Viral Video: ಐಷಾರಾಮಿ ಬ್ಯೂಟಿ ಬ್ರಾಂಡ್​​​ಗೆ 14 ವರ್ಷದ ಮುಂಬೈ ಸ್ಲಮ್ ಹುಡುಗಿ ಆಯ್ಕೆ

|

Updated on: May 22, 2023 | 3:45 PM

ಮುಂಬೈನ ಧಾರಾವಿಯ ಕೊಳಗೇರಿಯಿಂದ ಬಂದ 14ರ ಹರೆಯದ ಮಲೀಶಾ ಖಾರ್ವಾ ಐಷಾರಾಮಿ ಬ್ರಾಂಡ್ ‘ಫಾರೆಸ್ಟ್ ಎಸೆನ್ಷಿಯಲ್’ನ ಹೊಸ ಮುಖವಾಗಿ ಕಾಣಿಸಿಕೊಂಡಿದ್ದಾರೆ. ಹಾಗೂ ಕನಸನ್ನು ನನಸಾಗಿಸಲು ಬಡತನ ಅಡ್ಡಿಯಾವುದಿಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ.

Viral Video: ಐಷಾರಾಮಿ ಬ್ಯೂಟಿ ಬ್ರಾಂಡ್​​​ಗೆ 14 ವರ್ಷದ ಮುಂಬೈ ಸ್ಲಮ್ ಹುಡುಗಿ ಆಯ್ಕೆ
ವೈರಲ್​​ ವೀಡಿಯೊ
Follow us on

ನೀವು ಎಲ್ಲಿಂದ ಬಂದಿದ್ದರೂ ಪರವಾಗಿಲ್ಲ, ನಿಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಿ ಎಂದು 2014 ರಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದು, ಭಾಷಣ ಮಾಡುವ ಸಂದರ್ಭದಲ್ಲಿ ನಟಿ ಲುಪಿತಾ ನ್ಯಾಂಗ್ ಹೇಳಿದ್ದರು. ಇಂತಹ ಒಂದು ಕನಸನ್ನು 14 ವರ್ಷದ ಕೊಳಗೇರಿ ಹುಡುಗಿ ಮಲೀಶಾ ಖಾರ್ವಾ ನನಸಾಗಿಸಿದ್ದಾರೆ. ಹಾಲಿವುಡ್ ನಟ ರಾಬರ್ಟ್ ಹಾಫ್ಮನ್ ಅವರು 2020 ರಲ್ಲಿ ಮುಂಬೈನಲ್ಲಿ ಮ್ಯೂಸಿಕ್ ವೀಡಿಯೋವನ್ನು ಚಿತ್ರೀಕರಿಸುವಾಗ ಮಲೀಶಾ ಅವರನ್ನು ಪತ್ತೆಹಚ್ಚಿದರು ಈ ಹಾಲಿವುಡ್ ತಾರೆ ಆಕೆಗೆ ಆರ್ಥಿಕವಾಗಿ ಸಹಾಯ ಮಾಡಲು ಗೋ ಫಂಡ್ ಮಿ ಎಂಬ ಪುಟವನ್ನು ಸಹ ಸ್ಥಾಪಿಸಿದ್ದರು. ನಂತರ ಮಲೀಶಾ ಪ್ರಸಿದ್ಧಿಯನ್ನು ಗಳಿಸಿ, ಪ್ರಸ್ತುತ ಆಕೆ ಇನ್ಸ್ಟಾಗ್ರಾಮ್ ನಲ್ಲಿ 225 ಸಾವಿರಗಿಂತಲೂ ಹೆಚ್ಚು ಫಾಲೋವರ್ಸ್​ ಹೊಂದಿದ್ದಾಳೆ. ಹಲವಾರು ಮಾಡೆಲಿಂಗ್ ಗಿಗ್ಸ್ ಗಳಲ್ಲಿ ಕಾಣಿಸಿಕೊಂಡಿದ್ದಾಳೆ ಹಾಗೂ ಲೈವ್ ಯುವರ್ ಫೇರಿಟೇಲ್ ಎಂಬ ಕಿರು ಚಿತ್ರದಲ್ಲೂ ಅಭಿನಯಿಸಿದ್ದಾರೆ. ಆಕೆಯನ್ನು ಪ್ರಿನ್ಸೆಸ್ ಆಫ್ ದಿ ಸ್ಲಮ್’ ಎಂದು ಕರೆಯುತ್ತಾರೆ. ಪ್ರಸ್ತುತ ಮಲೀಶಾ ಐಷಾರಾಮಿ ಬ್ಯೂಟಿ ಬ್ರಾಂಡ್ ‘ಫಾರೆಸ್ಟ್ ಎಸೆನ್ಷಿಯಲ್’ ನ ಹೊಸ ಅಭಿಯಾನವಾದ ‘ಯುವತಿ ಸೆಲೆಕ್ಷನ್’ ಹೊಸ ಮುಖವಾಗಿ ಕಾಣಿಸಿಕೊಂಡಿದ್ದಾಳೆ. ಇದು ಯುವ ಮನಸ್ಸುಗಳನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ.

ಏಪ್ರಿಲ್​​​​ನಲ್ಲಿ ಈ ಬ್ರಾಂಡ್ ತನ್ನ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಮಲೀಶಾ ಅವರ ಸುಂದರವಾದ ವೀಡಿಯೋವನ್ನು ಹಂಚಿಕೊಂಡು, ಅದಕ್ಕೆ ‘ಅವಳ ಕನಸುಗಳು ಅವಳ ಮುಂದೆ ತೆರೆದುಕೊಳ್ಳುವುದನ್ನು ನೋಡಿದಾಗ ಆಕೆಯ ಮುಖ ಸಂತೋಷದಿಂದ ಅರಳಿತು. ಕನಸುಗಳು ನಿಜವಾಗಿಯೂ ನನಸಾಗುತ್ತವೆ ಎಂಬುದಕ್ಕೆ ಮಲೀಶಾ ಅವರ ಕಥೆಯು ಸುಂದರವಾದ ಜ್ಞಾಪನೆಯಾಗಿದೆ’ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದೆ. ವೀಡಿಯೋದಲ್ಲಿ ಮಲೀಶಾ ಬ್ರಾಂಡ್ ಅಂಗಡಿಗೆ ಪ್ರವೇಶಿಸುತ್ತಾಳೆ, ಅಲ್ಲಿ ಆಕೆಯ ಪ್ರಚಾರದ ಚಿತ್ರಗಳಿದ್ದವು, ಅದನ್ನು ನೋಡಿ ಆಕೆ ಮನಸ್ಪೂರ್ವಕವಾಗಿ ಸಂತೋಷಪಡುವುದನ್ನು ಕಾಣಬಹುದು.

ಇನ್ಸ್ಟಾಗ್ರಾಮ್​​​​ನಲ್ಲಿ ಹಂಚಿಕೊಂಡ ಈ ವೀಡಿಯೋ 5.5 ಮಿಲಿಯನ್ ವೀಕ್ಷಣೆಯನ್ನು ಹಾಗೂ 412 ಸಾವಿರ ಲೈಕ್ಸ್​​​ಗಳನ್ನು ಪಡೆದುಕೊಂಡಿದೆ. ನೆಟ್ಟಿಗರು ಈ ಸುಂದರ ವೀಡಿಯೋಗೆ ಕಮೆಂಟ್ಸ್ ಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಒಬ್ಬ ಬಳಕೆದಾರರು ‘ಆಕೆ ತನ್ನ ಯಶಸ್ಸನ್ನು ಕಂಡುಕೊಳ್ಳುವುದನ್ನು ನೋಡುವುದು ಅದ್ಭುತವಾಗಿದೆ, ಅವರಿಗೆ ಭವಿಷ್ಯದಲ್ಲಿ ಸಾಕಷ್ಟು ಯಶಸ್ಸು ಸಿಗಲಿ’ ಎಂದು ಆರೈಸಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ಇದು ತುಂಬಾ ಸಕಾರಾತ್ಮಕವಾಗಿದೆ. ಅವಳ ನಗೂ ಕೂಡ ಸುಂದರವಾಗಿದೆ’ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಕಂಪೆನಿಗಳು ಬಾಲಿವುಡ್ ನಟಿಯರನ್ನು ಸೌಂದರ್ಯ ಜಾಹಿರಾತಿಗಾಗಿ ತೆಗೆದುಕೊಳ್ಳುವ ಬದಲು ಬಡ ಮತ್ತು ವಂಚಿತ ಮಕ್ಕಳನ್ನು ತೆಗೆದುಕೊಳ್ಳಬೇಕು” ಎಂದು ಹೇಳಿದ್ದಾರೆ.

ಇದನ್ನೂ ಓದಿ:Viral News: 15 ವರ್ಷಗಳ ಬಳಿಕ ಯಹೂದಿ ಸಂಪ್ರದಾಯದ ವಿವಾಹಕ್ಕೆ ಸಾಕ್ಷಿಯಾದ ಕೇರಳ

ಫಾರೆಸ್ಟ್ ಎಸೆನ್ಷಿಯಲ್​​​ನ ಸಂಸ್ಥಾಪಕಿ ಮತ್ತು ಮುಖ್ಯ ವ್ಯವಸ್ಥಾಪನ ನಿರ್ದೇಶಕಿ ಮೀರಾ ಕುಲಕರ್ಣಿ ವೋಗ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ, ‘ನಾವು ಯುವತಿ ಕಲೆಕ್ಷನ್ ಮೂಲಕ ಮಲೀಶಾ ಅವರ ಕನಸನ್ನು ಬೆಂಬಲಿಸುವುದು ಮಾತ್ರವಲ್ಲದೆ ಯುವ ಮನಸ್ಸುಗಳನ್ನು ಸಶಕ್ತಗೊಳಿಸಲು ಪ್ರಾಜೆಕ್ಟ್ ಪಾಠಶಾಲೆಗೆ ಕೊಡುಗೆ ನೀಡುತ್ತಿದ್ದೇವೆ’ ಎಂದು ಹೇಳಿದರು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:45 pm, Mon, 22 May 23