ಜೆಸಿಬಿ ಬುಲ್ಡೋಜರ್ನ ಟೈಯರ್ ಸ್ಫೋಟವಾಗಿ ಇಬ್ಬರು ಕೆಲಸಗಾರರು ಮೃತಪಟ್ಟ ದುರ್ಘಟನೆ ಛತ್ತೀಸ್ಗಢ್ನ ರಾಯ್ಪುರದಲ್ಲಿ ನಡೆದಿದೆ. ಟೈಯರ್ಗೆ ಗಾಳಿ ತುಂಬಿಸುತ್ತಿದ್ದಾಗ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಈ ಭಯಾನಕ ದೃಶ್ಯ ವೈರಲ್ ಆಗಿದೆ. ಈ ಇಬ್ಬರು ಕಾರ್ಮಿಕರು ಜೆಸಿಬಿಯಿಂದ ಟೈಯರ್ ತೆಗೆದು, ಅದಕ್ಕೆ ಗಾಳಿ ತುಂಬುವ ಜತೆ ಅದನ್ನು ಒತ್ತಿ ಚೆಕ್ ಮಾಡುತ್ತಿದ್ದರು. ಆಗ ಟೈಯರ್ ಸ್ಫೋಟಗೊಂಡು ಇವರಿಬ್ಬರೂ ಗಾಳಿಯಲ್ಲಿ ಹಾರಿ ಬಿದ್ದು ಮೃತಪಟ್ಟಿದ್ದಾರೆ.
ರಾಯ್ಪುರದ ಸಿಲ್ಟಾರಾ ಕೈಗಾರಿಕಾ ಪ್ರದೇಶದಲ್ಲಿ ಎರಡು ದಿನಗಳ ಹಿಂದೆಯೇ ಘಟನೆ ನಡೆದಿದ್ದು ಈಗ ವಿಡಿಯೋ ವೈರಲ್ ಆಗಿದ್ದಾಗಿ ವರದಿಯಾಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋ ಸಿಕ್ಕಾಪಟೆ ಹರಿದಾಡುತ್ತಿದೆ. ಜೆಸಿಬಿ ಟೈಯರ್ಗಳು ಸಹಜವಾಗಿಯೇ ದೊಡ್ಡದಾಗಿರುತ್ತವೆ. ಅದಕ್ಕೆ ಇವರಿಬ್ಬರೂ ಸೇರಿ ಗಾಳಿ ತುಂಬುತ್ತಿದ್ದರು. ಗಾಳಿ ತುಂಬಿದ್ದು ಸಾಕೋ, ಇನ್ನಷ್ಟು ತುಂಬಬೇಕೋ ಎಂದು ನೋಡಲು ಶಕ್ತಿ ಹಾಕಿ ಒತ್ತುತ್ತಿದ್ದರು. ದುರದೃಷ್ಟಕ್ಕೆ ಅದು ಸ್ಫೋಟಗೊಂಡಿದೆ. ಈ ಟೈಯರ್ಗೆ ಅಗತ್ಯಕ್ಕಿಂತ ಹೆಚ್ಚು ಗಾಳಿ ತುಂಬಿದ್ದರಿಂದ ಹೀಗಾಯಿತೋ ಅಥವಾ ಟೈಯರ್ ಹಾನಿಯಾಗಿತ್ತಾ ಎಂಬುದು ಗೊತ್ತಾಗಿಲ್ಲ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು, ತನಿಖೆ ಶುರು ಮಾಡಿದ್ದಾರೆ.
ಇದನ್ನೂ ಓದಿ: BMTC Protest: ಮುಷ್ಕರದಲ್ಲಿ ಭಾಗಿಯಾಗಿದ್ದಕ್ಕೆ ಕೆಲಸದಿಂದ ವಜಾಗೊಂಡಿದ್ದ ಬಿಎಂಟಿಸಿ ಚಾಲಕ ಬೇಸತ್ತು ಆತ್ಮಹತ್ಯೆ
Published On - 5:22 pm, Thu, 5 May 22