ಟಾಯ್ಲೆಟ್ ಮೇಲೆ ವಾಷಿಂಗ್ ಮೆಷಿನ್ ಇಟ್ಟಿರುವ ಇಕ್ಕಟ್ಟಿನ ಫ್ಲ್ಯಾಟ್ಗೆ ಬಾಡಿಗೆ ಎಷ್ಟು ಗೊತ್ತೇ?
ಮುಂಬೈ ಒಂದು ಕನಸಿನ ನಗರಿ ಎಂದೇ ಹೇಳಬಹುದು, ಭವಿಷ್ಯವನ್ನು ಕಟ್ಟಿಕೊಳ್ಳುವ ಭರವಸೆಯೊಂದಿಗೆ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಆದರೆ ದುರಾದೃಷ್ಟವಶಾತ್ ಹೆಚ್ಚುತ್ತಿರುವ ಬಾಡಿಗೆಯಿಂದಾಗಿ ಜನರಿಗೆ ಇದು ಆರ್ಥಿಕ ಸವಾಲಾಗಿದೆ. ಉನ್ನತ ಶಿಕ್ಷಣ ಅಥವಾ ಉದ್ಯೋಗಕ್ಕಾಗಿ ಮುಂಬೈಗೆ ತೆರಳುವ ಜನರು ಗಗನಚುಂಬಿ ಕಟ್ಟಡಗಳ ನಗರದಲ್ಲಿ ಗಗನಕ್ಕೇರುತ್ತಿರುವ ಬಾಡಿಗೆ ಕೊಟ್ಟು ಉಳಿಯಲೇಬೇಕು.

ಅಲ್ಲಿನ ಬಾಡಿಗೆದಾರರು ಇಂಚಿಂಚು ಜಾಗವನ್ನೂ ಬಿಡದೆ ಬಳಕೆ ಮಾಡುತ್ತಾರೆ. ಮುಂಬೈನ ಪಾಲಿ ಹಿಲ್ನಲ್ಲಿರುವ ಅಪಾರ್ಟ್ಮೆಂಟ್ನ 2ಬಿಎಚ್ಕೆ ಫ್ಲ್ಯಾಟ್ ಬಗ್ಗೆ ಎಕ್ಸ್ನಲ್ಲಿ ಒಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.
ಉತ್ಕರ್ಷ್ ಗುಪ್ತಾ ಎಂಬುವವರು ಅಪಾರ್ಟ್ಮೆಂಟ್ನ ಬಾತ್ರೂಂನ ಫೋಟೊವನ್ನು ಹಂಚಿಕೊಂಡಿದ್ದು, ಟಾಯ್ಲೆಟ್ ಮೇಲಿನ ಜಾಗವನ್ನೂ ಬಿಡದೆ ವಾಷಿಂಗ್ ಮೆಷಿನ್ ಇಟ್ಟಿರುವ ಕುರಿತು ಮಾತನಾಡಿದ್ದಾರೆ.
ಆದರೆ ಇಷ್ಟು ಇಕ್ಕಟ್ಟಿರುವ ಅಪಾರ್ಟ್ಮೆಂಟ್ನ ಮನೆಗೆ ತಿಂಗಳಿಗೆ 1.35 ಲಕ್ಷ ರೂ. ಬಾಡಿಗೆ, 4 ಲಕ್ಷ ರೂ. ಸೆಕ್ಯೂರಿಟಿ ಡೆಪಾಸಿಟ್ ಮಾಡಬೇಕು, 1.4 ಲಕ್ಷ ರೂ. ದಲ್ಲಾಳಿಗಳಿಗೆ ನೀಡಬೇಕು.
Only in Mumbai, you can front load your washing machine while top loading your commode.
At an affordable price of 1.35L per month! pic.twitter.com/texU5hUwMC
— Utkarsh Gupta (@PaneerMakkhani) September 22, 2024
ಕಮೋಡ್ ಹಾಗೂ ವಾಷಿಂಗ್ ಮೆಷಿನ್ನನ್ನು ಒಂದೇ ಸಮಯದಲ್ಲಿ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಈ ಅಪಾರ್ಟ್ಮೆಂಟ್ನಲ್ಲಿ ಎರಡು ಮಲಗುವ ಕೋಣೆಗಳು, ಎರಡು ಬಾತ್ರೂಂಗಳಿದ್ದು, ಬಾಲ್ಕನಿಗಳಿಲ್ಲ, ಇದು ಸಂಪೂರ್ಣವಾಗಿ ಸುಸಜ್ಜಿತವಾಗಿದೆ ಹಾಗೂ ಬಾಡಿಗೆಯೂ ಸರಿ ಇದೆ ಎಂದು ಹೌಸಿಂಗ್ ಡಾಟ್ಕಾಮ್ ಹೇಳಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ