Viral Video: ಮರಕ್ಕೆ ಗುದ್ದಿ ಬಾಕ್ಸಿಂಗ್​ ಅಭ್ಯಾಸ ಮಾಡುವ 12ರ ಬಾಲಕಿ: ಈಕೆಯ ತಾಕತ್ತು ನೋಡಿ ಬೆರಗಾದ ನೆಟ್ಟಿಗರು

| Updated By: Pavitra Bhat Jigalemane

Updated on: Jan 10, 2022 | 9:49 AM

ಈಕೆ ಬಾಕ್ಸಿಂಗ್​ ತರಬೇತುದಾರ ರುಸ್ಟ್ರುಮ್​ ಸಾದ್ವಾಕಾಸ್​ ಅವರ ಪುತ್ರಿ. ಎವ್ನಿಕಾ 4 ವರ್ಷದವಳಿದ್ದಾಗಲೇ  ತನ್ನ ತಂದೆಯಿಂದ ಬಾಕ್ಸಿಂಗ್​ ತರಬೇತಿ ಪಡೆಯುತ್ತಿದ್ದಳು. ಆಕೆಯ ಶಕ್ತಿ ಮತ್ತು ಪರಿಶ್ರಮವನ್ನು ನೋಡಿ ಸ್ವತಃ ತಂದೆಯೇ ಬೆರಗಾಗಿದ್ದರು.

Viral Video: ಮರಕ್ಕೆ ಗುದ್ದಿ ಬಾಕ್ಸಿಂಗ್​ ಅಭ್ಯಾಸ ಮಾಡುವ 12ರ ಬಾಲಕಿ: ಈಕೆಯ ತಾಕತ್ತು ನೋಡಿ ಬೆರಗಾದ ನೆಟ್ಟಿಗರು
ಎವ್ನಿಕಾ ಸಾದ್ವಾಕಾಸ್​
Follow us on

ಸಾಧನೆಗೆ ವಯಸ್ಸಿನ ಹಂಗಿಲ್ಲ. ಶ್ರದ್ಧೆ, ಇಚ್ಛಾ ಶಕ್ತಿ ಇದ್ದರೆ ಎಂತಹ ಸಾಧನೆಯನ್ನು ಬೇಕಾದರೂ ಯಾವ ವಯಸ್ಸಿನಲ್ಲಿ ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಈ 12 ವರ್ಷದ ಬಾಲಕಿಯೇ ಸಾಕ್ಷಿ. ರಷ್ಯಾದ 12 ವರ್ಷದ ಬಾಲಕಿಯೊಬ್ಬಳು ಮರದೊಂದಿಗೆ ಬಾಕ್ಸಿಂಗ್​ ಮಾಡುತ್ತಾಳೆ. ತನ್ನ ಕೈಯಲ್ಲಿ ಬಾಕ್ಸಿಂಗ್​ ಗ್ಲೌಸ್​ ಹಾಕಿಕೊಂಡು ಮರಕ್ಕೆ ಪಂಚ್​ ಮಾಡುವ ಮೂಲಕ ಮರವನ್ನೇ ಒಡೆಯುವಷ್ಟು ಶಕ್ತಿ ಹೊಂದಿದ್ದಾಳೆ. ಈಕೆಯ ಸಾಧನೆಗೆ ಈಗ ಇಡೀ ಜಗತ್ತು ತಿರುಗಿ ನೋಡುತ್ತಿದೆ.  

ಈ 12 ವರ್ಷದ ಬಾಲಕಿಯ ಹೆಸರು ಎವ್ನಿಕಾ ಸಾದ್ವಾಕಾಸ್​. ತನ್ನ ಬಾಕ್ಸಿಂಗ್​ ಮೂಲಕ ಜಗತ್ತಿನಾದ್ಯಂತ ಮನೆಮಾತಾಗಿದ್ದಾಳೆ. ಈಕೆ ಬಾಕ್ಸಿಂಗ್​ ತರಬೇತುದಾರ ರುಸ್ಟ್ರುಮ್​ ಸಾದ್ವಾಕಾಸ್​ ಅವರ ಪುತ್ರಿ. ಎವ್ನಿಕಾ 4 ವರ್ಷದವಳಿದ್ದಾಗಲೇ  ತನ್ನ ತಂದೆಯಿಂದ ಬಾಕ್ಸಿಂಗ್​ ತರಬೇತಿ ಪಡೆಯುತ್ತಿದ್ದಳು. ಆಕೆಯ ಶಕ್ತಿ ಮತ್ತು ಪರಿಶ್ರಮವನ್ನು ನೋಡಿ ಸ್ವತಃ ತಂದೆಯೇ ಬೆರಗಾಗಿದ್ದರು. ಎವ್ನಿಕಾ ತನ್ನ 7 ಜನ ಸಹೋರರೊಂದಿಗೆ ರಷ್ಯಾದ ವೊರೊನೆಜ್​ ಪ್ರದೇಶದಲ್ಲಿ ವಾರದ ಐದು ದಿನ ಬಾಕ್ಸಿಂಗ್​ ತರಬೇತಿ ಪಡೆಯುತ್ತಾಳೆ. ಈಕೆಯ ತಾಯಿ ಅನಿಯಾ ಸಾದ್ವಿಕಾಸ್​ ಮಾಜಿ ಜಿಮ್ನಾಸ್ಟಿಕ್​ ಆಗಿದ್ದರು. ಎವ್ನಿಕಾ ತಾಯಿ ಹೊರತುಪಡಿಸಿ ಇವರ ಇಡೀ ಕುಟುಂಬ ಬಾಕ್ಸಿಂಗ್​ ತರಬೇತುದಾರರಾಗಿದ್ದಾರೆ. ಈಕೆಯನ್ನು ಜಗತ್ತಿನ ಶಕ್ತಿಶಾಲಿ ಬಾಲಕಿ ಎಂದೂ ಕರೆಯುತ್ತಾರೆ.

ಎವ್ನಿಕಾ 2020ರಲ್ಲಿ 80 ಕೆಜಿ ಭಾರ ಎತ್ತುವ ಮೂಲಕ ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದ್ದಳು. ಈ ಮೂಲಕ ಯುಎಸ್​ಎಯ ವೇಟ್​ಲಿಪ್ಟಿಂಗ್​ ಯೂತ್​ ನ್ಯಾಷನಲ್​ ಚಾಂಪಿಯನ್​ಶಿಪ್​ ಗೆದ್ದ ಅತಿ ಕಿರಿಯ ಬಾಲಕಿ ಎಂಬ ಪಟ್ಟ ಗಳಿಸಿದ್ದಳು. ಸದ್ಯ ಎವ್ನಿಕಾ ಬಾಕ್ಸಿಂಗ್​ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Published On - 9:48 am, Mon, 10 January 22