ಸುರಕ್ಷಿತ ಲೈಂಗಿಕತೆ, ಜನನ ನಿಯಂತ್ರಣಕ್ಕಾಗಿ ಕಾಂಡೋಮ್ ಬಳಕೆ ಮಾಡಲಾಗುತ್ತದೆ. ಆದ್ರೆ ಎಂದಾದರೂ ವಿಶ್ವದ ಅತ್ಯಂತ ದುಬಾರಿ ಕಾಂಡೋಮ್ ಬಗ್ಗೆ ಕೇಳಿದ್ದೀರಾ? ಇದೀಗ 200 ವರ್ಷಗಳಷ್ಟು ಹಳೆಯದಾದ ಕಾಂಡೋಮ್ ಹರಾಜಿನಲ್ಲಿ ಮಾರಾಟವಾಗಿದೆ. ಇದರ ಬೆಲೆ ಕೇಳಿದ್ರೆ ನೀವು ಶಾಕ್ ಆಗುವುದಂತೂ ಖಂಡಿತಾ..ಯಾಕಿಷ್ಟು ದುಬಾರಿ ? ಏನಿದರ ವಿಶೇಷತೆ ಏನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
200 ವರ್ಷಗಳಷ್ಟು ಹಳೆಯದಾದ ಕಾಂಡೋಮ್ ಅನ್ನು ಇತ್ತೀಚೆಗಷ್ಟೆ ವಿಶ್ವದ ಅತ್ಯಂತ ದುಬಾರಿ ಕಾಂಡೋಮ್ ಎಂದು ಗುರುತಿಸಲಾಗಿದ್ದು, ಇದು £460 ಅಂದರೆ ಅಂದಾಜು ರೂ 44,000 ಗೆ ಮಾರಾಟವಾಗಿದೆ. ಇದು ಆಧುನಿಕ ಲ್ಯಾಟೆಕ್ಸ್ ಕಾಂಡೋಮ್‌ಗಳಿಗಿಂತ ಭಿನ್ನವಾಗಿದ್ದು, ಇದನ್ನು ಕುರಿಗಳ ಕರುಳಿನಿಂದ ತಯಾರಿಸಲಾಗಿದೆ, ಇದಲ್ಲದೇ 18 ನೇ ಅಥವಾ 19 ನೇ ಶತಮಾನದಷ್ಟು ಹಿಂದಿನದು ಎಂದು ವರದಿಯಾಗಿದೆ.
ಇದನ್ನೂ ಓದಿ: ಪತ್ನಿ ಬಿಕಿನಿ ತೊಟ್ಟು ಓಡಾಡಲು 418 ಕೋಟಿ ರೂ. ದ್ವೀಪ ಖರೀದಿಸಿದ ಪತಿ
ಹಿಂದಿನ ಕಾಲದಲ್ಲಿ ಕಾಂಡೋಮ್ಗಳನ್ನು ಕುರಿ, ಹಂದಿ, ಕರು ಮತ್ತು ಮೇಕೆಗಳಂತಹ ಪ್ರಾಣಿಗಳ ಕರುಳಿನಿಂದ ತಯಾರಿಸಲಾಗುತ್ತಿತ್ತು. ಆದ್ದರಿಂದಲೇ ಈ ಕಾಂಡೋಮ್ ಸಾಕಷ್ಟು ದುಬಾರಿಯಾಗಿದ್ದು, ಶ್ರೀಮಂತರಿಗೆ ಮಾತ್ರ ಇದನ್ನು ಬಳಸುತ್ತಿದ್ದರು. 19 cm (7 ಇಂಚುಗಳು) ಅಳತೆಯ ಈ ಕಾಂಡೋಮ್ ಅನ್ನು ಫ್ರಾನ್ಸ್‌ನಲ್ಲಿ ಕಂಡುಹಿಡಿಯಲಾಗಿದ್ದು, ಇದನ್ನು ಇದೀಗ ಹರಾಜಿನಲ್ಲಿ 44000 ರೂ.ಗೆ ಹರಾಜಿನಲ್ಲಿ ಮಾರಾಟ ಮಾಡಲಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:18 pm, Thu, 26 September 24