ಬೇರೆ ಯಾವುದಕ್ಕೇ ಅಡ್ಡ ಬಂದರೂ ಸರಿ, ಆದರೆ ವೇಗವಾಗಿ ಚಲಿಸುವ ರೈಲಿಗೆ ಅಡ್ಡ ಬಂದರೆ ಎಂಥವನಾದರೂ ಬದುಕಬಹುದಾ? ರೈಲೆಂದರೆ ವೇಗ, ರೈಲೆಂದರೆ ಗಾಳಿಯಷ್ಟೇ ವೇಗ ಎಂದರೂ ತಪ್ಪಾಗಲಾರದು. ಮನುಷ್ಯ ಮಾತ್ರನಾದವನು ಬಿಡಿ, ದೊಡ್ಡ ದೊಡ್ಡ ವಾಹನಗಳು, ಇನ್ಯಾವುದೇ ವೇಗವಾಗಿ ಚಲಿಸುತ್ತಿರುವ ರೈಲಿಗೆ ಅಡ್ಡ ಬಂದರೆ ಅದು ಚೂರು ಚೂರಾಗುವುದು ಖಚಿತ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿರುವ ವಿಡಿಯೊ ಒಂದು ಇದಕ್ಕೆ ಸಾಕ್ಷಿಯಂತಿದೆ. ಅಮೆರಿಕ ಟೆಕ್ಸಾಸ್ ಬಳಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಗಾಳಿಯಿಂದ ವಿದ್ಯುತ್ ಉತ್ಪಾದಿಸುವ ಟರ್ಬೈನ್ ಅನ್ನು ಸಾಗಿಸುತ್ತಿದ್ದ 18 ಚಕ್ರದ ಭಾರಿ ಗಾತ್ರದ ಸೆಮಿ ಟ್ರಕ್ ರೈಲುಮಾರ್ಗಕ್ಕೆ ಅಡ್ಡವಾಗಿ ನಿಂತಿತ್ತು. ಹಾ, ನೆನಪಿಡಿ, ಇದು 4 ಚಕ್ರಗಳ ಸಾದಾ ಟ್ರಕ್ ಅಲ್ಲ, ಬದಲಿಗೆ, 18 ಚಕ್ರಗಳ ಭಾರಿ ದೈತ್ಯಾಕಾರದ ಟ್ರಕ್.
ಆದರೆ ಅತ್ಯಂತ ರಭಸದಿಂದ ಧಾವಿಸಿದ ರೈಲಿನ ಜಪಾಟಿಗೆ ಈ ಟ್ರಕ್ ಬೆಚ್ಚಿ ಬೆದರಿಹೋದವರಂತೆ ನುಚ್ಚುನೂರಾಯಿತು. ಈ ಘಟನೆಯನ್ನು ದೂರದಿಂದ ತಮ್ಮ ಕಾರಲ್ಲಿ ಕುಳಿತು ನೋಡುತ್ತಿದ್ದ ವ್ಯಕ್ತಿಯೋರ್ವ ಈ ಘಟನೆಯ ವಿಡಿಯೋ ಮಾಡಿದ್ದ. ಆದರೆ ಅದೃಷ್ಟವಶಾತ್ ಟ್ರಕ್ನಲ್ಲಿದ್ದ ಯಾರಿಗೂ ಏನೂ ಅಪಾಯವಾಗಲಿಲ್ಲ.
Published On - 9:18 pm, Wed, 1 September 21