ಸಾಧನೆಗೆ ವಯಸ್ಸಿನ ಮಿತಿ ಇಲ್ಲ ಎಂಬ ಮಾತಿಗೆ ಪುಷ್ಟಿ ನೀಡುವಂತೆ 103 ವರ್ಷದ ಅಜ್ಜಿಯೊಬ್ಬರು ಟಂಡೆಮ್ ಪ್ಯಾರಾಚೂಟ್ (Tandem Parachute)ನಲ್ಲಿ ಯಶಸ್ವಿಯಾಗಿ ಜಿಗಿಯುವ (Jump) ಮೂಲಕ ದಾಖಲೆ (Record)ಯೊಂದನ್ನು ನಿರ್ಮಿಸಿದ್ದಾರೆ. ಆ ಮೂಲಕ ವಿಶ್ವದ ಅತ್ಯಂತ ಹಿರಿಯ ಪ್ಯಾರಾಚೂಟರ್ಗಾಗಿ ದಾಖಲೆ ನಿರ್ಮಿಸಿದ್ದಾರೆ. ರುಟ್ ಲಾರ್ಸನ್ ಸ್ವೀಡನ್‌ನ ಮೊಟಾಲಾದಲ್ಲಿ ಪ್ಯಾರಾಚೂಟಿಸ್ಟ್ ಜೋಕಿಮ್ ಜೋಹಾನ್ಸನ್ ಜೊತೆ ಜಿಗಿಯುವ ಮೂಲಕ ಸ್ವೀಡಿಷ್ ಅಜ್ಜಿ ಲಾರ್ಸನ್ ಈ ಸಾಧನೆ ಮಾಡಿ ವಿಶ್ವಮಟ್ಟದಲ್ಲಿ ಗಮನಸೆಳೆದಿದ್ದಾರೆ.
ಇದನ್ನೂ ಓದಿ: Viral Video: ಅಮ್ಮನೊಂದಿಗೆ ವರ್ಕ್ಔಟ್ ಮಾಡಿದ 5 ತಿಂಗಳ ಮಗು; ತಮಾಷೆಯ ವಿಡಿಯೋ ವೈರಲ್
ವಯಸ್ಸು ಕೇವಲ ಒಂದು ಸಂಖ್ಯೆ ಎಂಬ ಹಳೆಯ ಗಾದೆ ನಿಜ ಎಂದು ಸಾಬೀತುಪಡಿಸಿದ ಸ್ವೀಡಿಷ್ ಅಜ್ಜಿಯ ಪ್ಯಾರಚೂಟ್ ಹಾರಾಟವನ್ನು ಅವರ ಕುಟುಂಬಸ್ಥರು ಹಾಗೂ ಸ್ನೇಹಿತರು ಏರ್ಫೀಲ್ಡ್ನಿಂದ ವೀಕ್ಷಿಸಿದರು. ಯಶಸ್ವಿಯಾಗಿ ಆಕಾಶದಿಂದ ಭೂಮಿಗೆ ಇಳಿಯುತ್ತಿದ್ದಂತೆ ಲಾರ್ಸನ್ ಪಕ್ಕಕ್ಕೆ ಸಹಾಯಕರು ದಾವಿಸಿ ಪರೀಕ್ಷಿಸುತ್ತಾರೆ.
ರೋಮಾಂಚಕ ಅನುಭವದ ನಂತರ ಸುದ್ದಿ ಸಂಸ್ಥೆ ಟಿಟಿ ಜೊತೆ ಮಾತನಾಡಿದ ಅಜ್ಜಿ, ”ನಾನು ಬಹಳ ಸಮಯದಿಂದ ಈ ಬಗ್ಗೆ ಯೋಚಿಸುತ್ತಿದ್ದೆ. ಇಂದು ಯೋಚಿಸಿದಂತೆ ನಡೆಯಿತು. ಮೇಲಿಂದ ಕೆಳಗೆ ಇಳಿಯುವುದು ಇಷ್ಟವಾಯಿತು ಮತ್ತು ಹಾರಾಟ ತುಂಬಾ ಸಂತೋಷವನ್ನು ನೀಡಿದೆ” ಎಂದರು.
ಇದನ್ನೂ ಓದಿ: Trending: ಕೆಂಪು ತೋಳಕ್ಕೆ ಜನ್ಮ ನೀಡಿದ ‘ಬ್ರೇವ್’, ಅಪರೂಪದ ಘಟನೆಗೆ ಸಾಕ್ಷಿಯಾಯ್ತು ಯುಎಸ್ನ ಮೃಗಾಲಯ
”ನಾನು ಇದನ್ನು ಎಂದಿಗೂ ಮಾಡಿಲ್ಲ. 100 ವರ್ಷಗಳಲ್ಲಿ ಬಹಳಷ್ಟು ಕೆಲಸಗಳನ್ನು ಮಾಡಿದ್ದೇನೆ. ನಾನು ಅದನ್ನು ಮಾಡಬೇಕು ಎಂದು ಭಾವಿಸಿದ್ದೆ. ಇದು ಭಯಾನಕವಾಗಿದೆ” ಎಂದು ಅವರು ಹಾರಾಟದ ನಂತರ ಸ್ಥಳೀಯ ಟಿವಿ ಸ್ಟೇಷನ್‌ಗೆ ತಿಳಿಸಿದರು.
ಗಿನ್ನೆಸ್ ವಿಶ್ವ ದಾಖಲೆಯ ಅಧಿಕಾರಿಯೊಬ್ಬರು ಅಜ್ಜಿಯ ಜಿಗಿತವನ್ನು ದಾಖಲಿಸಿದ್ದು, ಅವರು 103 ವರ್ಷ ಮತ್ತು 181 ದಿನಗಳ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. ಈ ತಿಂಗಳ ಆರಂಭದಲ್ಲಿ ಮಹಿಳೆಯೊಬ್ಬರು ತನ್ನ ಜೀವನದಲ್ಲಿ ಮೊದಲ ಬಾರಿಗೆ ರೇಮಂಡ್ ಸುಲ್ಲಿವಾನ್ ಸ್ಕೈಡೈವ್ ಸೆಬಾಸ್ಟಿಯನ್‌ನಲ್ಲಿ ಸ್ಕೈಡೈವಿಂಗ್ ಪ್ರಯತ್ನಿಸುವ ಮೂಲಕ ತನ್ನ 100 ನೇ ಹುಟ್ಟುಹಬ್ಬವನ್ನು ಗುರುತಿಸಿಕೊಂಡರು.
ವಿಡಿಯೋ ನೋಡಿ
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:52 am, Tue, 31 May 22