990 ರೂ. ಗೆ ಲಭ್ಯವಿದೆ.

6,000mAh ಬ್ಯಾಟರಿಯ ಸ್ಯಾಮ್​ಸಂಗ್ ಗ್ಯಾಲಕ್ಸಿ F15 5G ಫೋನ್ ಬಿಡುಗಡೆ: ಬೆಲೆ 15,999 ರೂ.

Samsung Galaxy F15 5G Launched in India: ಸ್ಯಾಮ್‌ಸಂಗ್ ಕಂಪನಿ ಭಾರತದಲ್ಲಿ ಇಂದು ಗ್ಯಾಲಕ್ಸಿ F15 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದರ 4GB RAM ಮತ್ತು 128GB ಸ್ಟೋರೇಜ್‌ನ ಮೂಲ ಮಾದರಿಗೆ 15,999 ರೂ. ಇದೆ. ಇಂದು ಸಂಜೆ 7 ಗಂಟೆಗೆ ಅಮೆಜಾನ್ ಇಂಡಿಯಾದಲ್ಲಿ ಮೊದಲ ಸೇಲ್ ಪ್ರಾರಂಭವಾಗಲಿದೆ.