Viral: ಭಾಂಗ್ ಲಸ್ಸಿ ತಂದ ಎಡವಟ್ಟು, ಭಾಂಗ್ ಸೇವಿಸಿ ಆಸ್ಪತ್ರೆ ಸೇರಿದ ಬ್ರಿಟಿಷ್ ಇನ್‌ಫ್ಲುಯೆನ್ಸರ್
ಭಾರತಕ್ಕೆ ಭೇಟಿ ನೀಡುವ ವಿದೇಶಿ ಪ್ರವಾಸಿಗರು ಇಲ್ಲಿನ ಬಗೆಬಗೆಯ ಆಹಾರಗಳನ್ನು ಸವಿಯಲು ಇಷ್ಟಪಡ್ತಾರೆ. ಅದೇ ರೀತಿ ಇತ್ತೀಚಿಗೆ ಬ್ರಿಟಿಷ್ ಇನ್‌ಫ್ಲುಯೆನ್ಸರ್ ಸ್ಯಾಮ್ ಪೆಪ್ಪರ್ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಮಲು ಭರಿಸುವ ಭಾಂಗ್ ಸೇವಿಸಿದ್ದಾರೆ. ಇದರಿಂದ ಹೊಟ್ಟೆ ನೋವು ಮತ್ತು ತೀವ್ರ ಹೊಟ್ಟೆ ತೊಳೆಸುವಿಕೆ ಸಮಸ್ಯೆ ಕಾಣಿಸಿಕೊಂಡಿದ್ದು, ಭಾಂಗ್ ಲಸ್ಸಿ ತಂದ ಎಡವಟ್ಟಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ನಮ್ಮ ಭಾರತದಲ್ಲಿ ವಿವಿಧ ರುಚಿಗಳನ್ನೊಳಗೊಂಡ ಬಗೆ ಬಗೆಯ ಅಡುಗೆ, ಆಹಾರಗಳಿದ್ದು, ಈ ವೆರೈಟಿ ಫುಡ್‌ಗಳನ್ನು ಸವಿಯಲೆಂದೇ ನಮ್ಮ ದೇಶಕ್ಕೆ ಪ್ರವಾಸ ಬರುವ ಹಲವರಿದ್ದಾರೆ. ವಿದೇಶಿ ಪ್ರವಾಸಿಗಂತೂ ಭಾರತದ ಆಹಾರಗಳನ್ನು ಬಾಯಿ ಚಪ್ಪರಿಸಕೊಂಡು ತಿನ್ನುತ್ತಾರೆ. ಅದೇ ರೀತಿ ಇತ್ತೀಚಿಗೆ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇದು ಏನೋ ವಿಶೇಷ ಪಾನೀಯವೇ ಇರಬೇಕೆಂದು ಬ್ರಿಟಿಷ್ ಇನ್‌ಫ್ಲುಯೆನ್ಸರ್ ಸ್ಯಾಮ್ ಪೆಪ್ಪರ್ ಗಾಂಜಾ ಎಲೆ, ಮಸಾಲೆ ಪದಾರ್ಥ ಹಾಗೂ ಹಾಲಿನಿಂದ ತಯಾರಿಸುವ ಅಮಲು ಭರಿಸಯವ ಭಾಂಗ್ ಲಸ್ಸಿ ಸೇವಿಸಿದ್ದು, ಇದರಿಂದ ಫುಡ್ ಪಾಯಿಸನ್ ಉಂಟಾಗಿಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಸ್ಯಾಮ್ ಪೆಪ್ಪರ್ ಉಜ್ಜಯಿನಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಅಲ್ಲಿ ಸ್ಥಳೀಯ ವ್ಯಾಪಾರಿಯೊಬ್ಬರು ಗಾಂಜಾ, ಮಸಾಲೆ ಪದಾರ್ಥ ಹಾಗೂ ಹಾಲನ್ನು ಸೇರಿಸಿ ತಯಾರಿಸುತ್ತಿದ್ದ ಅಮಲು ಭರಿಸಯವ ಭಾಂಗ್ ಲಸ್ಸಿ ಸೇವಿಸಿದ್ದಾರೆ. ಇದರಿಂದ ಫುಡ್ ಪಾಯಿಸನ್ ಉಂಟಾಗಿ ಸ್ಯಾಮ್‌ಗೆ ಹೊಟ್ಟೆ ತೊಳೆಸುವಿಕೆ ಕಾಣಿಸಿಕೊಂಡಿದ್ದು, ಭಾಂಗ್ ಲಸ್ಸಿಯ ಪಜೀತಿಯಿಂದ ಕೊನೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
This drink put Sam in hospital and the India tour is on hold for now, this is how it all unfolded 😭😭🛺🇮🇳💊💉 pic.twitter.com/FK2TdbYcEZ
— Sam Pepper Clips (@SamPepperClips) September 22, 2024
ಈ ಕುರಿತ ವಿಡಿಯೋವನ್ನು SamPepperClips ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ್ದು, “ಈ ಪಾನೀಯ ಸ್ಯಾಮ್ ಅವರನ್ನು ಆಸ್ಪತ್ರೆಗೆ ಸೇರುವ ಹಾಗೆ ಮಾಡಿತು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಸ್ಯಾಮ್ ಬಾಯಿ ಚಪ್ಪರಿಸಿಕೊಂಡು ಭಾಂಗ್ ಲಸ್ಸಿ ಸೇವಿಸುವ ದೃಶ್ಯವನ್ನು ಕಾಣಬಹುದು. ಬಳಿಕ ಫುಡ್ ಪಾಯಿಸನ್ ಆಗಿ ಹೊಟ್ಟೆ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊಟ್ಟೆ ನೋವು ತಾಳಲಾರದೇ ಆಸ್ಪತ್ರೆಯ ಬೆಡ್ ಮೇಲೂ ಅಳುತ್ತಾ ಕೂತಿದ್ದರು.
ಇದನ್ನೂ ಓದಿ: ಟ್ರೆಂಡ್‌ಗೋಸ್ಕರ ಅಕ್ಕಿ ಮುಡಿ ಎಸೆಯುವುದು ಬೇಡ, ಹುಲಿ ವೇಷ ಕಲೆ ಉಳಿಸಿ, ಕೈ ಮುಗಿದು ವಿನಂತಿಸಿದ ಸುಷ್ಮಾ ರಾಜ್
ಸೆಪ್ಟೆಂಬರ್ 23 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 70 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದನ್ನು ಕುಡಿಯುವ ಬದಲು ನೀವು ಚಹಾವನ್ನಾದರೂ ಸೆವಿಸಬಹುದಿತ್ತಲ್ವಾʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಿಮ್ಮ ಜೀರ್ಣಕ್ರಿಯೆ ಬಲವಾಗಿಲ್ಲ ಎಂದಾಗ ನೀವು ರಸ್ತೆ ಬದಿ ಆಹಾರವನ್ನು ಸೇವಿಸುವ ಬದಲು, ಹೈಫೈ ರೆಸ್ಟೋರೆಂಟ್ ಗೆ ಹೋಗಿʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ