Expensive Condom: ವಿಶ್ವದ ಅತ್ಯಂತ ದುಬಾರಿ ಕಾಂಡೋಮ್ 44000 ರೂ.ಗೆ ಹರಾಜಿನಲ್ಲಿ ಮಾರಾಟ; ಏನಿದರ ವಿಶೇಷತೆ ಗೊತ್ತಾ?
200 ವರ್ಷಗಳಷ್ಟು ಹಳೆಯದಾದ ಕಾಂಡೋಮ್ವೊಂದು ಇತ್ತೀಚೆಗಷ್ಟೆ ವಿಶ್ವದ ಅತ್ಯಂತ ದುಬಾರಿ ಕಾಂಡೋಮ್ ಎಂದು ಗುರುತಿಸಲಾಗಿದ್ದು, ಇದು £460 ಅಂದರೆ ಅಂದಾಜು ರೂ 44,000 ಗೆ ಮಾರಾಟವಾಗಿದೆ. ಯಾಕಿಷ್ಟು ದುಬಾರಿ ಇದರ ವಿಶೇಷತೆ ಏನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಸುರಕ್ಷಿತ ಲೈಂಗಿಕತೆ, ಜನನ ನಿಯಂತ್ರಣಕ್ಕಾಗಿ ಕಾಂಡೋಮ್ ಬಳಕೆ ಮಾಡಲಾಗುತ್ತದೆ. ಆದ್ರೆ ಎಂದಾದರೂ ವಿಶ್ವದ ಅತ್ಯಂತ ದುಬಾರಿ ಕಾಂಡೋಮ್ ಬಗ್ಗೆ ಕೇಳಿದ್ದೀರಾ? ಇದೀಗ 200 ವರ್ಷಗಳಷ್ಟು ಹಳೆಯದಾದ ಕಾಂಡೋಮ್ ಹರಾಜಿನಲ್ಲಿ ಮಾರಾಟವಾಗಿದೆ. ಇದರ ಬೆಲೆ ಕೇಳಿದ್ರೆ ನೀವು ಶಾಕ್ ಆಗುವುದಂತೂ ಖಂಡಿತಾ..ಯಾಕಿಷ್ಟು ದುಬಾರಿ ? ಏನಿದರ ವಿಶೇಷತೆ ಏನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
200 ವರ್ಷಗಳಷ್ಟು ಹಳೆಯದಾದ ಕಾಂಡೋಮ್ ಅನ್ನು ಇತ್ತೀಚೆಗಷ್ಟೆ ವಿಶ್ವದ ಅತ್ಯಂತ ದುಬಾರಿ ಕಾಂಡೋಮ್ ಎಂದು ಗುರುತಿಸಲಾಗಿದ್ದು, ಇದು £460 ಅಂದರೆ ಅಂದಾಜು ರೂ 44,000 ಗೆ ಮಾರಾಟವಾಗಿದೆ. ಇದು ಆಧುನಿಕ ಲ್ಯಾಟೆಕ್ಸ್ ಕಾಂಡೋಮ್‌ಗಳಿಗಿಂತ ಭಿನ್ನವಾಗಿದ್ದು, ಇದನ್ನು ಕುರಿಗಳ ಕರುಳಿನಿಂದ ತಯಾರಿಸಲಾಗಿದೆ, ಇದಲ್ಲದೇ 18 ನೇ ಅಥವಾ 19 ನೇ ಶತಮಾನದಷ್ಟು ಹಿಂದಿನದು ಎಂದು ವರದಿಯಾಗಿದೆ.
ಇದನ್ನೂ ಓದಿ: ಪತ್ನಿ ಬಿಕಿನಿ ತೊಟ್ಟು ಓಡಾಡಲು 418 ಕೋಟಿ ರೂ. ದ್ವೀಪ ಖರೀದಿಸಿದ ಪತಿ
ಹಿಂದಿನ ಕಾಲದಲ್ಲಿ ಕಾಂಡೋಮ್ಗಳನ್ನು ಕುರಿ, ಹಂದಿ, ಕರು ಮತ್ತು ಮೇಕೆಗಳಂತಹ ಪ್ರಾಣಿಗಳ ಕರುಳಿನಿಂದ ತಯಾರಿಸಲಾಗುತ್ತಿತ್ತು. ಆದ್ದರಿಂದಲೇ ಈ ಕಾಂಡೋಮ್ ಸಾಕಷ್ಟು ದುಬಾರಿಯಾಗಿದ್ದು, ಶ್ರೀಮಂತರಿಗೆ ಮಾತ್ರ ಇದನ್ನು ಬಳಸುತ್ತಿದ್ದರು. 19 cm (7 ಇಂಚುಗಳು) ಅಳತೆಯ ಈ ಕಾಂಡೋಮ್ ಅನ್ನು ಫ್ರಾನ್ಸ್‌ನಲ್ಲಿ ಕಂಡುಹಿಡಿಯಲಾಗಿದ್ದು, ಇದನ್ನು ಇದೀಗ ಹರಾಜಿನಲ್ಲಿ 44000 ರೂ.ಗೆ ಹರಾಜಿನಲ್ಲಿ ಮಾರಾಟ ಮಾಡಲಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:18 pm, Thu, 26 September 24