Viral Video: ನೀರು ಕುಡಿಯಲು ಬಂದಿರುವ ಸಿಂಹಗಳು ಒಂದಲ್ಲ ಎರಡಲ್ಲ ಒಟ್ಟು 20!

|

Updated on: Jul 06, 2023 | 11:09 AM

South Africa : ''ಮಲ್​ಮಲ್​ ಸಫಾರಿಗೆ ಹೋದಾಗ ಮುಂಜಾವು ಶಾಂತವಾಗಿತ್ತು. ಮೊದಲು ಬೆಟ್ಟದ ಕಡೆಯಿಂದ ಎರಡು ಕಿವಿಗಳಷ್ಟೇ ಕಂಡವು. ಬರುಬರುತ್ತ ಒಂದೊಂದೇ ಸಿಂಹಗಳು ನದಿಯೆಡೆ ಸಾಗಿದವು. ಇದು ನಮ್ಮ ಅದೃಷ್ಟ!''

Viral Video: ನೀರು ಕುಡಿಯಲು ಬಂದಿರುವ ಸಿಂಹಗಳು ಒಂದಲ್ಲ ಎರಡಲ್ಲ ಒಟ್ಟು 20!
ದಕ್ಷಿಣ ಆಫ್ರಿಕಾದ ಮಲ್​ಮಲ್​ ಕಾಡಿನಲ್ಲಿ ನೀರು ಕುಡಿಯುತ್ತಿರುವ ಸಿಂಹಗಳು
Follow us on

Lions: ಹೀಗೆ ನದಿಯಲ್ಲಿ ಒಟ್ಟಿಗೇ 20 ಸಿಂಹಗಳು ನೀರು ಕುಡಿಯುತ್ತಿರುವ ದೃಶ್ಯವನ್ನು ಸೆರೆಹಿಡಿದಿರುವುದು ದಕ್ಷಿಣ ಆಫ್ರಿಕಾದ ಮಲ್​ಮಲ್​ ಅರಣ್ಯ ಮೀಸಲು ಪ್ರದೇಶದಲ್ಲಿ (MalaMala Game Reserve). ಹೇಳಿಕಳಿಸಿದಂತೆ ಸಮಯಕ್ಕೆ ಸರಿಯಾಗಿ ಒಂದೊಂದೇ ಸಿಂಹಗಳು ಶಾಂತವಾಗಿ ಬಂದು ಇಲ್ಲಿ ಸಾಲಾಗಿ ನಿಂತು ನೀರು ಕುಡಿಯುತ್ತಿವೆ. ನಾಗರಿಕತೆಯ ಬಗ್ಗೆ ಲವಲೇಶವೂ ಗಂಧವಿಲ್ಲದ ಇವು ಮನುಷ್ಯರಿಗಿಂತಲೂ ಹೆಚ್ಚು ಶಿಸ್ತನ್ನು ರೂಢಿಸಿಕೊಂಡಿದ್ದಾದರೂ ಹೇಗೆ? ಅಚ್ಚರಿಯಾಗುತ್ತಿದೆಯಲ್ಲ? ನೋಡಿ ಈ ಕೆಳಗಿನ ವಿಡಿಯೋ.

ವನ್ಯಜೀವಿಗಳ ಜಗತ್ತೇ ಹೀಗೆ. ನಮಗರಿವಿಲ್ಲದ ಅನೇಕ ಸಂಗತಿಗಳನ್ನು ಇದು ಹುದುಗಿಸಿಟ್ಟುಕೊಂಡಿದೆ. ಕೆಲವೊಮ್ಮೆ ಊಹೆಗೆ ನಿಲುಕದಂಥ ವಿಷಯಗಳನ್ನು ಹೀಗೆ ಪ್ರಕೃತಿ ನಮ್ಮ ಮುಂದೆ ಪ್ರಸ್ತುತಪಡಿಸುತ್ತದೆ. LatestSightings.com ನ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಡಾವ್ ಒಸೆಂಡ್ರೈವರ್ (Nadav Ossendryver) ಈ ವಿಡಿಯೋ ಅನ್ನು ಚಿತ್ರೀಕರಿಸಿ ಯೂಟ್ಯೂಬ್​ನಲ್ಲಿ ಅಪ್​ಲೋಡ್ ಮಾಡಿದ್ದಾರೆ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ”ಇದರಲ್ಲಿ ಪಾನೀ ಮತ್ತು ಪುರಿ ಎಲ್ಲಿ?” ನೆಟ್ಟಿಗರು ರಾವುಗಾಜು ಹಿಡಿದು ಹುಡುಕುತ್ತಿದ್ದಾರೆ

”ಮಲ್​ಮಲ್​ ಸಫಾರಿಗೆ ಹೋದಾಗ ಮುಂಜಾನೆ ಹೊತ್ತು, ಅತ್ಯಂತ ಶಾಂತವಾಗಿತ್ತು. ನಾವು ಚಿರತೆಗಾಗಿ ಹುಡುಕಾಟ ನಡೆಸಿದ್ದೆವು. ಆದರೆ ನಮಗೆ 20 ಸಿಂಹಗಳು ಒಟ್ಟಿಗೇ ನೀರು ಕುಡಿಯುವ ದೃಶ್ಯ ಸಿಕ್ಕಿತು. ಇದು ನಮ್ಮ ಅದೃಷ್ಟ. ಆರಂಭದಲ್ಲಿ ಬೆಟ್ಟದ ಬಳಿಯಿಂದ ಎರಡು ಕಿವಿಗಳಷ್ಟೇ ಕಂಡವು. ನೋಡಿದರೆ ಸಿಂಹ! ಒಂದೊಂದೇ ಸರದಿಯಲ್ಲಿ ಬರಲು ಶುರು ಮಾಡಿದವು. ನಂತರ ನದಿಯಲ್ಲಿ ನೀರು ಕುಡಿರಲಾರಂಭಿಸಿದವು. ಜೀವನದಲ್ಲಿ ಮತ್ತೊಮ್ಮೆ ಇಂಥ ಕ್ಷಣಗಳು ಸಿಗಲಾರವು ಅನ್ನಿಸುವಷ್ಟು ಸುಂದರವಾದ ದೃಶ್ಯ ಇದಾಗಿತ್ತು.” ಎಂದು ಒಸೆಂಡ್ರೈವರ್ ಹೇಳಿದ್ದಾರೆ.

ಇದನ್ನೂ ಓದಿ : Viral: ಪಿವಿಆರ್ ಪಾಪ್​ಕಾರ್ನ್ ಬೆಲೆಯೂ ಅಮೇಝಾನ್ ತ್ರೈಮಾಸಿಕ​ ಚಂದಾ ಬೆಲೆಯೂ ಒಂದೇ 

ಪ್ರಕೃತಿಯಲ್ಲಿ ಅದರದೇ ಆದ ಶಿಸ್ತು ಇದೆ. ಮನುಷ್ಯರಾದ ನಾವುಗಳು ನಾಗರಿಕತೆಯ ಹೆಸರಿನಲ್ಲಿ ಅದೆಲ್ಲವನ್ನೂ ಅಶಿಸ್ತುಗೊಳಿಸುತ್ತ ಬರುತ್ತಿದ್ದೇವೆ. ನಾಶಗೊಳಿಸುತ್ತಿದ್ದೇವೆ. ಚಿರತೆ ದಾಳಿ ಮಾಡಿತು, ಹುಲಿ ದಾಳಿ ಮಾಡಿತು, ಆನೆ ದಾಳಿ ಮಾಡಿತು ಎಂದು ಹೇಳುವಲ್ಲಿ ಏನಾದರೂ ಅರ್ಥ ಇದೆಯಾ? ಅವುಗಳ ಕಾಡನ್ನು ಕಡಿದೇ ನಾವು ನಾಡನ್ನು ಕಟ್ಟಿಕೊಂಡಿರುವುದಲ್ಲವೆ? ಏನಂತೀರಿ ನೀವು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ