Mother : ಕಿಶೋರ್ ಕೆ. ಸ್ವಾಮಿ ಎಂಬ ವ್ಯಕ್ತಿ ಈ ಫೋಟೋ ಟ್ವೀಟ್ ಮಾಡಿ, ‘ನಾನು ಮನೆಗೆ ಹೋಗುವುದರೊಳಗೆ ನನ್ನ 70 ವರ್ಷದ ನನ್ನ ತಾಯಿ ನನ್ನ ಹಾಸಿಗೆಯನ್ನು ಅಣಿಗೊಳಿಸಿರುತ್ತಾರೆ. ಗೃಹಿಣಿಯ ಶಕ್ತಿ ಎಂದರೆ ಇದು. ಹಾಗಂತ ಆಕೆ ಇದನ್ನು ಕಡ್ಡಾಯವಾಗಿ ಮಾಡಲೇಬೇಕೆಂದೇನೂ ಇಲ್ಲ. ಆದರೆ ಇದನ್ನಾಕೆ ಪ್ರೀತಿಯಿಂದ ಮಾಡುತ್ತಾರೆ. ನಮ್ಮ ಧರ್ಮವು ರೂಢಿಸಿಕೊಂಡಿರುವ ಇಂಥ ಮೌಲ್ಯವ್ಯವಸ್ಥೆಯಿಂದಾಗಿಯೇ ಸಮಾಜವು ರಕ್ಷಿಸಲ್ಪಡುತ್ತದೆ’ ಹೀಗೆಂದು ನೋಟ್ ಬರೆದಿದ್ದಾರೆ. ಇವರ ಈ ನಡೆವಳಿಕೆ ಮತ್ತು ಆಲೋಚನಾ ವಿಧಾನದಿಂದ ನೆಟ್ಟಿಗರು ಕಿಶೋರ್ ಎಂಬುವವರನ್ನು ತರಾಟೆಗೆ ತೆರೆದುಕೊಂಡಿದ್ದಾರೆ.
Though 70+ my mom ensures that when I reach home , my bed is comfortable. The power of a home maker. There is no compulsion for her to do it. Yet she does it out of love. The value system that our dharma has inculcated protects this society. pic.twitter.com/t58Fir5IrT
ಇದನ್ನೂ ಓದಿ— kishore k swamy ?? (@sansbarrier) July 7, 2023
ಸುಮಾರು 73,000 ಜನರು ಈ ಟ್ವೀಟ್ ನೋಡಿದ್ದಾರೆ. ಸುಮಾರು 500 ಜನರು ಕೋಟ್ ಮಾಡಿದ್ದಾರೆ. ಸುಮಾರು 40 ಜನರು ರೀಟ್ವೀಟ್ ಮಾಡಿದ್ದಾರೆ. ಇದು ಧರ್ಮವಲ್ಲ, ಧರ್ಮದ ಹೆಸರಲ್ಲಿ ನೀವು ಹಿರಿಯರನ್ನು ಶೋಷಿಸುತ್ತಿದ್ದೀರಿ ಎಂದಿದ್ದಾರೆ ಕೆಲವರು. ಈ ವಯಸ್ಸಿನಲ್ಲಿ ನೀವು ನಿಮ್ಮ ತಾಯಿಯ ಹಾಸಿಗೆಯನ್ನು ಅಣಿಗೊಳಿಸಬೇಕೇ ವಿನಾ ಅವರಿಂದ ಇದೆಲ್ಲವನ್ನು ನಿರೀಕ್ಷಿಸಬಾರದು. ಇದು ನಾಚಿಕೆ ತರುವಂಥ ವಿಷಯ, ಆದರೆ ಇದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೀರಿ, ಛೆ… ಎಂದು ಝಾಡಿಸಿದ್ದಾರೆ ಒಬ್ಬರು.
ಇದನ್ನೂ ಓದಿ : Viral Video: ಭಾರತದ ಉಕ್ಕಿನ ಮಹಿಳೆ; ಈಕೆಯ ಸಾಹಸಕ್ಕೆ ದಂಗಾಗಿರುವ ನೆಟ್ಟಿಗರು
ತಾಯ್ತನವನ್ನೇ ಅರ್ಥ ಮಾಡಿಕೊಳ್ಳದ ಕೆಲ ಹೆಣ್ಣುಮಕ್ಕಳು ಹೀಗೆ ಪ್ರತಿಕ್ರಿಯಿಸಿದ್ದು ಅಚ್ಚರಿ ತಂದಿದೆ. ನಿಮ್ಮ ತಾಯಿಯೂ ನಿಮಗೂ ಹೀಗೆ ಮಾಡಿದರೆ ಖಂಡಿತ ನೀವೂ ಸಂತೋಷಪಡುತ್ತೀರಿ. ಆಕೆಗೆ ಹೀಗೆಲ್ಲ ಮಾಡಬೇಡ ಎಂದು ನೀವು ಹೇಳಬೇಡಿ. ಅದು ಆಕೆಯ ಸಂತೋಷ ಎಂದಿದ್ದಾರೆ ಒಬ್ಬರು. ಅವರಾಗಿಯೇ ಅದನ್ನು ಖುಷಿಯಿಂದ ಮಾಡುವಾಗ ಯಾಕೆ ಬೇಡ ಎನ್ನಬೇಕು ಎಂದು ಕೆಲವರಷ್ಟೇ ಪ್ರಶ್ನಿಸಿದ್ದಾರೆ. ಆದರೆ ಅನೇಕರು ಚೆನ್ನಾಗಿ ಬೈದಿದ್ದಾರೆ.
ನೀವೇನಂತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 2:52 pm, Tue, 11 July 23