Viral Video: ಪತ್ನಿ ಬಿಕಿನಿ ತೊಟ್ಟು ಓಡಾಡಲು 418 ಕೋಟಿ ರೂ. ದ್ವೀಪ ಖರೀದಿಸಿದ ಪತಿ
ಬಿಕಿನಿ ಧರಿಸಬೇಕೆಂಬುದು ನನ್ನ ಪತ್ನಿಯ ಆಸೆ, ಆದರೆ ಇಲ್ಲಿ ಅರೆಬರೆ ಬಟ್ಟೆ ಧರಿಸಲು ಅವಕಾಶವಿಲ್ಲ. ಆದ್ದರಿಂದ ನನ್ನ ಪತ್ನಿ ಬಿಕಿನಿ ತೊಟ್ಟು ಓಡಾಡಲು 418 ಕೋಟಿ ರೂ. ಖರ್ಚು ಮಾಡಿ ಖಾಸಗಿ ದ್ವೀಪ ಖರೀದಿಸಿದ್ದೇನೆ. ಇಲ್ಲಿ ನಾನು ನನ್ನ ಪತ್ನಿಯೊಂದಿಗೆ ಆಕೆಯ ಇಚ್ಛೆಯಂತೆ ಏಕಾಂತದ ಸಮಯವನ್ನು ಕಳೆಯಲು ಬಯಸುತ್ತೇನೆ ಎಂದು ಪತಿರಾಯ ಹೇಳಿಕೊಂಡಿದ್ದಾನೆ.
ದುಬೈನಲ್ಲಿ ಮಹಿಳೆಯರ ಬಟ್ಟೆ ಬಗ್ಗೆ ನಿರ್ದಿಷ್ಟ ಕಾನೂನುಗಳಿವೆ. ಇಲ್ಲಿ ಮಹಿಳೆಯರು ಅರೆಬರೆ ಬಟ್ಟೆಯನ್ನು ಧರಿಸುವಂತಿಲ್ಲ. ಅದಕ್ಕಾಗಿಯೇ ದುಬೈ ಶ್ರೀಮಂತ ವ್ಯಕ್ತಿಯೊಬ್ಬ ತನ್ನ ಪತ್ನಿಯ ಆಸೆಯನ್ನು ಈಡೇರಿಸಲು 418 ಕೋಟಿ ರೂ. ಖರ್ಚು ಮಾಡಿ ದ್ವೀಪ ಖರೀದಿಸಿದ್ದಾನೆ. ಮೂಲತ: ಬ್ರಿಟನ್ ಯುವತಿಯನ್ನು ಮದುವೆಯಾಗಿದ್ದ ಈತ ತನ್ನ ಪತ್ನಿ ಆರಾಮಾಗಿ ಬಿಕಿನಿ ತೊಟ್ಟು ಓಡಾಡಲು ದ್ವೀಪ ಪ್ರದೇಶವನ್ನು ಖರೀದಿಸಿದ್ದಾನೆ.
ದುಬೈ ಮೂಲದ ಖ್ಯಾತ ಉದ್ಯಮಿ ಜಮಾಲ್ ಅಲ್ ನಡಾಕ್ ತನ್ನ ಪತ್ನಿಗಾಗಿ ಖರೀದಿಸಿದ ದ್ವೀಪದ ಕುರಿತು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. soudiofarabia ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಕೇವಲ ಒಂದೇ ವಾರದಲ್ಲಿ ವಿಡಿಯೋ 2.5 ಮಿಲಿಯನ್ ಅಂದರೆ 20 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ:ಈ ಗ್ರಾಮದಲ್ಲಿ ಮದುವೆಯಾದ ಒಂದು ವಾರದವರೆಗೆ ವಧುವಿಗೆ ಬಟ್ಟೆ ಧರಿಸಲು ಅವಕಾಶವಿಲ್ಲ!
ಬಿಕಿನಿ ಧರಿಸಬೇಕೆಂಬುದು ನನ್ನ ಪತ್ನಿಯ ಆಸೆ, ಆದರೆ ಇಲ್ಲಿ ಅರೆಬರೆ ಬಟ್ಟೆ ಧರಿಸಲು ಅವಕಾಶವಿಲ್ಲ. ಆದ್ದರಿಂದ ನನ್ನ ಪತ್ನಿ ಬಿಕಿನಿ ತೊಟ್ಟು ಓಡಾಡಲು 418 ಕೋಟಿ ರೂ. ಖರ್ಚು ಮಾಡಿ ಖಾಸಗಿ ದ್ವೀಪ ಖರೀದಿಸುವುದಾಗಿ ಹೇಳಿಕೊಂಡಿದ್ದಾನೆ. ಇಲ್ಲಿ ನಾನು ನನ್ನ ಪತ್ನಿಯೊಂದಿಗೆ ಆಕೆಯ ಇಚ್ಛೆಯಂತೆ ಏಕಾಂತದ ಸಮಯವನ್ನು ಕಳೆಯಲು ಬಯಸುತ್ತೇನೆ ಎಂದು ಪತಿರಾಯ ಹೇಳಿಕೊಂಡಿದ್ದಾನೆ. ಈ ದ್ವೀಪವು ಏಷ್ಯಾ ಖಂಡದಲ್ಲಿದೆ ಎಂದಿರುವ ಪತ್ನಿ, ಇದು ತಮ್ಮ ಖಾಸಗಿತನದ ಪ್ರಶ್ನೆ ಆಗಿರುವ ಕಾರಣ, ದ್ವೀಪದ ಜಾಗದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ