
ಏಜ್ ಇಸ್ ಎ ಜಸ್ಟ್ ನಂಬರಷ್ಟೇ, ದೇಹಕ್ಕಷ್ಟೇ ವಯಸ್ಸಾಗುವುದೇ ಹೊರತು ಮನಸ್ಸಿಗಲ್ಲ, ಜೀವನೋತ್ಸಾಹಕ್ಕಲ. ಹೌದು, 100ರ ಹರೆಯದಲ್ಲೂ ಈ ಅಜ್ಜಿ ಯೋಗ ಮಾಡೋದು ನೋಡಿದ್ರೆ ನೀವೇ ಬಾಯಿಯ ಮೇಲೆ ಬೆರಳಿಡುತ್ತೀರಿ. ಇಳಿ ವಯಸ್ಸಿನಲ್ಲಿ ಅಜ್ಜಿಯೊಬ್ಬರು (old woman) ಯುವಕರು ನಾಚುವಂತೆ ದೇಹ ಬಾಗಿಸಿ ಸಲೀಸಾಗಿ ಯೋಗ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.
ಮಂದ ಶ್ರೀನಿತ ರೆಡ್ಡಿ (Manda Srinitha Reddy) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಯುವಕರೇ ನಾಚುವಂತೆ ಸುಲಭವಾಗಿ ದೇಹವನ್ನು ಬಾಗಿಸಿ ಕಠಿಣವಾದ ಆಸನಗಳನ್ನು ಮಾಡುತ್ತಿರುವ ಅಜ್ಜಿಯನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ: ಗ್ರಾಜುವೇಷನ್ ಡೇಗೆ ಅಜ್ಜಿಯೊಂದಿಗೆ ಬಂದ ವಿದ್ಯಾರ್ಥಿ, ವೈರಲ್ ಆಯ್ತು ದೃಶ್ಯ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಅಜ್ಜಿ ಯೋಗ ಮಾಡುವ ರೀತಿಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಒಬ್ಬ ಬಳಕೆದಾರ, ವಾವ್ಹ್ ಸೂಪರ್ ಎಂದಿದ್ದಾರೆ. ಇನ್ನೊಬ್ಬರು, ಅಜ್ಜಿಯ ಆಯಸ್ಸಿನ ಹಿಂದಿದೆ ಯೋಗದ ಕರಾಮತ್ತು ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ಅಜ್ಜಿ ನಮಗೆಲ್ಲರಿಗೂ ಸ್ಫೂರ್ತಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:46 pm, Mon, 31 August 26