Lucky Draw: ಲಾಟರಿಯಲ್ಲಿ 31 ಕೋಟಿ ರೂ. ಗೆದ್ದ 73ರ ವೃದ್ಧೆ

|

Updated on: Apr 16, 2024 | 11:55 AM

ಲಾಟರಿ ಟಿಕೇಟ್​​ ಖರೀದಿಸಿ ಅದೃಷ್ಟ ಕೈ ಹಿಡಿದರೆ ಬಡ ಜನರು ಕೂಡ ದಿನ ಬೆಳಗಾಗುವುದರ ಒಳಗೆ ಕೋಟ್ಯಾಧಿಪತಿಗಳಾಗುತ್ತಾರೆ. ಇದೀಗ 73ನೇ ವಯಸ್ಸಿನಲ್ಲಿ ಲಾಟರಿಯಲ್ಲಿ ಬರೋಬ್ಬರಿ 31 ಕೋಟಿ ರೂ. ಗೆದ್ದ ವೃದ್ಧೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿದ್ದಾರೆ.

Lucky Draw: ಲಾಟರಿಯಲ್ಲಿ 31 ಕೋಟಿ ರೂ. ಗೆದ್ದ 73ರ ವೃದ್ಧೆ
Follow us on

ರಾತ್ರೋರಾತ್ರಿ ಕೋಟ್ಯಾಧಿಪತಿಯಾಗುವವರು ಜಗತ್ತಿನಲ್ಲಿ ಅನೇಕರಿದ್ದಾರೆ. ಇದೆಲ್ಲವೂ ಸಾಧ್ಯವಾಗಲು ಕಾರಣ ಲಾಟರಿ ಟಿಕೆಟ್. ಹೌದು ಲಾಟರಿ ಟಿಕೇಟ್​​ ಖರೀದಿಸಿ ಅದೃಷ್ಟ ಕೈ ಹಿಡಿದರೆ ಬಡ ಜನರು ಕೂಡ ದಿನ ಬೆಳಗಾಗುವುದರ ಒಳಗೆ ಕೋಟ್ಯಾಧಿಪತಿಗಳಾಗುತ್ತಾರೆ. ಇದೀಗ 73ನೇ ವಯಸ್ಸಿನಲ್ಲಿ ಲಾಟರಿಯಲ್ಲಿ ಬರೋಬ್ಬರಿ 31 ಕೋಟಿ ರೂ. ಗೆದ್ದ ವೃದ್ಧೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿದ್ದಾರೆ.

ಮಹಿಳೆಯ ಹೆಸರು ರೋಸ್ ಡಾಯ್ಲ್. ಆಕೆಗೆ 73 ವರ್ಷ. ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನ ನಿವಾಸಿ. ವೆಬ್‌ಸೈಟ್ ಮೆಟ್ರೋದ ವರದಿಯ ಪ್ರಕಾರ, ರೋಸ್ ಕಳೆದ 44 ವರ್ಷಗಳಿಂದ ತನ್ನ ಪತಿ ಹಾಗೂ ಮಕ್ಕಳೊಂದಿಗೆ ಪುಟ್ಟ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇವರ ಆರ್ಥಿಕ ಸ್ಥಿತಿ ಅಷ್ಟೊಂದು ಚೆನ್ನಾಗಿರದೇ ಇದ್ದುದರಿಂದ ಈ ವಯಸ್ಸಿನಲ್ಲೂ ಎರಡು ಕೆಲಸ ಮಾಡಬೇಕಿತ್ತು. ಮೊದಲು ಆಕೆ ವಿಮಾ ಕಂಪನಿಯಲ್ಲಿ ಏಜೆಂಟ್ ಆಗಿ ಕೆಲಸ ಮಾಡಿ ಬಳಿಕ ಶಾಲೆಯಲ್ಲಿ ಮಕ್ಕಳಿಗೆ ಅಡುಗೆ ಮಾಡುತ್ತಿದ್ದರು.

ಇದನ್ನೂ ಓದಿ: ಸ್ವಂತ ಕಂಪನಿಯಲ್ಲಿ ಕೆಲಸಕ್ಕಾಗಿ 2 ಗಂಟೆ ಸರತಿ ಸಾಲಿನಲ್ಲಿ ನಿಂತಿದ್ದ ಈ ಬಿಲಿಯನೇರ್, ಯಾಕೆ ಗೊತ್ತಾ?

ವರದಿಗಳ ಪ್ರಕಾರ, ರೋಸ್ ಒಮಾಜ್ ಎಂಬ ಚಾರಿಟಿಯ ಸದಸ್ಯರಾಗಿದ್ದಾರೆ. ಆ ಕಂಪನಿಯಲ್ಲಿ ಪ್ರತಿ ತಿಂಗಳು ರೂ.1000 ಹೂಡಿಕೆ ಮಾಡುತ್ತಾರೆ. ಇದರಲ್ಲಿ ಜನರಿಗೆ ಸ್ವಲ್ಪ ಹಣ ಅಥವಾ ಇತರ ಉಡುಗೊರೆಗಳನ್ನು ನೀಡಲಾಗುತ್ತದೆ. ಆದರೆ ಈ ಲಕ್ಕಿ ಡ್ರಾದಲ್ಲಿ ರೋಸ್ ಒಂದು ಲಕ್ಷ ಪೌಂಡ್ ಅಂದರೆ ಸುಮಾರು 31 ಕೋಟಿ ರೂ. ಉಡುಗೊರೆಯಾಗಿ, ಆಕೆಗೆ ಕಾರ್ನ್‌ವಾಲ್‌ನಲ್ಲಿ ಐದು ಬೆಡ್‌ರೂಮ್‌ಗಳ ಐಷಾರಾಮಿ ಮನೆಯನ್ನು ನೀಡಲಾಗಿದೆ. ಈ ಮನೆ ಅನೇಕ ಸೌಕರ್ಯಗಳನ್ನು ಹೊಂದಿದೆ. ಇದು ಸುಂದರವಾದ ಉದ್ಯಾನ ಮತ್ತು ಹಾಟ್ ಟಬ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ಹೊಂದಿದೆ.

ಇಷ್ಟು ದೊಡ್ಡ ಬಹುಮಾನ ಬರುತ್ತದೆ ಎಂದು ಕನಸಲ್ಲೂ ಎಣಿಸಿರಲಿಲ್ಲ, ಈ ಹಿಂದೆ ಹಲವು ಬಾರಿ ಲಕ್ಕಿ ಡ್ರಾದಲ್ಲಿ ಹಣ ಹೂಡಿದ್ದೆ, ಆದರೆ ಇಲ್ಲಿಯವರೆಗೆ ಏನೂ ಬಂದಿಲ್ಲ. ಈ ಬಂಪರ್ ಪ್ರಶಸ್ತಿ ತನ್ನ ಬದುಕನ್ನೇ ಬದಲಿಸಿದೆ. ಇದು ಪವಾಡಕ್ಕಿಂತ ಕಡಿಮೆ ಏನಲ್ಲ ಎಂದಿದ್ದಾರೆ ರೋಸ್.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: