Viral Post: ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ ಐಶ್ವರ್ಯ ರೈ; ಪೋಸ್ಟ್ ವೈರಲ್
ಇತ್ತೀಚಿಗಷ್ಟೇ ಐಷಾರಾಮಿ ಬ್ರಾಂಡ್ ಲೋರಿಯಲ್‌ನ ಪ್ಯಾರಿಸ್ ಫ್ಯಾಶನ್ ವೀಕ್ನಲ್ಲಿ ಐಶ್ವರ್ಯ ಭಾಗಿಯಾಗಿದ್ದರು. ಈ ವೇಳೆ ನಟಿ ಸಂಪೂರ್ಣವಾಗಿ ಮೈ ಮುಚ್ಚುವ ಕೆಂಪು ಬಣ್ಣದ ಬಟ್ಟೆಯಲ್ಲಿ ಅತಿಯಾಗಿ ತೂಕ ಹೆಚ್ಚಿಸಿಕೊಂಡಂತೆ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ನಟಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆಂದು ಸುದ್ದಿ ಹರಿದಾಡಿದೆ.
ಬಾಲಿವುಡ್ ಬ್ಯೂಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದಾರೆ. ವೃತ್ತಿಪರ ಸಾಧನೆಗಳ ಬದಲಾಗಿ ದಾಂಪತ್ಯದಲ್ಲಿ ಬಿರುಕು, ಡಿವೋರ್ಸ್ ಮುಂತಾದ ಕಾರಣಗಳಿಂದ ಹೆಚ್ಚು ಚರ್ಚೆಯಲ್ಲಿದ್ದಾರೆ. ಇದರೊಂದಿಗೆ ಸದಾ ಬ್ಯೂಟಿಯ ಕಡೆಗೆ ಗಮನ ಕೊಡುವ ಐಶ್ವರ್ಯ ದಿನದಿಂದ ದಿನಕ್ಕೆ ತೂಕ ಏರಿಸಿಕೊಳ್ಳುತ್ತಲೇ ಇರುವುದು ಮತ್ತು ಇತ್ತೀಚಿನ ಫ್ಯಾಷನ್ ಆಯ್ಕೆಗಳಿಂದಾಗಿ ಆನ್‌ಲೈನ್ನಲ್ಲಿ ಟ್ರೋಲ್ ಆಗುತ್ತಿದ್ದಾರೆ
ಇತ್ತೀಚಿಗಷ್ಟೇ ಐಷಾರಾಮಿ ಬ್ರಾಂಡ್ ಲೋರಿಯಲ್‌ನ ಜಾಗತಿಕ ರಾಯಭಾರಿಯಾಗಿರುವ ಐಶ್ವರ್ಯಾ, 2024 ರ ಲೋರಿಯಲ್ ಪ್ಯಾರಿಸ್ ಫ್ಯಾಶನ್ ವೀಕ್ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ನಟಿ ಧರಿಸಿದ್ದ ಕೆಂಪು ಬಣ್ಣದ ಉಡುಗೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಬಾಡಿ ಶೆಮಿಂಗ್ ರೀತಿಯಲ್ಲಿ ನಟಿ ಟ್ರೋಲ್ ಆಗುತ್ತಿದ್ದಂತೆ ರೆಡ್ಡಿಟ್ ಹಂಚಿಕೊಂಡಿರುವ ಪೋಸ್ಟ್ ಎಲ್ಲೆಡೆ ವೈರಲ್ ಆಗಿದೆ.
ಪೋಸ್ಟ್ ಪ್ರಕಾರ, “ನಾನು ಐಶ್ವರ್ಯ ಅವರನ್ನು ಸಾಕಷ್ಟು ವರ್ಷಗಳಿಂದ ನೋಡುತ್ತಿದ್ದೇನೆ. ಐಶ್ವರ್ಯಾ ಹಲವು ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಇದರಿಂದಾಗಿ ಡಯೆಟ್ಗೆ ಮಾಡುತ್ತಿಲ್ಲ, ಜೊತೆಗೆ ತೂಕ ಇಳಿಸಿಕೊಳ್ಳುವ ಯಾವುದೇ ಔಷಧಿಗಳನ್ನು ಆಕೆ ತೆಗೆದುಕೊಳ್ಳುತ್ತಿಲ್ಲ. ಆದರೆ ನಾನು ಅವರ ಆರೋಗ್ಯ ಸಮಸ್ಯೆಯ ಬಗ್ಗೆ ಬಹಿರಂಗಪಡಿಸುವುದಿಲ್ಲ” ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ.
View this post on Instagram
ಇದನ್ನೂ ಓದಿ: ಮಹಿಳೆ ಕಛೇರಿಗಳಲ್ಲಿ ಕೆಲಸ ಪಡೆಯಲು ಪತಿಯ ಅನುಮತಿ ಅಗತ್ಯ; 18 ದೇಶಗಳಲ್ಲಿ ಈ ನಿಯಮ ಜಾರಿಯಲ್ಲಿದೆ
ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಡಿಲೀಟ್ ಮಾಡಲಾಗಿದೆ. ಸದ್ಯಕ್ಕೆ, ಐಶ್ವರ್ಯಾ ರೈ ಬಚ್ಚನ್ ಅಥವಾ ಅವರ ತಂಡವು ಅವರ ಆರೋಗ್ಯ ಸ್ಥಿತಿ ಅಥವಾ ಅವರ ವೈಯಕ್ತಿಕ ಜೀವನದ ಸುತ್ತ ಬೆಳೆಯುತ್ತಿರುವ ಊಹಾಪೋಹಗಳ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:48 pm, Thu, 26 September 24