ಪುಣೆಯ ಇವೈ ನಲ್ಲಿ ಉದ್ಯೋಗಿಯಾಗಿದ್ದ ಚಾರ್ಟರ್ಡ್ ಅಕೌಂಟೆಂಟ್ ಅನ್ನಾ ಸೆಬಾಸ್ಟಿಯನ್ (26) ಅವರು “ಕೆಲಸದ ಒತ್ತಡ” ದಿಂದ ನಿಧನರಾಗಿದ್ದಾರೆ ಎಂದು ಅವರ ತಾಯಿ ಅನಿತಾ ಆಗಸ್ಟಿನ್ ಅವರು ಇವೈ ಇಂಡಿಯಾ ಅಧ್ಯಕ್ಷರಿಗೆ ಬರೆದ ಇಮೇಲ್ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಟಾರ್ಗೆಟ್ ತಲುಪೋ ಭರದಲ್ಲಿ ರಾತ್ರಿ ಹಗಲೆನ್ನದೇ ನನ್ನ ಮಗಳಿಂದ ಕೆಲಸ ಮಾಡಿಸಿದ್ದಾರೆ. ಇದರಿಂದಾಗಿ ನನ್ನ ಮಗಳು ಸಾವನ್ನಪ್ಪಿದ್ದಾಳೆ ಎಂದು ತಾಯಿ ಇಮೇಲ್‌ನಲ್ಲಿ ಬರೆದುಕೊಂಡಿದ್ದಾರೆ.
ಮೃತ ಯುವತಿ ಅನ್ನಾ 2023 ರಲ್ಲಿ ತಮ್ಮ CA ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ, ಮಾರ್ಚ್ 2024 ರಲ್ಲಿ EY ಪುಣೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಇದೀಗ ಕೆಲಸಕ್ಕೆ ಸೇರಿಕೊಂಡ ಕೇವಲ 4 ತಿಂಗಳಲ್ಲಿ ನನ್ನ ಮಗಳು ಸಾವನ್ನಪ್ಪಿದ್ದಾಳೆ ಎಂದು EY ಕಂಪೆನಿಯ ವಿರುದ್ದ ಅನ್ನಾ ತಾಯಿ ದೂರು ದಾಖಲಿಸಿದ್ದಾರೆ. ಕಂಪೆನಿಗೆ ಸೇರಿದ ಕೂಡಲೇ ಕೆಲಸದ ಹೊರೆ, ಹೊಸ ಪರಿಸರ ಮತ್ತು ಆತಂಕ, ನಿದ್ರಾಹೀನತೆ ಮತ್ತು ಒತ್ತಡವನ್ನು ಅನುಭವಿಸಲು ಪ್ರಾರಂಭಿಸಿದ್ದಳು, ಆದರೆ ಕಠಿಣ ಪರಿಶ್ರಮ ಯಶಸ್ಸಿಗೆ ಹಾದಿ ನಂಬುತ್ತಾ ಅವಳು ತನ್ನನ್ನು ತಾನೇ ಬಲಿ ತೆಗೆದುಕೊಂಡಿದ್ದಾಳೆ” ಎಂದು ಇಮೇಲ್‌ನಲ್ಲಿ ಬರೆಯಲಾಗಿದೆ.
ಇದನ್ನೂ ಓದಿ: ಸತತ 18 ಗಂಟೆಗಳ ಕಾಲ ಕೆಲಸ ಮಾಡಿ ಬೈಕ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಡೆಲಿವರಿ ಏಜೆಂಟ್ ಸಾವು
“ಈ ಸಂಸ್ಥೆಯ ಅತಿಯಾದ ಅತಿಯಾದ ಕೆಲಸದ ಹೊರೆಯಿಂದಾಗಿ ಅನೇಕ ಉದ್ಯೋಗಿಗಳು ಸಂಸ್ಥೆಯನ್ನು ತೊರೆದಿದ್ದರು. ಆಕೆ ಈಕೆ ಕೆಲಸಕ್ಕೆ ಸೇರಿರೋ ನಾಲ್ಕು ತಿಂಗಳಿನಲ್ಲಿಯೇ ಸಾವನ್ನಪ್ಪಿದ್ದಾಳೆ. ಇನ್ನೂ ದುರಂತದ ಸಂಗತಿ ಎಂದರೆ, ಆಕೆಯ ಅಂತ್ಯಕ್ರಿಯೆಗೆ ಕಂಪೆನಿಯ ಒಬ್ಬರೇ ಒಬ್ಬರು ಅಧಿಕಾರಿಗಳು ಬರಲಿಲ್ಲ ಎನ್ನುವುದು!” ಎಂದು ಆಕೆಯ ತಾಯಿ ನೋವನ್ನು ಹೊರ ಹಾಕಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ