ಮಿಸ್ ಯುನಿವರ್ಸ್ ಬ್ಯೂನಸ್ ಐರಿಸ್ ಕಿರೀಟ ಮುಡಿಗೇರಿಸಿಕೊಂಡ 60ರ ಮಹಿಳೆ

|

Updated on: Apr 27, 2024 | 5:50 PM

ಅರ್ಜೆಂಟೀನಾದ ಬ್ಯೂನಸ್ ಐರಿಸ್​​ನ ರಾಜಧಾನಿ ಲಾ ಪ್ಲಾಟಾದಲ್ಲಿ ನಡೆದ 2024ರ ಮಿಸ್‌ ಯೂನಿವರ್ಸ್ ಬ್ಯೂನಸ್ ಐರಿಸ್ ಸ್ಪರ್ಧೆಯಲ್ಲಿ 60 ವರ್ಷದ ಮಹಿಳೆ ವಿಜೇತರಾಗಿ ಜಗತ್ತಿನ ಗಮನಸೆಳೆದಿದ್ದಾರೆ. ವೃತ್ತಿಯಲ್ಲಿ ವಕೀಲ ಮತ್ತು ಪತ್ರಕರ್ತೆಯಾಗಿರುವ, ಅಲೆಜಾಂಡ್ರಾ ತನ್ನ 60 ನೇ ವಯಸ್ಸಿನಲ್ಲಿ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯನ್ನು ಗೆದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಮಿಸ್ ಯುನಿವರ್ಸ್ ಬ್ಯೂನಸ್ ಐರಿಸ್ ಕಿರೀಟ ಮುಡಿಗೇರಿಸಿಕೊಂಡ 60ರ ಮಹಿಳೆ
ಮಿಸ್ ಯುನಿವರ್ಸ್ ಬ್ಯೂನಸ್ ಐರಿಸ್ ಕಿರೀಟ ಮುಡಿಗೇರಿಸಿಕೊಂಡ 60ರ ಮಹಿಳೆ
Follow us on

ಅರ್ಜೆಂಟೀನಾ: ಮಿಸ್​ ವರ್ಲ್ಡ್​​​, ಮಿಸ್​​ ಯುನಿವರ್ಸ್ ಮುಂತಾದ ಸೌಂದರ್ಯ ಸ್ಪರ್ಧೆದಲ್ಲಿ ಹದಿಹರೆಯದ ಸುರಸುಂದರಿಯರೇ ಭಾಗವಹಿಸುತ್ತಾರೆ. ಆದರೆ ಇಲ್ಲೊಬ್ಬಳು ಮಹಿಳೆ ತನ್ನ 60 ನೇ ವಯಸ್ಸಿನಲ್ಲೂ ಯುವತಿಯರೇ ನಾಚುವಂತೆ ಮಿಸ್ ಯುನಿವರ್ಸ್ ಬ್ಯೂನಸ್ ಐರಿಸ್ ಕಿರೀಟ ಮುಡಿಗೇರಿಸಿಕೊಂಡಿದ್ದಾಳೆ. 60 ನೇ ವಯಸ್ಸಿನಲ್ಲೂ ಈಕೆಯ ಸೌಂದರ್ಯ ಕಂಡು ಪ್ರೇಕ್ಷಕರು ಶಾಕ್​ ಆಗಿದ್ದಾರೆ.

ಅರ್ಜೆಂಟೀನಾದ ಬ್ಯೂನಸ್ ಐರಿಸ್​​ನ ರಾಜಧಾನಿ ಲಾ ಪ್ಲಾಟಾದಲ್ಲಿ ನಡೆದ 2024ರ ಮಿಸ್‌ ಯೂನಿವರ್ಸ್ ಬ್ಯೂನಸ್ ಐರಿಸ್ ಸ್ಪರ್ಧೆಯಲ್ಲಿ 60 ವರ್ಷದ ಮಹಿಳೆ ವಿಜೇತರಾಗಿ ಜಗತ್ತಿನ ಗಮನಸೆಳೆದಿದ್ದಾರೆ. ವೃತ್ತಿಯಲ್ಲಿ ವಕೀಲ ಮತ್ತು ಪತ್ರಕರ್ತ, ಅಲೆಜಾಂಡ್ರಾ ತನ್ನ 60 ನೇ ವಯಸ್ಸಿನಲ್ಲಿ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯನ್ನು ಗೆದ್ದ ಮೊದಲ ಮಹಿಳೆ ಎಂಬ ದಾಖಲೆಯನ್ನೂ ಪಡೆದಿದ್ದಾರೆ.

ಟ್ವಿಟರ್​​ನಲ್ಲಿ ಹಂಚಿಕೊಂಡ ವೀಡಿಯೊಗಳ ಪ್ರಕಾರ, ಈ ಗೆಲುವಿನೊಂದಿಗೆ, ರೊಡ್ರಿಗಸ್ ಮೇ 2024 ರಲ್ಲಿ ಮಿಸ್ ಯೂನಿವರ್ಸ್ ಅರ್ಜೆಂಟೀನಾ ರಾಷ್ಟ್ರೀಯ ಆಯ್ಕೆಯಲ್ಲಿ ಬ್ಯೂನಸ್ ಐರಿಸ್ ಅನ್ನು ಪ್ರತಿನಿಧಿಸುತ್ತಾರೆ. ಅಲ್ಲಿಯೂ ಗೆದ್ದರೆ ಮಿಸ್ ಯೂನಿವರ್ಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗುತ್ತಾರೆ. ಈ ಸ್ಪರ್ಧೆಯು ಸೆಪ್ಟೆಂಬರ್ 28, 2024 ರಂದು ಮೆಕ್ಸಿಕೋದಲ್ಲಿ ನಡೆಯಲಿದೆ.

ಇದನ್ನೂ ಓದಿ: ಅಳಿಯನ ಮದುವೆ ಸಂಭ್ರಮದಲ್ಲಿ ಡಾನ್ಸ್ ಮಾಡುತ್ತಿದ್ದ ಮಾವ ಹೃದಯಾಘಾತದಿಂದ ಸಾವು

ಆದರೆ ಮಿಸ್ ಯೂನಿವರ್ಸ್ ಸಂಸ್ಥೆ ಕಳೆದ ವರ್ಷ ಸ್ಪರ್ಧಿಗಳ ವಯಸ್ಸಿನ ಮಿತಿಯನ್ನು ತೆಗೆದುಹಾಕುವ ನಿರ್ಧಾರವನ್ನು ತೆಗೆದುಕೊಂಡಿತು. 18-28 ವರ್ಷ ವಯಸ್ಸಿನ ಮಹಿಳೆಯರು ಈ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ. ಇತ್ತೀಚೆಗಷ್ಟೇ ಡೊಮಿನಿಕನ್ ರಿಪಬ್ಲಿಕ್ ನ 47 ವರ್ಷದ ಹೈಡಿ ಕ್ರೂಜ್ ನಿಯಮಗಳನ್ನು ಬದಲಿಸಿ ದೇಶದ ಸೌಂದರ್ಯ ರಾಣಿಯ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಹೈಡಿ ಕ್ರೂಜ್ ಈ ವರ್ಷದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ತನ್ನ ದೇಶವನ್ನು ಪ್ರತಿನಿಧಿಸಲಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ