AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಜಿಯಾ ಜಲೇ ಜಾನ್​ ಜಲೇ; ಹಾರ್ಮೋನಿಯಂನಲ್ಲಿ ದಿಲ್​ಸೇ ಹಾಡು

Harmonium : ಮ್ಯೂಸಿಕ್​ ಅರೇಂಜರ್​ ಮತ್ತು ಸೌಂಡ್ ಎಂಜಿಯರ್ ಆಗಿರುವ ಆದಿತ್ಯ ಓಕ್​ ಈ ಹಾಡನ್ನು ಹಾರ್ಮೋನಿಯಂನಲ್ಲಿ ನುಡಿಸಿದ್ದೇ ತಡ, ನಮಗೆ ಹೊಸ ಹರೆಯ ಬಂದಂತಾಗುತ್ತಿದೆ ಎನ್ನುತ್ತಿದ್ದಾರೆ ನೆಟ್ಟಿಗರು.

Viral Video: ಜಿಯಾ ಜಲೇ ಜಾನ್​ ಜಲೇ; ಹಾರ್ಮೋನಿಯಂನಲ್ಲಿ ದಿಲ್​ಸೇ ಹಾಡು
ಹಾರ್ಮೋನಿಯಂವಾದನದಲ್ಲಿ ಆದಿತ್ಯ ಓಕ್​
ಶ್ರೀದೇವಿ ಕಳಸದ
|

Updated on:Jul 05, 2023 | 3:49 PM

Share

Dilse : ಹಾಡು ಹಳೆಯದಾದರೇನು ಭಾವ ನವನವೀನ ಎನ್ನುವಂತೆ ಇನ್​ಸ್ಟಾಗ್ರಾಂನ ರೀಲ್​ಗಳು. ಹಳತು ಹೊಸತು ಎಂಬ ಬೇಧವಿಲ್ಲದೆ ಲಕ್ಷಾಂತರ ಕಲಾವಿದರು ಅವುಗಳ ಮರುಪ್ರಸ್ತುತಿ ಮಾಡುತ್ತಾರೆ. ಒಬ್ಬೊಬ್ಬರ ಪ್ರಸ್ತುತಿಯನ್ನು ಕೇಳಿದಾಗಲೂ ಆ ಹಾಡು ಹೊಸ ಮೆರುಗನ್ನು ಪಡೆದುಕೊಳ್ಳುತ್ತದೆ, ಅಷ್ಟೇ ಅಲ್ಲ ಕೇಳುಗರಲ್ಲಿ ಸಂಚಲವನ್ನೂ ಉಂಟುಮಾಡುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಸಂಗೀತ ನಿರ್ವಹಣಕಾರ ಮತ್ತು ಸೌಂಡ್​ ಎಂಜಿನಿಯರ್ ಆಗಿರುವ ಆದಿತ್ಯ ಓಕ್​ (Aditya Oke) ಎಂಬುವವರು ದಿಲ್​ಸೆ (Dilse) ಚಿತ್ರದ ಜಿಯಾ ಜಲೇ ಜಾನ್​ ಜಲೇ (Jiya Jale Jaan Jale) ಹಾಡನ್ನು ಹಾರ್ಮೋನಿಯಂನಲ್ಲಿ ನುಡಿಸಿದ್ದಾರೆ ಕೇಳಿ, ನೋಡಿ.

View this post on Instagram
ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

A post shared by Aditya Oke (@adityaoke)

ಆಹಾ ಎಷ್ಟು ಸುಮಧುರವಾಗಿದೆ ಈ ನುಡಿಸಾಣಿಕೆ, ನನ್ನ ಮನಸ್ಸು ಮತ್ತು ಹೃದಯ ಪ್ರಫುಲ್ಲಗೊಂಡವು ಎಂದಿದ್ದಾರೆ ನೆಟ್ಟಿಗರು. ಹಾರ್ಮೋನಿಯಂ ಆ ಹಾಡಿನ ಆತ್ಮವನ್ನು ಇಲ್ಲಿ ವಿಸ್ತರಿಸಿದೆ ಎನ್ನಿಸುತ್ತಿದ ಎಂದಿದ್ದಾರೆ ಒಬ್ಬರು. ಬೆರಳುಗಳು ಹಾರ್ಮೋನಿಯಂ ಕೀಗಳ ಮೇಲೆ ಎಷ್ಟೊಂದು ಲೀಲಾಜಾಲವಾಗಿ ಚಲಿಸುತ್ತಿವೆ, ಅದ್ಭುತ ಎಂದಿದ್ದಾರೆ ಮತ್ತೊಬ್ಬರು. ಆದಿತ್ಯ ಅವರು ನುಡಿಸಿದ ”ಲಾಲ್​ ಇಷ್ಕ್​” ಕೇಳಿ ಈ ಕೆಳಗಿನ ರೀಲ್​ನಲ್ಲಿ.

View this post on Instagram

A post shared by Aditya Oke (@adityaoke)

ಎಷ್ಟು ಸಲ ಕೇಳಿದರೂ ಇದರ ನಶೆಯೇ ಇಳಿಯುತ್ತಿಲ್ಲ ಎಂದಿದ್ದಾರೆ ಮಗದೊಬ್ಬರು. ನನ್ನ ಪ್ರಿಯತಮನನ್ನು ಖುಷಿಪಡಿಸಲು ಇದಕ್ಕಿಂತ ಮತ್ತೊಂದು ರೀಲ್​ ಇಲ್ಲವೇ ಇಲ್ಲ ಎಂದಿದ್ದಾರೆ ಇನ್ನೂ ಒಬ್ಬರು. 1 ಲಕ್ಷಕ್ಕಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. 30,000ಕ್ಕಿಂತಲೂ ಹೆಚ್ಚು ಜನ ಈ ವಿಡಿಯೋ ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ : Viral Video: ಉಸ್ತಾದ್​ ಸ್ಪೈಡರ್​​ಖಾನ್​; ಖಂಡಿತ ಇದು ಜಗತ್ತಿನ ಶಾಂತಿಗಾಗಿ ಅಲ್ಲ!

ನೂರಾರು ಜನರು ತಮ್ಮ ಮೆಚ್ಚುಗೆಯನ್ನು ಈ ವಿಡಿಯೋಗೆ ಸೂಚಿಸಿದ್ದಾರೆ. ಮತ್ತಷ್ಟು ಚಿತ್ರಗೀತೆಗಳನ್ನು ನಿಮ್ಮ ಹಾರ್ಮೋನಿಯಂ ವಾದನದಲ್ಲಿ ಕೇಳುವ ಆಸೆಯಾಗುತ್ತಿದೆ ಎಂದು ಅನೇಕರು ಹಳೆಯ ಮತ್ತು ಹೊಸ ಚಿತ್ರಗೀತೆಗಳ ಪಟ್ಟಿಯನ್ನೇ ನೀಡುತ್ತಿದ್ದಾರೆ ಈ ಪೋಸ್ಟ್​ನಡಿ.

ಈ ಸಂಜೆ, ರೊಯ್ಯನೇ ಬೀಸುತ್ತಿರುವ ಗಾಳಿ ಮತ್ತು ಹಾರ್ಮೋನಿಯಂನಲ್ಲಿ ಈ  ಹಾಡು… ಒಟ್ಟಾರೆ ನಿಮಗೀಗ ಒಂದೆರಡು ಹೆಜ್ಜೆ ಕುಣಿಯಬೇಕು ಎನ್ನಿಸುತ್ತಿರಬೇಕಲ್ಲ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:44 pm, Wed, 5 July 23

ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!