Viral Video: ಅನುಚಿತವಾಗಿ ವರ್ತಿಸಿದ ವ್ಯಕ್ತಿಗೆ ನಡು ರಸ್ತೆಯಲ್ಲೇ ಥಳಿಸಿದ ಯುವತಿಯರು

|

Updated on: Aug 31, 2024 | 5:35 PM

ತಡರಾತ್ರಿ ಬುಲೆಟ್ ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಇಬ್ಬರು ಯುವತಿಯರು ಹಲ್ಲೆ ನಡೆಸಿದ್ದಾರೆ. ಕಾರಿನಲ್ಲಿದ್ದ ಯುವತಿಯರೊಂದಿಗೆ ವ್ಯಕ್ತಿ ಅನುಚಿತವಾಗಿ ವರ್ತಿಸಿದ್ದು, ಇದರಿಂದ ಕೋಪಗೊಂಡ ಯುವತಿಯರು ಥಳಿಸಿರುವುದಾಗಿ ವರದಿಯಾಗಿದೆ.

Viral Video: ಅನುಚಿತವಾಗಿ ವರ್ತಿಸಿದ ವ್ಯಕ್ತಿಗೆ ನಡು ರಸ್ತೆಯಲ್ಲೇ ಥಳಿಸಿದ ಯುವತಿಯರು
Follow us on

ಉತ್ತರಪ್ರದೇಶ: ವಾರಣಾಸಿಯ ಹುಕುಲ್‌ಗಂಜ್‌ನ ಲಾಲ್‌ಪುರ್ ಪ್ರದೇಶದಲ್ಲಿ ಆಘಾತಕಾರಿ ಪ್ರಕರಣವೊಂದು ಹೊರಬಿದ್ದಿದ್ದು, ತಡರಾತ್ರಿ ಬುಲೆಟ್ ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಇಬ್ಬರು ಯುವತಿಯರು ಹಲ್ಲೆ ನಡೆಸಿದ್ದಾರೆ. ಕಾರಿನಲ್ಲಿದ್ದ ಯುವತಿಯರೊಂದಿಗೆ ವ್ಯಕ್ತಿ ಅನುಚಿತವಾಗಿ ವರ್ತಿಸಿದ ಎಂಬ ಆರೋಪದ ಮೇಲೆ ಯುವತಿಯರಿಬ್ಬರು ಆತನಿಗೆ ಥಳಿಸಿದ್ದಾರೆ.

ಫ್ರಂಟ್ ನ್ಯೂಸ್ ನೆಟ್‌ವರ್ಕ್‌ನ ವರದಿಯ ಪ್ರಕಾರ, ಈ ಘಟನೆಯು ಆಗಸ್ಟ್ 30 ರ ಮಧ್ಯರಾತ್ರಿಯಲ್ಲಿ ನಡೆದಿದೆ. ಕೋಪಗೊಂಡ ಯುವತಿಯರಿಬ್ಬರು ಸುಮಾರು 1:25 ಕ್ಕೆ ತಮ್ಮ ಕಾರಿನಿಂದ ಇಳಿದು ಅವಾಚ್ಯ ಶಬ್ದಗಳಿಂದ ನಿಂದಿಸಲು ಪ್ರಾರಂಭಿಸಿದ್ದಾರೆ. ಅವನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: Richest Dog: 3300 ಕೋಟಿಗೂ ಅಧಿಕ ಆಸ್ತಿ ಹೊಂದಿರುವ ವಿಶ್ವದ ಶ್ರೀಮಂತ ಶ್ವಾನವಿದು

ಲಾಲ್‌ಪುರದ ಸಿದ್ಧೇಶ್ವರಿ ಮಾತಾ ದೇವಸ್ಥಾನದ ಬಳಿ ನಡೆದ ಈ ಸಂಪೂರ್ಣ ಘಟನೆಯನ್ನು ದಾರಿಹೋಕರೊಬ್ಬರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. @18NitinKumarRai ಎಂಬ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ಭಾರೀ ವೈರಲ್​​ ಆಗುತ್ತಿದೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ